ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಸಾರ ಸಚಿವಾಲಯದ ಅಧಿಸೂಚನೆ ತಿಳಿಸಿದೆ.
ಖಾಸಗಿ ಸಂಸ್ಥೆಗಳಿಗೆ ಇ-ಹರಾಜು ಮೂಲಕ ಎಫ್‌ಎಂ ಚಾನೆಲ್ ಅವಕಾಶ ಸಿಗಲಿದ್ದು, 730 ಚಾನೆಲ್‌ಗಳಿಗೆ 784.87 ಕೋಟಿ ರೂ ಮೂಲ ಬಿಡ್ಡಿಂಗ್ ಮೊತ್ತ ನಿಗದಿ ಮಾಡಲಾಗಿದೆ.
ದಾವಣಗೆರೆ, ಗದಗ ಬೆಟಗೇರಿ, ಹಾಸನ, ಹೊಸಪೇಟೆ, ಉಡುಪಿ ,ಬಾಗಲಕೋಟೆ, ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ, ಚಿಕ್ಕಮಗಳೂರು, ಚಿತ್ರದುರ್ಗ ಸೇರಿದಂತೆ 16 ನಗರಗಳಲ್ಲಿ 53 ಎಫ್‌ಎಂ ಕೇಂದ್ರ ತೆರೆಯಲು ಅನುಮತಿ ದೊರಕಿದೆ.ರಾಜ್ಯದಲ್ಲಿ ಮುಂದಿನ ಐದು ದಿನ ಭಾರೀ ಮಳೆ
ಇದರಿಂದ ಹೊಸ ಉದ್ಯೋಗಾವಕಾಶಗಳ ಸೃಷ್ಟಿಗೆ ಕಾರಣವಾಗುತ್ತದೆ ಅಲ್ಲದೆ ಸ್ಥಳೀಯ ಉಪಭಾಷೆ ಮತ್ತು ಸಂಸ್ಕೃತಿಗೆ ಉತ್ತೇಜನ ಸಿಗಲಿದೆ ಎಂದು ಸರ್ಕಾರ ತಿಳಿಸಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು