ಅಣ್ಣ ಬೇಗನೆ ಒಂದು ಜ್ಯೂಸ್ ಕೊಡು ಬಸ್ ಹೋಗುತ್ತೆ ಸಮಯ ಆಗುತ್ತೆ.ಅಣ್ಣ ಜ್ಯೂಸ್
ಎಷ್ಟೊತ್ತು ಮಾಡ್ತೀಯಾ?, ಏಯ್ ಅಣ್ಣ ನಿಂಗೆ ಹೇಳತಿರೋದು, ಎಂದು ಯುವಕ ಜ್ಯೂಸ್
ಸೆಂಟರ್ ಹುಡುಗನಿಗೆ ಹೇಳಿದ.ಆಗ ಅವನು ನೀನು ಬಂದು 5 ನಿಮಿಷ ಆಗಿಲ್ಲ ಮತ್ತೆ ನಂಗೆ ಬೇಗ ಕೊಡು ಅಂತಿಯಾ? ತಾಳ್ಮೆ ಇರಲಿ ಸ್ವಲ್ಪ ಹಣ್ಣು ಕತ್ತರಿಸಿ ಸಕ್ಕರೆ ಹಾಲು ಮಿಶ್ರಣ ಮಾಡಿ ಕೊಡಬೇಕಾದರೆ ಸಮಯ ಆಗುತ್ತೆ .ಸ್ವಲ್ಪ ತಾಳು ಎಂದು ಅವನಂತೆ ಏರು ಧ್ವನಿಯಲ್ಲೇ ಹೇಳಿದ.
ಈ ರೀತಿ ಅವಸರ ಮಾಡಿದರೆ ನಂಗೆ ಆಗೋಲ್ಲ ನೋಡು ಬೇಕಾದರೆ ಬೇರೆ ಅಂಗಡಿ ಹೋಗು ಎಂದು ಅವನ ದಾಟಿಯಲಿ ಹೇಳಿದ ಆಗ ಯುವಕ ತಾಳ್ಮೆ ಕಳೆದುಕೊಂಡು ಅದೇ ಆವೇಷದಲ್ಲಿ ಹೋಗುತ್ತಿರುವ ಬಸ್ ನ್ನು ಓಡಿಹೋಗಿ ಹತ್ತಲು ಪ್ರಯತ್ನಿಸಿದ ಆಗ ಕೈ ಜಾರಿ ನೆಲಕ್ಕೆ ಬಿದ್ದು ತಲೆಗೆ ಗಾಯ ಮಾಡಿಕೊಂಡು ಆಸ್ಪತ್ರೆ ಸೇರಿದನು.ಆಗ ಆಸ್ಪತ್ರೆಯಲ್ಲಿ ಮಲಗಿದಾಗ ತನ್ನ ಮನಸಿನಲ್ಲಿ ತಾನೇ ಅಂದುಕೊಳ್ಳುತ್ತಿದ್ದ ನಾನು ತಾಳ್ಮೆಯಿಂದ ಇದ್ದರೆ ಜ್ಯೂಸ್ ಕುಡಿದು ಅರಾಮ ಮುಂದಿನ ಬಸ್ ಹತ್ತಬಹುದು ಎಂದು ಪಶ್ಚಾತ್ತಾಪಪಟ್ಟುಕೊಂಡನು.ಈ ರೀತಿಯ ಘಟನೆಗಳು ನಾವು ತಾಳ್ಮೆಯನ್ನು ಕಳೆದುಕೊಂಡಾಗ ಅನುಭವಿಸುತ್ತೇವೆ.ಸ್ವಲ್ಪ ಸಮಾಧಾನದಿಂದ ಇದ್ದರೆ ಎಲ್ಲವೂ ಸರಾಗವಾಗಿ ಸುಸೂತ್ರವಾಗಿ ಅಂದುಕೊಂಡಂತೆ ಕಾರ್ಯಗಳು ಯಶಸ್ವಿಗೊಂಡು ಮನಸು ಸಂತೃಪ್ತಗೊಳ್ಳುತ್ತದೆ.ಹಾಗಾಗಿ ತಾಳ್ಮೆಯಿಂದ ಇದ್ದರೆ ಜೀವಕ್ಕೂ ಬೆಲೆ ಜೀವನಕ್ಕೂ ನೆಲೆ.
ತಾಳ್ಮೆ ಎಷ್ಟರ ಮಟ್ಟಿಗೆ ಕಣ್ಮರೆಯಾಗುತ್ತಿದೆ ಎಂದರೆ.ನೀರನ್ನು ಗ್ಲಾಸನಲ್ಲಿ ಹಾಕಿ ಕುಡಿಯದಷ್ಟು.ಇಂದಿನ ಯುವ ಜನತೆ ಪ್ರತಿಯೊಂದು ಹಂತದಲ್ಲಿ ಶೋಕಿ,ಪ್ಯಾಷನ್,ಒಣ ಪ್ರತಿಷ್ಠೆಗೋಸ್ಕರ ತಮ್ಮ ಕುಟುಂಬವನ್ನು ಮರೆತು ಎಲ್ಲವೂ ಲಗುಬಗೆಯಿಂದ ಆಗಬೇಕು ಎಂದು ಸಾವಿನ ದವಡೆಗೆ ಸಿಲುಕಿ ಬದುಕನ್ನು ನುಚ್ಚುನೂರು ಮಾಡಿಕೊಳ್ಳುತ್ತಿದ್ದಾರೆ.ಇದಕ್ಕೆಲ್ಲ ಮೂಲ ಕಾರಣವೇ ತಾಳ್ಮೆಯೇ ಇಲ್ಲದಿರುವುದು.ಓಡುತ್ತಿರುವ ತಂತ್ರಜ್ಞಾನ ಯುಗದಲ್ಲಿ ಯಾವುದನ್ನು ಸರಿಯಾಗಿ ಅರ್ಥೈಸಿಕೊಳ್ಳದೆ ಅರಿಯುವಷ್ಟು ಸಹನೆ ಕೂಡ ಇಂದು ಕಾಣೆಯಾಗಿದೆ.ಎಲ್ಲೋ ಬಿಕಾಬಿಟ್ಟಿ ಸಮಯ ಕಳೆಯೋ ಯುವಕರು ಎಲ್ಲಿ ಸಹನೆಯಿಂದ ಇರಬೇಕೋ ಅಲ್ಲಿ ತಮ್ಮನ್ನೇ ತಾವು ಮರೆತು ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ.ಎಲ್ಲೇ ಹೋಗಲಿ ತಡವಾದರೂ ಪರವಾಗಿಲ್ಲ ಹೋದ ಕಾರ್ಯ ಸಲೀಸಾಗಿ ಮುಗಿಯುತ್ತದೆ.ಇಲ್ಲದಿರೆ ಅಪೂರ್ಣವಾಗಿ ಮುಂದೂಡಲ್ಪಡುತ್ತದೆ.ಹಾಗಾಗಿ ತಾಳ್ಮೆಯೇ ಗುಣಗಳ ಗಣಿ.ಮನುಜನ ನೆಮ್ಮದಿಯ ಋಣಿ.
ತಾಳ್ಮೆ ಎಂಬುದು ಎರಡು ಅಕ್ಷರಗಳ ಪದವಾದರೂ ಹಿರಿದಾದ ಅರ್ಥವನ್ನು ಹೊಂದಿದೆ.ಇದು ಮನುಜನ ಅತ್ಯಮೂಲ್ಯ ಗುಣಗಳಲ್ಲಿ ಒಂದಾಗಿದ್ದು.ಯಾವುದೇ ಕಷ್ಟಕರ ಸ್ಥಿತಿಯನ್ನು ಸಹನೆಯಿಂದ ಎದುರಿಸುವ ಸಾಮರ್ಥ್ಯದ ಮೂಲವೇ ತಾಳ್ಮೆ.ಯಾವುದೇ ಕೆಲಸವೂ ವಿಳಂಬವಾದರೂ ಸಿಟ್ಟಿನಿಂದ ಪ್ರತ್ಯುತ್ತರಿಸದೆ ಪ್ರಚೋದನೆ ಆಲಿಸಿ ಸಹಿಸಿಕೊಳ್ಳುವ ಗುಣವೇ ತಾಳ್ಮೆ.ಇದು ವಯಸ್ಸಿಗೆ ಅನುಗುಣವಾಗಿ ವಿವಿಧ ರೂಪದಲ್ಲಿ ತನ್ನ ಪಾತ್ರ ನಿರ್ವಹಿಸುತ್ತದೆ. ಸುಮ್ಮನೆ ಒಂದೇ ಕಡೆ ಗಮನ ಕೇಂದ್ರೀಕರಿಸುತ .ಆಟ ಆಡುತ,ವ್ಯಕ್ತಪಡಿಸುತ್ತದೆ.
ಯುವಕರು ಮುಖ ಅಲುಗಾಡಿಸುವ ಮೂಲಕ,ಸನ್ನೆಯ ಮೂಲಕ,ನಗುವಿನ ಮೂಲಕ,ಮಾತುಗಳ ಮೂಲಕ ವ್ಯಕ್ತಪಡಿಸಿದರೆ ಕೆಲವರು ಮಾತಿನ ಆರ್ಭಟದ ಮೂಲಕ,ಸೌಮ್ಯ ಸ್ವಭಾವದ ಮೂಲಕ.ನರಳಾಡುವ ರೀತಿಯಲ್ಲಿ,ಜೊತೆಗೆ ತಮ್ಮದೇ ಹಾಸ್ಯಾಸ್ಪದ ಮೂಲಕ ತಿಳಿಪಡಿಸುತ್ತಾರೆ.ತಾಳ್ಮೆ ಇಲ್ಲದಾಗ
ಯುವಕರು ಹಾವಭಾವ,ಬೆರಳುಗಳ ಪರಸ್ಪರ ಆಲಿಂಗನ, ಕಂಗಳಲ್ಲಿನ ಬದಲಾವಣೆ,ಕೋಪ,ಕ್ರೋದದ ಮೂಲಕ ಹೀಗೆ ವಿವಿಧ ಭಂಗಿಗಳಲ್ಲಿ ಸ್ಪಷ್ಟಪಡಿಸುತ್ತಾರೆ.ಇದು ಅತ್ಯಂತ ಕಷ್ಟಗಳು ಎದುರಾದಾಗ ವ್ಯಕ್ತಿಯು ಋಣಾತ್ಮಕವಾಗಿರದೆ ಸಹಿಷ್ಣುತತೆ ಮಟ್ಟವನ್ನು ಅಳೆಯುತ್ತದೆ.ಹಾಗಾಗಿ ಇದು ಆಂತರಿಕ ಗುಣಗಳಲಿ ಒಂದಾಗಿದ್ದು ವ್ಯಕ್ತಿಯ ಜೀವನಕ್ಕೆ ಅಡಿಪಾಯವಾಗಿದೆ.
ತಾಳ್ಮೆಯನ್ನು ಒಂದೇ ಶಬ್ದದಿಂದ ವ್ಯಕ್ತಪಡಿಸುವುದಿಲ್ಲ.ಇತರ ಶಬ್ದಗಳಾದ ಸಹಿಷ್ಣುತೆ,ತಿತಿಕ್ಷ,ಸಹನಶೀಲತೆ ಪದಗಳಲ್ಲಿ ಕೂಡ ಕಾಣುತ್ತೇವೆ.ತಾಳ್ಮೆಯಿರೆ ಸಮಯ ಕೂಡ ನೆರವು ನೀಡುತ್ತದೆ ಇಲ್ಲದಿರೆ ಸಮಯವೇ ಸಂಕಷ್ಟಕ್ಕೆ ದೂಡುತ್ತದೆ ಎಂಬ ಮಾತು ಅಕ್ಷರಶಃ ಸತ್ಯವಾಗಿದೆ.ಇಂದಿನ ಗಡಿಬಿಡಿ ಜಗದಲ್ಲಿ ಎಲ್ಲವೂ ತತ್ ಕ್ಷಣವೇ ನೆರವೇರಬೇಕು.ಏನಾದರೂ ಕಾರ್ಯ ಮಾಡುವಾಗ ಬೇಗನೆ ಯಶಸ್ಸು ದೊರೆಯದಿದ್ದರೆ ಅಥವಾ ತಕ್ಷಣವೇ ಮುಗಿಯದಿದ್ದರೆ ಇನ್ನೊಂದು ಕೆಲಸಕ್ಕೆ ಕೈ ಹಾಕುತ್ತಾರೆ.ಆಗ ಸಾಧಿಸಬೇಕೆಂಬ ಆಸೆಯು ಕಮರಿ ಹೋಗುತ್ತದೆ.ಇದರ ಮಹತ್ವವನ್ನು ಅರಿತರೆ ಜೀವನವು ಬಂಗಾರವಾಗುತ್ತದೆ.ಇಲ್ಲದಿರೆ ಭಸ್ಮವಾಗುತ್ತದೆ.ಯಾವುದೇ ಕ್ಷೇತ್ರದಲ್ಲಿ ಕಾರ್ಯ ಮಾಡುತ್ತೇವೆ ಅಂದರೆ ತಕ್ಷಣವೇ ಪ್ರತೀಫಲ ಸಿಗದು ಉದಾಹರಣೆ ಕೃಷಿ ಕ್ಷೇತ್ರದಲ್ಲಿ ರೈತನು ಮುಂಜಾನೆ ಬೀಜ ಬಿತ್ತಿದರೆ ಸಂಜೆ ಬೆಳೆ ಬರುತ್ತದೆಯೇ ? ಇಲ್ಲ.ಅದಕ್ಕಾಗಿ ಸಮಯ ಬೇಕು.ಅವುಗಳನು ಸರಿಯಾದ ರೀತಿಯಲ್ಲಿ ಪೋಷಣೆ ಮಾಡುತಲಿದ್ದರೆ. ನಿಶ್ಚಿತ ಸಮಯಕ್ಕೆ ಬೆಳೆ ಬಂದು ರೈತನ ಶ್ರಮಕ್ಕೆ ಫಲ ಸಿಗುತ್ತದೆ.ಹೀಗೆಯೇ ಯಾವುದೇ ಕಾರ್ಯಕ್ಷೇತ್ರದಲ್ಲಿ ತೊಡಗಿದ್ದೇವೆ ಎಂದರೆ ತಾಳ್ಮೆಯು ಬಹುಮುಖ್ಯ.ಇದು ಆಂತರಿಕ ಬಾಹ್ಯ ಗುಣಗಳಿಗೆ ಮೂಲ ಆಧಾರಸ್ತಂಭವಾಗಿದೆ.
ಯುವಕರು ತಾಳ್ಮೆಯಿಂದ ಇರಲು ಈ ಕೆಳಗಿನ ಕ್ರಮಗಳನ್ನು ಅನುಸರಿಸಿದ್ದೆ ಆದರೆ ಸಂತೃಪ್ತದಿಂದ ಬದುಕಲಿ ಪ್ರತೀಫಲ ಬಯಸಿ ಸಾಧಿಸಲು ಸಾಧ್ಯ.
1.ಅವಸರವನ್ನು ಮಾಡದೆ ಹೆಚ್ಚಿನ ಸಮಯ ಮೀಸಲಿಡಬೇಕು.
2.ಕಾರ್ಯದ ಪರಿಮಿತಿ,ವ್ಯಾಪ್ತಿ ತಿಳಿಯದೆ ದುಡುಕಬಾರದು
3.ಪರಿಸ್ಥಿತಿಯ ಲೆಕ್ಕಿಸದೆ ತಟಕ್ಕನೆ ನಿರ್ಧಾರ ತೆಗೆದುಕೊಳ್ಳದೆ ಸಹನ ರೀತಿಯಿಂದ ಇರಬೇಕು.
4.ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಮೈಗೂಡಿಸಿಕೊಳ್ಳಬೇಕು.
5.ಸಮಯದ ವ್ಯಯಕ್ಕಿಂತ ಯಶಸ್ಸಿಗೆ ಪ್ರಾಶಸ್ತ್ಯ ನೀಡಬೇಕು
6.ಕೋಪವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು
7.ತಾಳ್ಮೆಯೇ ಯಶಸ್ಸಿಗೆ ಮೇರು ಎಂಬುದನ್ನು ಅರಿತಿರಬೇಕು
8.ತಾಳ್ಮೆಯು ಎಲ್ಲಕ್ಕಿಂತ ಶ್ರೇಷ್ಠ ಎಂದು ಮನವರಿಕೆ ಮಾಡಿಕೊಳ್ಳಬೇಕು
9.ದೀರ್ಘಾವಧಿ ಸಮಸ್ಯೆಗಳಿಗೆ ಕುಗ್ಗದೆ ಎದುರಿಸುವ
ಚಾಕ್ಯತೆ ತಿಳಿಬೇಕು.
10.ಯಾವುದೇ ಕಾರ್ಯಕ್ಕೂ ಗಡಿಬಿಡಿ ಮಾಡಬಾರದು
11.ತಾಳ್ಮೆಯೇ ಜೀವನಕ್ಕೆ ದಾರಿದೀಪ ಎಂಬುದನು ಅರಿತಿರಬೇಕು.
12.ತಾಳ್ಮೆಯೇ ಸಕಲ ಕಾರ್ಯಕ್ಕೆ ಮುನ್ನುಡಿ ಎಂಬ ತಿಳುವಳಿಕೆಯಿರಬೇಕು.
13.ತಾಳ್ಮೆಯಿದ್ದರೆ ಎಲ್ಲವೂ ಸಾಧ್ಯ ಇಲ್ಲದಿರೆ ಸಾಧ್ಯವೂ ಅಸಾಧ್ಯ ಎಂಬ ಪರಿಪಕ್ವತೆ ಇರಬೇಕು.
ಹೀಗೆ ಈ ಎಲ್ಲ ಕ್ರಮಗಳನ್ನು ಪಾಲಿಸುವುದಲ್ಲದೆ ಧೃತಿಗೆಡದೆ ಸಹನೆಯಿಂದ ಯಾವುದೇ ಕ್ಷೇತ್ರದಲ್ಲೂ ಮುನ್ನಡೆದು ಬದುಕು ರೂಪಿಸಿಕೊಳ್ಳಬೇಕು.ಜೊತೆಗೆ ಅನುಭವಿಗಳು,ಪಾಲಕರು ಗುರುಗಳು ಹೇಳಿದ ಹಾಗೆ ತಾಳ್ಮೆಯಿಂದ ಪ್ರತಿಯೊಂದನ್ನು ಅರಿತು ಬೆರೆತು ಸಾಗಿದರೆ ವ್ಯಕ್ತಿತ್ವಕ್ಕೆ,ಮನೆತನಕ್ಕೆ,ಕಾರ್ಯಕ್ಕೆ,ಸಮಯಕ್ಕೆ ಬೆಲೆ ಸಿಗುವುದಲ್ಲದೆ ಮತ್ತೊಬ್ಬರು ಅನುಸರಿಸುತ್ತಾರೆ.ತಾಳ್ಮೆಯೇ ಸಕಲ ಐಶ್ವರ್ಯಕ್ಕಿಂತ ಮಿಗಿಲು.ನೀಡುವುದು ಊಹಿಸಲಾಗದಷ್ಟು ಪ್ರತೀಫಲದ ಪಾಲು.ಆಗಲೇ ಗುಣಕ್ಕೂ ಸಂತಸ ಜೀವನಕ್ಕೂ ಉಲ್ಲಾಸ.ತಾಳ್ಮೆಯೇ ಸಾಧನೆಗೆ ಸ್ಫೂರ್ತಿ ಇದುವೇ ಹಬ್ಬಿಸುವುದು ಬಾನಗಲ ಕೀರ್ತಿ.
ತಾಳ್ಮೆಯಿಂದ ಇದ್ದರೆ ಕಾರ್ಯದಲಿ ಪ್ರತಿಫಲ ಇಲ್ಲದಿರೆ ವಿಫಲ.

ಅವಿನಾಶ ಸೆರೆಮನಿ


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು