December 22, 2024

Newsnap Kannada

The World at your finger tips!

candrakanth

ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್

Spread the love

ಹೈದ್ರಾಬಾದ್ : ನಿಜ ಹೇಳಬೇಕು ಅಂದ್ರೆ ಅಪಘಾವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ ಸತ್ತಿದ್ದಾಳೆ ಇಲ್ಲ ಅಂದ್ರೆ ಪವಿತ್ರಾ ಬದುಕುತ್ತಿದ್ದಳು. ಪವಿತ್ರಾ ಸಾವಿಗೆ ಆಂಬ್ಯುಲೆನ್ಸ್ ನೇರ ಕಾರಣ’ ಎಂದಿದ್ದಾರೆ ಕಾರಿನಲ್ಲಿ ಜೊತೆಯಲ್ಲೆ ಪ್ರಯಾಣಿಸುತ್ತಿದ್ದ ಗೆಳೆಯ ಚಂದ್ರಕಾಂತ್ ಹೇಳಿಕೆ ನೀಡಿದ್ದಾರೆ.

ಸುಮಾರು 20 ವರ್ಷಗಳಿಂದ ಕನ್ನಡ, ತಮಿಳು ಮತ್ತು ತೆಲುಗು ಕಿರುತೆರೆ ಲೋಕದಲ್ಲಿ ಮಿಂಚುತ್ತಿರುವ ನಟಿ ಪವಿತ್ರಾ ಜಯರಾಮ್‌ ರಸ್ತೆ ಅಪಘಾತದಲ್ಲಿ ಅಗಲಿದ್ದಾರೆ. ಬೆಂಗಳೂರಿನಿಂದ ಹೈದರಾಬಾದ್‌ ಕಡೆ ಪ್ರಯಾಣ ಮಾಡುವಾಗ ಅಪಘಾತ ಸಂಭವಿಸಿದೆ. ಸಂಪೂರ್ಣ ವಿವರವನ್ನು ಕಾರಿನಲ್ಲಿದ್ದ ಸ್ನೇಹಿತ ಚಂದ್ರಕಾಂತ್ ವಿವರಿಸಿದ್ದಾರೆ.

‘ಕಾರಿನಲ್ಲಿ ನಾವು ಬೆಂಗಳೂರಿನಿಂದ ಹೈದರಾಬಾದ್‌ ಕಡೆ ಪ್ರಯಾಣ ಮಾಡುತ್ತಿದ್ದೆವು. ಸುಮಾರು 2.30 ಮಧ್ಯಾಹ್ನಕ್ಕೆ ನಮ್ಮ ಪ್ರಯಾಣ ಶುರುವಾಗಿತ್ತು. ತುಂಬಾ ಮಳೆ ಬರುತ್ತಿದ್ದ ಕಾರಣ ಸುಮಾರು 3 ಗಂಟೆ ಟ್ರಾಫಿಕ್‌ ಜಾಮ್‌ ಉಂಟಾಗಿತ್ತು. ತುಂಬಾ ಸುಸ್ತಾಗಿದ್ದ ಕಾರಣ ರೆಸ್ಟ್‌ ಬೇಕು ಎಂದು ನಿದ್ರೆ ಮಾಡಿದೆವು. ಕಾರಿನಲ್ಲಿ ಒಟ್ಟು ನಾಲ್ಕು ಜನ ಇದ್ವೆ…ಕಾರನ್ನು ಚಾಲಕ ಓಡಿಸುತ್ತಿದ್ದ. ಆತನ ಪಕ್ಕ ಪವಿತ್ರಾ ಅಕ್ಕನ ಮಗಳು ಇದ್ದಳು..ಹಿಂದೆ ನಾನು ಮತ್ತು ಪವಿತ್ರಾ ಇದ್ವಿ’ ಎಂದು ಚಂದ್ರಕಾಂತ್ ಹೇಳಿದ್ದಾರೆ

‘ಡ್ರೈವರ್ ಹೇಳಿದ ಪ್ರಕಾರ ಆತ 60 ಅಡಿ ರಸ್ತೆಯಲ್ಲಿ ಕಾರು ಚಲಾಯಿಸುತ್ತಿದ್ದ ಆಗ ಇದ್ದಕ್ಕಿದ್ದಂತೆ ವೇಗವಾಗಿ ಬಸ್‌ ಬಂತು. ಈ ವೇಳೆ ಎದುರಿನಿಂದ ಬಂದು ನಮ್ಮ ಸ್ಕಾರ್ಪಿಯೋ ಕಾರಿಗೆ ಡಿಕ್ಕಿ ಹೊಡೆದಿದೆ ರಭಸದಲ್ಲಿ ಬ್ರೇಕ್ ಹಾಕಿದ್ದಕ್ಕೆ ಕಾರು ಬಲಗಡೆಗೆ ವಾಲಿ ನಿಂತಿದ್ದ ಬಸ್‌ಗೆ ಡಿಕ್ಕೆ ಹೊಡೆದಿದೆ.

ಈ ಅಪಘಾತದಲ್ಲಿ ಯಾರಿಗೂ ಏನೂ ಆಗಿಲ್ಲ. ನನಗೆ ಮಾತ್ರ ಕೈ ಪೆಟ್ಟು ಬಿದ್ದು ಕೈ ಫ್ರಾಕ್ಚರ್ ಆಗಿದೆ. ಅಪಘಾತವಾದಾಗ ಪವಿತ್ರಾ ನನ್ನನ್ನು ನೋಡಿ ಏನಾಯ್ತು ಏನಾಯ್ತು ಎಂದು ಜೋರಾಗಿ ಉಸಿರು ಎಳೆದುಕೊಂಡಳು ಅಷ್ಟೆ. ಘಟನೆ ನಡೆದಿರುವುದು ರಾತ್ರಿ 12.40 ಸಮಯದಲ್ಲಿ ಎಂದು ಅಲ್ಲಿದ್ದ ಜನರು ಹೇಳಿದ್ದಾರೆ ಆದರೆ ನನಗೆ ಪ್ರಜ್ಞೆ ಇರಲಿಲ್ಲ. ಬೆಳಗ್ಗೆ ನಾಲ್ಕು ಗಂಟೆಗೆ ನನಗೆ ಎಚ್ಚರವಾಗಿತ್ತು ಆಗ ಪವಿತ್ರಾ ಇಲ್ಲ ಅನ್ನೋ ವಿಚಾರ ಇಳಿಯಿತ್ತು. ನಾನು ಹುಚ್ಚನಂತೆ ವರ್ತಿಸುತ್ತಿದ್ದೆ ಎಂದು ಡಾಕ್ಟರ್ ಹೇಳುತ್ತಿದ್ದರು ಎಂದು ಚಂದ್ರಕಾಂತ್ ಹೇಳಿದ್ದಾರೆ.CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್

‘ನಿಜ ಹೇಳಬೇಕು ಅಂದ್ರೆ ಅಲ್ಲಿಗೆ ಆಂಬ್ಯುಲೆನ್ಸ್ ತಡವಾಗಿ ಬಂತು. ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ ಸತ್ತಿದ್ದಾಳೆ ಇಲ್ಲ ಅಂದ್ರೆ ಪವಿತ್ರಾ ಬದುಕುತ್ತಿದ್ದಳು. ಪವಿತ್ರಾ ಸಾವಿಗೆ ಆಂಬ್ಯುಲೆನ್ಸ್. ಕಾರಣ’ ಎಂದಿದ್ದಾರೆ ಚಂದ್ರಕಾಂತ್.

Copyright © All rights reserved Newsnap | Newsever by AF themes.
error: Content is protected !!