January 15, 2025

Newsnap Kannada

The World at your finger tips!

char

ನಂಜನಗೂಡಿನಲ್ಲಿ ಪಾರ್ವತಿ ಅಮ್ಮನವರ ರಥದ ಚಕ್ರ ಪುಡಿ ಪುಡಿ : ಮತ್ತೇನು ಕಾದಿದೆಯೋ ಅಪಶಕುನ

Spread the love

ಮೈಸೂರಿನ ಜಿಲ್ಲೆಯ ನಂಜನಗೂಡು, ನಂಜುಂಡೇಶ್ವರ ದೇವಾಲಯದ ರಥೋತ್ಸವದ ವೇಳೆ ಶುಕ್ರವಾರ ಅಪಶಕುನ ಎದುರಾಗಿದೆ.

ಕೊರೋನಾ ಸೋಂಕಿನ ಭೀತಿಯ ನಡುವೆಯೂ 500 ಜನರಿಗೆ ಮಾತ್ರವೇ ಸೀಮಿತವಾಗಿದ್ದ ನಂಜನಗೂಡು ರಥೋತ್ಸವವನ್ನು ಆಚರಿಸಲಾಗುತ್ತಿದೆ.

ದೊಡ್ಡ ರಥಗಳನ್ನು ಎಳೆಯಲು ಜನರಿಲ್ಲದ ಕಾರಣ, ಸಣ್ಣ ರಥಗಳಲ್ಲಿಯೋ ಈ ಬಾರಿಯ ರಥೋತ್ಸವನ್ನು ಎಳೆದು ನಡೆಸಲಾಗಿದೆ.

ನಂಜುಂಡೇಶ್ವರ, ಗಣೇಶನ ರಥ ಎಳೆದ ನಂತರ ಪಾರ್ವತಿ ಅಮ್ಮನವರ ರಥವನ್ನು ಎಳೆಯುವುದಕ್ಕೆ ಅರಂಭಿಸಿದ ವೇಳೆ ಮಾಡಿದ ನಂತರ ಎರಡು ಉರುಳು ಚಕ್ರ ಉರುಳಿದಾಗ, ರಥದ ಒಂದು ಚಕ್ರ ಪುಡಿ ಪುಡಿ ಆಗಿದೆ. ಇದರಿಂದಾಗಿ ಪಾರ್ವತಿ ಅಮ್ಮನವರ ರಥೋತ್ಸವ ಅರ್ಧಕ್ಕೆ ನಿಂತಿದೆ.

ನಂತರ ಪಾರ್ವತಿ ಅಮ್ಮನವರ ದೇವರನ್ನು ಮತ್ತೊಂದು ರಥದಲ್ಲಿ ಇಟ್ಟು, ತೇರನ್ನು ಎಳೆಯಲಾಯಿತು. ಈ ಮೂಲಕ ಕೊರೋನಾ ಭೀತಿ ನಡುವೆ ಮತ್ತೊಂದು ಅಪಶಕುನ ಎದುರಾಗಿದೆ. ಇದು ಭಕ್ತಾದಿಗಳಲ್ಲಿ ಆತಂಕವನ್ನು ಉಂಟು ಮಾಡಿದೆ.

Copyright © All rights reserved Newsnap | Newsever by AF themes.
error: Content is protected !!