ತೊರೆಕೆಂಪೋಹಳ್ಳಿ ಗ್ರಾಮದ ನಿವಾಸಿ ರಮೇಶ್ ತಮ್ಮ ಹೆಂಡತಿಯ ಹೆಸರಿಗೆ ತಮ್ಮ ಖಾಲಿ ನಿವೇಶನದ ಖಾತಾ ವರ್ಗಾವಣೆ ಮಾಡಿಸಲು ಅರ್ಜಿ ಸಲ್ಲಿಸಿದ್ದರು.
ಈ ಪ್ರಕ್ರಿಯೆಗೆ ಶೋಭಾ ರಾಣಿ ಮಧ್ಯವರ್ತಿ ರುದ್ರಪ್ಪ ಮೂಲಕ 20 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದಳು. ರಮೇಶ್ ಅವರನ್ನು ರುದ್ರಪ್ಪ ಪಂಚಾಯಿತಿ ಕಚೇರಿಗೆ ಕರೆತಂದಿದ್ದು, ಲಂಚದ ಹಣ ಹಸ್ತಾಂತರಿಸುವ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಲೋಕಾಯುಕ್ತ ಎಸ್ಪಿ ಪವನ್ ನಲ್ಲೂರು ನೇತೃತ್ವದ ತಂಡ ದಾಳಿ ನಡೆಸಿದೆ.ಇದನ್ನು ಓದಿ –ಬಸ್ -ಟಿಪ್ಪರ್ ನಡುವೆ ಓವರ್ ಟೇಕ್ : ಮಹಿಳೆ ಸಾವು
ಶೋಭಾ ರಾಣಿ ಅವರಿಂದ ಲಂಚದ ಹಣ ವಶಪಡಿಸಿಕೊಂಡು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಸ್ಥಳೀಯ ಅಧಿಕಾರಿಗಳು ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ್ದು, ತನಿಖೆ ಮುಂದುವರಿಯುತ್ತಿದೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು