December 28, 2024

Newsnap Kannada

The World at your finger tips!

NEET,student,harassment

ನಿರುದ್ಯೋಗದಿಂದ ಬೇಸತ್ತು ಪತ್ನಿ, ಇಬ್ಬರು ಮಕ್ಕಳಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡ

Spread the love

ಸೇಲಂನಲ್ಲಿ ನಿರುದ್ಯೋಗಿ ವ್ಯಕ್ತಿ ಪತ್ನಿ ಹಾಗೂ ಇಬ್ಬರು ಮಕ್ಕಳಿಗೆ ವಿಷ ಉಣಿಸಿ, ತಾನೂ ಸೇವಿಸಿರುವ ಆಘಾತಕಾರಿ ಘಟನೆ ನಡೆದಿದೆ.

ವಿಷ ಸೇವಿಸುತ್ತಿದ್ದಂತೆ ವ್ಯಕ್ತಿ ಹಾಗೂ ಆತನ ಪತ್ನಿ ಸಾವನ್ನಪ್ಪಿದ್ದಾರೆ. ಅಲ್ಲದೆ ಇಬ್ಬರು ಮಕ್ಕಳಿಗೆ ಒತ್ತಾಯ ಪೂರ್ವಕವಾಗಿ ವಿಷ ಕುಡಿಸಿದ್ದಾರೆ. ಮಕ್ಕಳ ಸ್ಥಿತಿ ಗಂಭಿರವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಿರುದ್ಯೋಗಿ ವ್ಯಕ್ತಿಯನ್ನು ಪುಂಗವಾಡಿ ಗ್ರಾಮದ ಪಿ.ವೆಲ್ಮುರುಗನ್ ಎಂಬಾತ ಸತ್ಯ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಅಭಿನಯ ಹಾಗೂ ಸಂಜಯ್ ಇಬ್ಬರು ಮಕ್ಕಳಿದ್ದರು.

ವೆಲ್ಮುರುಗನ್ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಆದರೆ ಕೆಲ ತಿಂಗಳಿಂದ ಅವರಿಗೆ ಕೆಲಸ ಸಿಕ್ಕಿರಲಿಲ್ಲ. ಅಲ್ಲದೆ ವ್ಯಕ್ತಿಯ ತಾಯಿ ತನ್ನ ಪತ್ನಿಯನ್ನು ಬೈಯುತ್ತಿದ್ದಳು. ಹೀಗೆ ಜಗಳವಾಡುತ್ತಿದ್ದಾಗ ವೆಲ್ಮುರುಗನ್ ಮಧ್ಯ ಪ್ರವೇಶಿಸಿದರೆ ಆತನನ್ನೂ ಬೈಯುತ್ತಿದ್ದರು. ಈ ಜಗಳದಿಂದಾಗಿ ಹತಾಶೆಗೊಂಡು ದಂಪತಿ ರಾತ್ರಿಯೇ ಮನೆ ಬಿಟ್ಟು ಬಂದಿದ್ದರು.

ಬಳಿಕ ವೆಲ್ಮುರುಗನ್ ಆತ್ಮಹತ್ಯೆಗೆ ನಿರ್ಧರಿಸಿದ್ದ. ಇದಕ್ಕೆ ಪತ್ನಿ ಸತ್ಯ ಸಹ ಬೆಂಬಲ ಸೂಚಿಸಿದ್ದಳು. ಬಳಿ ವೆಲ್ಮುರುಗನ್ ಎಲ್ಲರ ಕಿವಿಗೆ ವಿಷ ಸುರಿದು ತಾನೂ ಕುಡಿದಿದ್ದಾನೆ.

ಈ ವೇಳೆ ದಂಪತಿ ಮಕ್ಕಳಿಗೂ ವಿಷ ನೀಡಲು ಮುಂದಾಗಿದ್ದಾರೆ, ಈ ವೇಳೆ ಮಕ್ಕಳು ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಗ್ರಾಮಸ್ಥರಿಗೆ ತಿಳಿಸಿದ್ದಾರೆ.

ಗ್ರಾಮಸ್ಥರು ಸ್ಥಳಕ್ಕೆ ತೆರಳುವಷ್ಟರಲ್ಲಿ ವೆಲ್ಮುರುಗನ್ ಹಾಗೂ ಸತ್ಯ ಸಾವನ್ನಪ್ಪಿದ್ದಾರೆ. ಗ್ರಾಮಸ್ಥರು ಅಟ್ಟೂರ್ ಪೊಲೀಸರಿಗೆ ಮಾಹಿತಿ ನೀಡಿದ್ದು, ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಬಾಲಕನ ಸ್ಥಿತಿ ಗಂಭಿರವಾಗಿದೆ. ಬಾಲಕಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

Copyright © All rights reserved Newsnap | Newsever by AF themes.
error: Content is protected !!