January 29, 2026

Newsnap Kannada

The World at your finger tips!

yuniform

ಸಮವಸ್ತ್ರದಲ್ಲೇ ಫೋಟೋಶೂಟ್ : ಮಹಿಳಾ ಎಸ್ ಐ ಮೇಲೆ ಇಲಾಖೆಯ ಕೆಂಗಣ್ಣು

Spread the love

ಮಹಿಳಾ ಸಬ್ ಇನ್ಸ್ ಪೆಕ್ಟರ್ ಒಬ್ಬರು ತಮ್ಮ ಸಮವಸ್ತ್ರದಲ್ಲಿಯೇ ಫೋಟೋಶೂಟ್ ಮಾಡಿಕೊಂಡು ಎಡವಟ್ಟು ಮಾಡಿಕೊಂಡಿದ್ದಾರೆ

ಮಹಿಳಾ ಸಬ್ ಇನ್ಸ್ ಪೆಕ್ಟರ್ ರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.

ಈ ಫೋಟೋ ಪೊಲೀಸ್ ಇಲಾಖೆಯಲ್ಲೂ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಕೆಲ ದಿನಗಳ ಹಿಂದೆ ಕೋಯಿಕ್ಕೋಡ್ ನಗರದ ಮಹಿಳಾ ಸಬ್ ಇನ್ಸ್ ಪೆಕ್ಟರ್ ಯೂನಿಫಾರ್ಮ್ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದರು. ಸೇವ್ ದಿ ಡೆಟ್ ಎಂಬ ಟ್ಯಾಗ್ ಲೈನ್ ನೊಂದಿಗೆ ಫೋಟೋ ಹರಿದಾಡಲು ಆರಂಭವಾಗಿದೆ.

ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಸಮವಸ್ತ್ರವನ್ನು ಧರಿಸಿರುವ ಫೋಟೋಗಳನ್ನು ಪೋಸ್ಟ್ ಮಾಡದಿರುವಂತೆ 2015ರಲ್ಲಿಯೇ ಕೇರಳ ಡಿಜಿಪಿ ಆಗಿದ್ದ ಟಿ.ಪಿ ಸೆನ್ ಕುಮಾರ್ ಅವರು ಆದೇಶ ಹೊರಡಿಸಿದ್ದರು. ಅಲ್ಲದೆ ಸೋಶಿಯಲ್ ಮೀಡಿಯಾದಲ್ಲಿ ಸಂವಹನ ನಡೆಸುವುದಕ್ಕೆ ಕೆಲವೊಂದಿಷ್ಟು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದರು.

error: Content is protected !!