April 23, 2025

Newsnap Kannada

The World at your finger tips!

kolar, lokayukta , SDA

ಲಂಚ ಪಡೆಯುತ್ತಿದ್ದ PDO ಮತ್ತು SDA ಲೋಕಾಯುಕ್ತ ಬಲೆಗೆ

Spread the love

ಉಡುಪಿ: ಲಂಚ ಪಡೆಯುತ್ತಿದ್ದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (PDO) ಮತ್ತು ದ್ವಿತೀಯ ದರ್ಜೆ ಸಹಾಯಕ (SDA) ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ಘಟನೆಯ ವಿವರ:
ಜಾಗದ ದಾಖಲೆಗೆ 9/11 ಮಾಡಿಕೊಡಲು ₹22,000 ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪಿಡಿಒ ಉಮಾಶಂಕರ್ ಮತ್ತು ಎಸ್ಡಿಎ ಶೇಖರ್ ಜಿ. ಅವರನ್ನು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಶಿಕಾಯತ್ ಪ್ರಕಾರ:
ಮೊಹಮ್ಮದ್ ಹನೀಫ್ ಎಂಬವರು ತಮ್ಮ ಜಾಗದ ದಾಖಲಿಗಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದು, ದಾಖಲೆ ನೀಡಲು ₹22,000 ಲಂಚಕ್ಕೆ ಪಿಡಿಒ ಮತ್ತು ಎಸ್ಡಿಎ ಬೇಡಿಕೆ ಇಟ್ಟಿದ್ದಾರೆ.ಖಾದ್ಯ ತೈಲ ಬೆಲೆಗಳಲ್ಲಿ ಭಾರೀ ಇಳಿಕೆ

ಕಾರ್ಯಾಚರಣೆ:
ಹನೀಫ್ ಅವರು ಉಡುಪಿ ಲೋಕಾಯುಕ್ತ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ, ಬುಧವಾರ ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಮಂಜುನಾಥ್ ಅವರ ನೇತೃತ್ವದಲ್ಲಿ ದಾಳಿ ನಡೆಯಿತು. ಲಂಚ ಪಡೆಯುತ್ತಿದ್ದ ವೇಳೆಯಲ್ಲೇ ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಯಿತು.

Copyright © All rights reserved Newsnap | Newsever by AF themes.
error: Content is protected !!