March 12, 2026

Newsnap Kannada

The World at your finger tips!

petrol

8ನೇ ದಿನವೂ ಪೆಟ್ರೋಲ್ ಬೆಲೆ ಏರಿಕೆ: 100 ರು ಗಡಿ ದಾಟಿದ ಡಿಸೇಲ್ ದರ

Spread the love

ಸತತ ಎಂಟನೇ ದಿನವೂ ತೈಲ ಬೆಲೆ ಏರಿಕೆ ಕಂಡಿದೆ. ದೆಹಲಿಯಲ್ಲಿ ಪೆಟ್ರೋಲ್ 84 ಪೈಸೆ ಮತ್ತು ಡಿಸೇಲ್‌ 85 ಪೈಸೆ ಹೆಚ್ಚಳವಾಗಿದೆ.

ಈ ಮೂಲಕ ದೆಹಲಿಯಲ್ಲಿ ಪೆಟ್ರೋಲ್ ಲೀಟರ್​ಗೆ 101.01 ಮತ್ತು ಡಿಸೇಲ್ ಬೆಲೆ 92.27 ರೂಪಾಯಿ ಆಗಿದೆ.

ಮುಂಬೈನಲ್ಲಿ ನೂರರ ಗಡಿ ದಾಟಿದ ಡಿಸೇಲ್
ಇನ್ನು ಮುಂಬೈನಲ್ಲಿ ಪೆಟ್ರೋಲ್ ಬೆಲೆ 84 ಪೈಸೆ ಹೆಚ್ಚಳಗೊಂಡು ಲೀಟರ್​ಗೆ 115.88 ರೂಪಾಯಿಗೆ ಬಂದು ನಿಂತಿದೆ. ಡಿಸೇಲ್ ಬೆಲೆ 85 ಪೈಸೆ ಹೆಚ್ಚಳವಾಗಿ ಲೀಟರ್​ಗೆ 100.10 ರೂಪಾಯಿ ಆಗಿದೆ.

ಮಹಾರಾಷ್ಟ್ರದಲ್ಲಿ ಡಿಸೇಲ್ ಬೆಲೆ100 ರು ಗಡಿ ದಾಟಿದೆ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 106.69 (75 ಪೈಸೆ ಹೆಚ್ಚಳ), ಡೀಸೆಲ್ ರೂ 96.76 (76 ಪೈಸೆ ಹೆಚ್ಚಳ) ರೂಪಾಯಿಗೆ ಏರಿಕೆ ಆಗಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ ರೂ 110.52 (84 ಪೈಸೆ ಹೆಚ್ಚಳ), ಮತ್ತು ಡೀಸೆಲ್ ಬೆಲೆ 95.42 (80 ಪೈಸೆ ಹೆಚ್ಚಳ) ರೂಪಾಯಿಗೆ ಏರಿಕೆ ಆಗಿದೆ.

error: Content is protected !!