December 23, 2024

Newsnap Kannada

The World at your finger tips!

flight , crime , delhi

ಸಿಬ್ಬಂದಿಗೆ ಥಳಿಸಿದ ಪ್ರಯಾಣಿಕ: ಲಂಡನ್​ಗೆ ಹೊರಟಿದ್ದ ವಿಮಾನ ದೆಹಲಿಗೆ ವಾಪಸ್

Spread the love

ವಿಮಾನ ಸಿಬ್ಬಂದಿಯೊಂದಿಗೆ ಪ್ರಯಾಣಿಕರೊಬ್ಬರು ಜಗಳವಾಡಿ ಥಳಿಸಿದ ಪರಿಣಾಮ ಲಂಡನ್​ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನವು ಮತ್ತೆ ದೆಹಲಿಗೆ ವಾಪಸ್ ಬಂದಿಳಿದಿದೆ.

ಏರ್ ಇಂಡಿಯಾ ವಿಮಾನ ದೆಹಲಿಗೆ ವಾಪಸ್ಸಾದ ನಂತರ ಆರೋಪಿ ಪ್ರಯಾಣಿಕರನ್ನು ಬಲವಂತವಾಗಿ ವಿಮಾನದಿಂದ ಕೆಳಗಿಳಿಸಲಾಗಿದೆ.

ಘಟನೆ ಕುರಿತು ವಿಮಾನಯಾನ ಸಂಸ್ಥೆ ದೆಹಲಿ ವಿಮಾನ ನಿಲ್ದಾಣ ಪೊಲೀಸರಿಗೆ ದೂರು ನೀಡಲಾಗಿದೆ.

ಈ ಪ್ರಯಾಣಿಕ ಈಗ ದೆಹಲಿ ವಿಮಾನ ನಿಲ್ದಾಣದಲ್ಲಿದ್ದಾರೆ. ವಿಮಾನದಲ್ಲಿ 225 ಪ್ರಯಾಣಿಕರಿದ್ದರು. ಸ್ವಲ್ಪ ಸಮಯದ ಬಳಿಕ ವಿಮಾನವು ಲಂಡನ್​ಗೆ ಹಾರಿತು.ಇದನ್ನು ಓದಿ –ಮಾಹಾರಾಷ್ಟ್ರದಲ್ಲಿ ದೇವಸ್ಥಾನದ ಶೆಡ್​​ ಮೇಲೆ ಉರುಳಿ ಬಿದ್ದ ಮರ; 7 ಜನ ಸಾವು – 30 ಮಂದಿಗೆ ಗಾಯ

Copyright © All rights reserved Newsnap | Newsever by AF themes.
error: Content is protected !!