ರಾಷ್ಟ್ರಭಕ್ತ ಮುಸಲ್ಮಾನರು ನಮ್ಮ ಜೊತೆ (ಬಿಜೆಪಿಯೊಂದಿಗೆ) ಇದ್ದಾರೆ. ಕಾಂಗ್ರೆಸ್‌ನೊಂದಿಗೆ ಇರುವ ಉಳಿದ ಮುಸ್ಲಿಮರೂ ಬರ್ತಾರೆ ಎಂದು ಹೇಳಿಕೊಂಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ.
ಬಾಗಲಕೋಟೆಯಲ್ಲಿ ಸಚಿವರು ಶುಕ್ರವಾರ ವರದಿಗಾರರೊಂದಿಗೆ ಮಾತನಾಡಿದರು. ಆರ್‌ಎಸ್‌ಎಸ್ ಬೈದರೆ ಮುಸ್ಲಿಮರು ಓಟು ಕೊಟ್ಟುಬಿಡ್ತಾರೆ ಅನ್ನೊ ಭ್ರಮೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಇವೆ ಎಂದು ಟೀಕಿಸಿದರು.
ಮುಸ್ಲಿಂ ಹಾಗೂ ಕ್ರಿಶ್ಚಿಯನ್ ದೇಶಗಳೆಲ್ಲಾ ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗಿವೆ. ಪಾಕಿಸ್ತಾನ ಒಂದೇ ಆಗಿದೆ. ಇದು ಆರ್‌ಎಸ್‌ಎಸ್‌ನ ಪರಿಣಾಮ ಎಂದು ವಿಶ್ಲೇಷಿಸಿದರು.
ಹಿಂದೆ ಅಂದಿನ ಪ್ರಧಾನಿಗಳಾದ ಜವಾಹರಲಾಲ್, ಇಂದಿರಾಗಾಂಧಿ ಅವರು ನಮ್ಮ ವಿರುದ್ಧ ಮಾತನಾಡಿದಾಗ ನಾವು ಲೆಕ್ಕಿಸಲಿಲ್ಲ. ಇವರು (ಈಗಿನ ಕಾಂಗ್ರೆಸ್ ಪಕ್ಷದವರು) ಯಾರು ನಮಗೆ ಲೆಕ್ಕಕ್ಕೆ. ಆರ್‌ಎಸ್‌ಎಸ್ ಇಲ್ಲದೇ ಇದ್ದಿದ್ದರೆ ಈ ವೇಳೆಗೆ ದೇಶವು ಪಾಕಿಸ್ತಾನವಾಗಿ ಬದಲಾಗುತ್ತಿತ್ತು ಎಂದು ಈಶ್ವರಪ್ಪ ನುಡಿದರು.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು