November 16, 2024

Newsnap Kannada

The World at your finger tips!

WhatsApp Image 2022 05 16 at 10.12.18 PM

ಆಕ್ರಮಣದಿಂದ ನಿರ್ಮಾಣ ಮಾಡಿದ ಮಸೀದಿಗಳಿದ್ದರೆ ಅದು ಸ್ವಚ್ಛ ಆಗಬೇಕು – ಪೇಜಾವರಶ್ರೀ

Spread the love

ಹಿಂದೂ ಸಮಾಜದ ಮೇಲೆ ಆಕ್ರಮಣಗಳಾಗಿವೆ. ಈಗಲೂ ಆಕ್ರಮಣ ಮುಂದುವರಿಯುತ್ತಿದೆ. ಕೆಲವು ಕಡೆ ಆಕ್ರಮಣ ಮಾಡಿ ದೇಗುಲ ಕೆಡವಿ ಮಸೀದಿಗಳನ್ನು ಕಟ್ಟಿದ್ದರೆ. ಆ ಜಾಗ ಎಷ್ಟು ಸ್ವಚ್ಛ ಆಗಬೇಕೋ ಅಷ್ಟೂ ಸ್ವಚ್ಛ ಆಗಬೇಕು ಎಂದು ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯ ಪಟ್ಟಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಶ್ರೀಗಳು , ಆಕ್ರಮಣಗಳ ಸ್ವಚ್ಛತೆ ಭಾರತ ದೇಶದಲ್ಲಿ ಎಷ್ಟು ಸಾಧ್ಯವೋ ಅಷ್ಟೂ ಆಗಬೇಕು ಎಂದು ಬಯಸುತ್ತೇನೆ. ಶ್ರೀರಂಗಪಟ್ಟಣದ ಜಾಮಿಯ ಮಸೀದಿ ವಿವಾದ ಬಗ್ಗೆ ನನಗೆ ಹೆಚ್ಚಿನ ಮಾಹಿತಿಗಳಿಲ್ಲ ತಿಳಿದುಕೊಂಡು ಪ್ರತಿಕ್ರಿಯೆ ನೀಡುತ್ತೇನೆ ಆದರೆ, ಈ ವಿಚಾರ ಕೋರ್ಟ್‍ನಲ್ಲಿ ತೀರ್ಮಾನ ಆಗಬೇಕು. ಅದು ದೇವಸ್ಥಾನ ಹೌದು ಅಂತ ಕೋರ್ಟ್ ತೀರ್ಮಾನ ಮಾಡಿದರೆ ಅದು ಹೌದು. ಅದು ದೇವಸ್ಥಾನ ಅಲ್ಲ ಎಂದು ಕೋರ್ಟ್ ತೀರ್ಮಾನಿಸಿದರೆ ಅದು ಅಲ್ಲ ಎಂದರು.

ಇದನ್ನು ಓದಿ : ಕೇರಳದಲ್ಲಿ ಭಾರೀ ಮಳೆ : 14 ವರ್ಷಗಳ ನಂತರ ಮೇ ನಲ್ಲೂ KRS ನಲ್ಲಿ 100 ಅಡಿ ನೀರು

ಈಗಿನ ಬೆಳವಣಿಗೆಗಳಲ್ಲಿ ಸಾಮರಸ್ಯ ಕದಡುವ ಪ್ರಶ್ನೆಯೇ ಇಲ್ಲ. ಕೋರ್ಟ್ ತೀರ್ಮಾನಕ್ಕೆ ಯಾರೂ ವಿರೋಧಗಳನ್ನು ವ್ಯಕ್ತಪಡಿಸಬಾರದು. ಸಮಾಜದಲ್ಲಿ ಸೌಹಾರ್ದ ಬೆಳೆಯಬೇಕು. ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಹೊಣೆಯಾಗಬೇಕಾಗಿಲ್ಲ. ಯಾರೇ ಆಗಲಿ ಮಾಡಿದ ತಪ್ಪನ್ನು ಒಪ್ಪಿಕೊಂಡು ಧಾರ್ಮಿಕ ಕೇಂದ್ರ ಬಿಟ್ಟುಕೊಡಬೇಕು ಎಂದು ಅಭಿಪ್ರಾಯಪಟ್ಟರು.

Copyright © All rights reserved Newsnap | Newsever by AF themes.
error: Content is protected !!