ಇಂದು ಮತ್ತೆ ಪೆಟ್ರೋಲ್​ – ಡೀಸೆಲ್ ದರ ಏರಿಕೆ :ಜನ ಸಾಮಾನ್ಯರಿಗೆ ಹೊರೆ

Team Newsnap
1 Min Read

ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಉದ್ದೇಶ ಯಾರಿಗೂ ಅರ್ಥವಾಗುತ್ತಿಲ್ಲ.
ಡಾಲರ್ ಎದುರು ರೂಪಾಯಿ ಮೌಲ್ಯ 72.85 ರು ಇದೆ. ಬ್ರೆಂಟ್ ಕಚ್ಚಾ ತೈಲವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್‌ಗೆ 60.60ನಂತೆ ಲಭ್ಯವಾಗುತ್ತಿದೆ. ಆದರೂ ದೇಶದಲ್ಲಿ ನಿರಂತರವಾಗಿ ಕೇಂದ್ರ ಸರ್ಕಾರವು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಏರಿಕೆ ಮಾಡುತ್ತಿರುವ ಉದ್ದೇಶ ಅರ್ಥವಾಗುತ್ತಿಲ್ಲ.

ಕಳೆದ 48 ದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 21 ಬಾರಿ ಹೆಚ್ಚಾಗಿದೆ. ಜನವರಿ 1ರಿಂದೀಚೆಗೆ 6.15 ರೂಪಾಯಿ ಹೆಚ್ಚಾಗಿದೆ. ಫೆಬ್ರವರಿ ತಿಂಗಳಲ್ಲಿ 11ನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಸಲಾಗಿದೆ.

ಕಳೆದ 9 ದಿನಗಳಿಂದ ನಿರಂತರವಾಗಿ ಬೆಲೆ ಏರಿಕೆ ಏರಿಸಿದ್ದು 9 ದಿನಗಳಿಂದ ಒಟ್ಟು 3.11 ಪೈಸೆ ಬೆಲೆ ಹೆಚ್ಚಳ ಮಾಡಲಾಗಿದೆ.

ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಫೆಬ್ರವರಿ 4ರಂದು ತಲಾ 37 ಪೈಸೆ, ಫೆಬ್ರವರಿ 5ರಂದು 37 ಪೈಸೆ, ಫೆಬ್ರವರಿ 9ರಂದು 42 ಪೈಸೆ, ಫೆಬ್ರವರಿ 10ರಂದು 31 ಪೈಸೆ, ಫೆಬ್ರವರಿ 11ರಂದು 38 ಪೈಸೆ, ಫೆಬ್ರವರಿ 12ರಂದು 38 ಪೈಸೆ, ಫೆಬ್ರವರಿ 13ರಂದು 39 ಪೈಸೆ, ಫೆಬ್ರವರಿ 14ರಂದು 34 ಪೈಸೆ, ಫೆಬ್ರವರಿ 15ರಂದು 30 ಪೈಸೆ ಹಾಗೂ ಫೆಬ್ರವರಿ 16ರಂದು 38 ಪೈಸೆ ಹೆಚ್ಚಳ ಮಾಡಲಾಗಿತ್ತು.

ಇಂದು ಫೆಬ್ರವರಿ 17ರಂದು ಮತ್ತೆ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 27 ಪೈಸೆ ಹೆಚ್ಚಳ ಮಾಡಲಾಗಿದೆ.

ಪ್ರಮುಖ ನಗರಗಳ‌ ದರದ ವಿವರ :

  • ದೆಹಲಿ- ಪೆಟ್ರೋಲ್ 89.54 ರು. ಡೀಸೆಲ್ 79.95 ರು.
  • ಬೆಂಗಳೂರು- ಪೆಟ್ರೋಲ್ 92.54 ರು. ಡೀಸೆಲ್ 84.75 ರು.
  • ಮುಂಬೈ- ಪೆಟ್ರೋಲ್ 96.00 ರು. ಡೀಸೆಲ್ 86.98 ರು.
  • ಚೆನ್ನೈ- ಪೆಟ್ರೋಲ್ 91.68 ರು, ಡೀಸೆಲ್ 85.01 ರು
Share This Article
Leave a comment