ದಿ ಕಾಶ್ಮೀರ್ ಫೈಲ್ಸ್ ಚಿತ್ರವನ್ನು ಉಡುಪಿಯ ಪೇಜಾವರ ಶ್ರೀ ಮತ್ತು ಕಾಣಿಯೂರು ಸ್ವಾಮೀಜಿ ಜೊತೆಯಾಗಿ ಮಣಿಪಾಲ್ ನ ಮಾಲ್ ವೊಂದರಲ್ಲಿ ವೀಕ್ಷಣೆ ಮಾಡಿದರು.
ಮೊಟ್ಟಮೊದಲ ಬಾರಿಗೆ ಮಾಲ್‍ಗೆ ತೆರಳಿದ ಸ್ವಾಮೀಜಿಗಳು ನೈಜ ಕತೆಯಾಧಾರಿತ ಚಿತ್ರ ವೀಕ್ಷಣೆ ಮಾಡಿದರು.
ಪರ-ವಿರೋಧ ಚರ್ಚೆಯ ನಡುವೆ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಕಾಣಿಯೂರು ಮಠಾಧೀಶ ವಿದ್ಯಾವಲ್ಲಭತೀರ್ಥ ಸ್ವಾಮೀಜಿ ಥಿಯೇಟರ್‌ಗೆ ತೆರಳಿ ಚಲನಚಿತ್ರವನ್ನು ವೀಕ್ಷಣೆ ಮಾಡಿದರು.
ಸಿನಿಮಾ ಮಂದಿರಕ್ಕೆ ಸ್ವಾಮೀಜಿಗಳು ಭೇಟಿ ನೀಡಿದ್ದು ಇದೇ ಮೊದಲು. ಮಣಿಪಾಲಕ್ಕೆ ತಮ್ಮ ಜೊತೆಗೆ ಮಠದ 35 ಶಿಷ್ಯರನ್ನು ಕೂಡ ಕರೆದೊಯ್ದಿದ್ದರು. ತಮ್ಮ ಬಿಡುವಿಲ್ಲದ ಕಾರ್ಯಚಟುವಟಿಕೆಗಳ ನಡುವೆಯೂ ಶೋ ನೋಡಲು ಯತಿಗಳಿಗೆ ವ್ಯವಸ್ಥೆ ಮಾಡಲಾಗಿತ್ತು.
ಈ ಹಿಂದೆ ʼಉರಿʼ ಚಲನಚಿತ್ರ ಬಿಡುಗಡೆಯಾದಾಗ ಪೇಜಾವರ ಮಠದ ಹಿರಿಯ ಯತಿಗಳಾದ ಕೀರ್ತಿಶೇಷ ವಿಶ್ವೇಶತೀರ್ಥರು ತಮ್ಮ ಶಿಷ್ಯರೊಂದಿಗೆ ಸಿನಿಮಾ ನೋಡಿದ್ದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು