December 22, 2024

Newsnap Kannada

The World at your finger tips!

NEXT , NEET , CET

PG NEET Cancelled: Get ready to face the 'Next' exam soon ಪಿಜಿ ನೀಟ್ ರದ್ದು : ಇನ್ಮುಂದೆ 'ನೆಕ್ಸ್ಟ್' ಪರೀಕ್ಷೆ ಎದುರಿಸಲು ಸಿದ್ದರಾಗಿ

ಪಿಜಿ ನೀಟ್ ರದ್ದು : ಇನ್ಮುಂದೆ ‘ನೆಕ್ಸ್ಟ್’ ಪರೀಕ್ಷೆ ಎದುರಿಸಲು ಸಿದ್ದರಾಗಿ

Spread the love

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ ಕೋರ್ಸ್ ಗೆ ಪ್ರವೇಶ ಪಡೆಯಲು ಕೇಂದ್ರವು ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ -ಪಿಜಿ ನೀಟ್ ರದ್ದು ಮಾಡಿ ಪರ್ಯಾಯವಾಗಿ ರಾಷ್ಟ್ರೀಯ ಎಕ್ಸಿಟ್ ಟೆಸ್ಟ್ -ನೆಕ್ಸ್ಟ್ ನಡೆಸಲು ನಿರ್ಧರಿಸಲಾಗಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗವು ನವದೆಹಲಿಯಲ್ಲಿ ಇತ್ತೀಚಿಗೆ ವೈದ್ಯಕೀಯ ಕೋರ್ಸ್ ನಡೆಸುತ್ತಿರುವ ವಿವಿಗಳ ಕುಲಪ್ತಿಗಳೊಂದಿಗೆ ಸಭೆ ನಡೆಸಿ, ಚರ್ಚಿಸಿ ಈ ತೀರ್ಮಾನ ಕೈಗೊಂಡಿದೆ. ಅದರಂತೆ ಮುಂದಿನ ಶೈಕ್ಷಣಿಕ ವರ್ಷದಿಂದಲೇ ರಾಷ್ಟ್ರೀಯ ಎಕ್ಸಿಟ್ ಟೆಸ್ಟ್ ಜಾರಿಗೊಳಿಸಲು ನಿರ್ಧರಿಸಲಾಗಿದೆ.

ಪ್ರಸ್ತುತ ಎಂಬಿಬಿಎಸ್ ಅಂತಿಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನೆಕ್ಸ್ಟ್ ಪರೀಕ್ಷೆಯನ್ನು ಬರೆಯಬಹುದು . ಮುಂದಿನ ವಾರ ಕೇಂದ್ರ ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಎಂಬಿಬಿಎಸ್ ಪೂರ್ಣಗೊಳಿಸಿದವರು ಮುಂದಿನ ಪಿಜಿ ವ್ಯಾಸಂಗಕ್ಕಾಗಿ ಮೆಡಿಕಲ್ ಕೌನ್ಸೆಲಿಂಗ್ ಕಮಿಟಿ ನಡೆಸುವ ಪರೀಕ್ಷೆ ಬರೆಯಬೇಕಿದ್ದು, ನಂತರ ಕೇಂದ್ರೀಕೃತ ಕೌನ್ಸೆಲಿಂಗ್ ಮೂಲಕ ಸೀಟು ಹಂಚಿಕೆ ನಡೆಸಲಾಗುತ್ತದೆ. ನೆಕ್ಸ್ಟ್ ಪರೀಕ್ಷೆಯನ್ನು ಎರಡು ವಿಭಾಗದಲ್ಲಿ ನಡೆಸಲಾಗುತ್ತದೆ. ಒಂದು ವಿಭಾಗದಲ್ಲಿ ಎಂಬಿಬಿಎಸ್ ಓದುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು.

ಮತ್ತೊಂದು ವಿಭಾಗದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿ ಇಂಟರ್ನ್ ಶಿಪ್ ಮಾಡಿದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ.ಗೆಜ್ಜಲಗೆರೆ ಕಾಲೋನಿ ಬಳಿ ಕಾರುಗಳ ಡಿಕ್ಕಿ ಮೂವರು ಸ್ಥಳದಲ್ಲೇ ಸಾವು : ಓರ್ವನಿಗೆ ಗಂಭೀರ ಗಾಯ

ಎಂಬಿಬಿಎಸ್ ಅಂತಿಮ ವರ್ಷದ ಪರೀಕ್ಷೆಯ ಭಾಗದ ರೀತಿಯಲ್ಲಿ ನೆಕ್ಸ್ಟ್ ಪರೀಕ್ಷೆ ನಡೆಸಲಿದ್ದು, ವೈದ್ಯಕೀಯ ವೃತ್ತಿ ಆರಂಭಕ್ಕೆ ಇದೊಂದು ಲೈಸೆನ್ಸ್ ರೀತಿ ಪರಿಗಣಿಸಲು ರಾಷ್ಟ್ರೀಯ ವೈದ್ಯಕೀಯ ಆಯೋಗ ನಿರ್ಧರಿಸಿದೆ.

Copyright © All rights reserved Newsnap | Newsever by AF themes.
error: Content is protected !!