Editorial

ಪರಿವ್ರಾಜಕ ವೀರ ಸಂನ್ಯಾಸಿ

  • ಇಂದು ವಿವೇಕಾನಂದರ ಪುಣ್ಯ ಸ್ಮರಣೆ

ಆ ವ್ಯಕ್ತಿತ್ವ ಚಿರತಾರುಣ್ಯದ ಪ್ರತೀಕ! ಆ ವ್ಯಕ್ತಿತ್ವದ ಪ್ರತಿಯೊಂದು ಆಯಾಮವು, ಉತ್ಸಾಹದ, ಧೀರತೆಯ ಮತ್ತು ದೈವಿಕತೆಯ ದ್ಯೋತಕ! ತನ್ನ ಧೀರ ಗಂಭೀರ ನಿಲುವು, ಅಸಿಮವಾದ ಜ್ಞಾನ ಸಂಪನ್ನತೆ ಮತ್ತು ಅತುಲನೀಯವಾದ ಪಾವಿತ್ರ್ಯದಿಂದ, ಪೌರ್ವಾತ್ಯ ಹಾಗೂ ಪಾಶ್ಚತ್ಯ ರಾಷ್ಟ್ರಗಳ ಆದರಗಳನ್ನು ತನ್ನತ್ತ ಸೆಳೆದುಕೊಂಡ ಪೂಜೆಯನೀಯ ವ್ಯಕ್ತಿತ್ವ.! ತನ್ನ ಉತ್ಕೃಷ್ಟತೆಯ ಪ್ರಕಾಶದಿಂದ ಸಾವಿರಾರು ಹೃದಯಗಳಲ್ಲಿ ಸ್ವಾಭಿಮಾನದ ಸೊಡರನ್ನು ಹೊತ್ತಿಸಿ, ಧೈನ್ಯದ ಕತ್ತಲಲ್ಲಿ ಮುಳುಗಿದ್ದ ರಾಷ್ಟ್ರದಲ್ಲಿ ಸ್ವಸಾಮರ್ಥ್ಯದ ದೀಪಾವಳಿಯನ್ನು ಉಂಟು ಮಾಡಿದ ಉಜ್ವಲ ವ್ಯಕ್ತಿತ್ವ! ತಾನು ಸಂದ ಬಳಿಕವೂ ತನ್ನ ಚಿಂತನಾ ಲಹರಿಯೊಂದಿಗೆ ಸಂಪರ್ಕಕ್ಕೆ ಬರುವವರಿಗೆ ಸ್ಪೂರ್ತಿಯನ್ನು ನಿರಂತರವಾಗಿ ನೀಡುವ ಅಕ್ಷಯ ವ್ಯಕ್ತಿತ್ವ ! ಹೀಗೆ ಸರ್ವ ವಿಧದಿಂದಲೂ ಆಧುನಿಕ ಜನಾಂಗಕ್ಕೆ ಮಾದರಿ ಎನಿಸಬಲ್ಲ ಆ ವ್ಯಕ್ತಿತ್ವ ಓರ್ವ ವೀರ ಸoನ್ಯಾಸಿಯದು! ಆ ಮಹಾಸoನ್ಯಾಸಿಯೇ “ಸ್ವಾಮಿ ವಿವೇಕಾನಂದರು” !….. .ಇಂದು ಈ ಮಹಾನ್ ಚೇತನದ ಪುಣ್ಯಸ್ಮರಣಾ ದಿನ.

ಅಪರೂಪದಲ್ಲಿ ಅಪರೂಪದ ಅಪೂರ್ವ ವ್ಯಕ್ತಿತ್ವವನ್ನು ಹೊಂದಿದ ಸ್ವಾಮಿ ವಿವೇಕಾನಂದರ ವ್ಯಕ್ತಿತ್ವದ ಔನ್ನತ್ಯವನ್ನು ಕುರಿತು ಭಾವಿಸಿದಷ್ಟೂ ನಮ್ಮ ವ್ಯಕ್ತಿತ್ವ ಸಂಸ್ಕರಣಗೊಳ್ಳುತ್ತದೆ. ಈ ಪರಮ ಪವಿತ್ರದಿನದಂದು ಎಂದೆಂದಿಗೂ ಶೋಭಾಯಮಾನವಾಗಿರುವ ಅವರ ಅಪೂರ್ವ ವ್ಯಕ್ತಿತ್ವವನ್ನು ನಾವೆಲ್ಲರೂ ಸ್ಮರಿಸೋಣವೇ….

ಆತ್ಮಜ್ಞಾನದ ಚಕ್ರವರ್ತಿ.

ಕಟ್ಟು ಮಸ್ತಾದ ಅಪ್ಪಟ ಹಿಂದೂಸ್ತಾನಿ ಶರೀರ ರಚನೆ, ನುಣ್ಣಗೆ ಕ್ಷೌರ ಮಾಡಿಸಿಕೊಂಡ ದುಂಡುಮುಖ, ಸಾಮು ಮಾಡಿ ನಿರ್ಮಿಸಿಕೊಂಡ ಸದೃಢ ಶರೀರ, ಎತ್ತರದ ನಿಲುವು, ಶ್ವೇತ ದಂತಪಂಕ್ತಿ, ಸಂಭಾಷಣೆ ನಡೆಸುವಾಗ ಮುಗುಳುನಗೆಯೊಂದಿಗೆ ನಸುಬಿರಿಯುವ ಸುಂದರವಾಗಿ ಕಟೆಯಲ್ಪಟ್ಟಿರುವ ತುಟಿಗಳು, ಸ್ಥಿರವಾದ ಶಿರದ ಮೇಲೆ ಮುಕುಟದಂತೆ ಶೋಭಿಸುವ ತಿಳಿಹಳದಿ ಅಥವಾ ಕೆಂಪು ಬಣ್ಣದ ಪೇಟ, ಕೇಸರಿ ಮತ್ತು ಕಡುಗೆoಪು ಮಿಶ್ರಿತ ವರ್ಣದ ಮಂಡಿಯುದ್ಧದ ನೀಳ ನಿಲುವಂಗಿ, ಅದಕ್ಕೊಪ್ಪುವ ಸೊಂಟಪಟ್ಟಿ, ದೈನ್ಯತೆಯ ಸೊಂಕೇ ಇಲ್ಲದ ಧೀರತೆಗಳು, ಪರಿಶ್ರಮಪೂರ್ವಕವಾಗಿ ಗಳಿಸಿದ ವಿದ್ಯೆ, ಸದಾ ಜಾಗೃತವಾಗಿದ್ದ ಆತ್ಮವಿಶ್ವಾಸ, ಸದ್ಗುಣಗಳಿಂದ ಕೂಡಿದ ಅಂತರಂಗದ ಸಿರಿವಂತಿಕೆ, ಪರಮ ಪವಿತ್ರ ಚಾರಿತ್ರ್ಯದ ಬಲ ಮತ್ತು ತಪಸ್ಸಿನಿಂದ ಉದಿಸಿದ ಕಾಂತಿಯು ಸ್ವಾಮೀಜಿಯವರ ವ್ಯಕ್ತಿತ್ವಕ್ಕೆ ರಾಜಕಳೆಯನ್ನು ಕೊಟ್ಟಿದ್ದವು.

ಬಹುಮುಖಿ

ಬಾಲ್ಯದಿಂದಲೂ ಸ್ವಾಮಿ ವಿವೇಕಾನಂದರು ಬಹುಮುಖ ಕಲಿಕೆಗೆ ಮತ್ತು ನಿರಂತರ ಚಟುವಟಿಕೆಯಿಂದ ಕೂಡಿರುವ ವ್ಯಕ್ತಿತ್ವಕ್ಕೆ ಜ್ವಲಂತ ಉದಾಹರಣೆಯಾಗಿದ್ದರು. ಪಠ್ಯ ವಿಷಯಗಳ ಜೊತೆ ಜೊತೆಗೆ ಮಹಾಭಾರತ ರಾಮಾಯಣವನ್ನು ಕಲಿತ ಬಾಲಕ ನರೇಂದ್ರರು ಕುದುರೆ ಸವಾರಿ, ಈಜು ಲಾಠಿ ಬೀಸುವುದು, ಮಲ್ಲಯುದ್ಧ ಮೊದಲಾದ ಕ್ರೀಡೆಗಳಲ್ಲಿ ಪ್ರವೀಣರಾಗಿದ್ದರು. ಉತ್ತಮವಾಗಿ ಚಿತ್ರಬಿಡಿಸುವುದರ ಜೊತೆಗೆ ಶಾಸ್ತ್ರೀಯ ಸಂಗೀತವನ್ನು ಕಲಿತು, ತಬಲಾ, ಪಕವಾಜ್, ಸಿತಾರ್ ಮುಂತಾದ ಸಂಗೀತ ವಾದ್ಯಗಾರರಾಗಿದ್ದರು. ಉತ್ತಮ ನಾಟಕಕಾರರಾಗಿದ್ದ ನರೇಂದ್ರರು slide ಪ್ರೊಜೆಕ್ಟರ್ ಮೂಲಕ ಚಿತ್ರ ಬಿಡಿಸುವುದು ಹಾಗೂ ಬೆರಳ ನೆರಳಾಟ ಮಾಡುವುದನ್ನು ಕಲಿತಿದ್ದರು. ಹೀಗೆ ಸದಭ್ಯಾಸ ಹಾಗೂ ಸ್ವಚ್ಛ ಹವ್ಯಾಸಗಳನ್ನು ಮೈಗೂಡಿಸಿ ಕೊಂಡ ಬಹು ವ್ಯಕ್ತಿತ್ವದ ಸ್ಪರ್ಶ ಮಣಿಯೆನಿಸಿದ್ದರು.

ಜ್ಞಾನಭಂಡಾರಿ

ಅಪರಿಮಿತ ಜ್ಞಾನಭಂಡಾರವನ್ನು ಹೊಂದಿದ್ದ ಸ್ವಾಮೀಜಿಯವರನ್ನು “ನಮ್ಮ ಮೇಧಾವಿಗಳಾದ ಪ್ರೊಫೆಸರ್ರನ್ನೆಲ್ಲಾ ಒಟ್ಟುಗೂಡಿಸಿದರೂ ಅವರನ್ನೆಲ್ಲ ಮೀರಿಸುವ ವ್ಯಕ್ತಿಯೊಬ್ಬರು ಇಲ್ಲಿದ್ದಾರೆ” ಎಂದು ಹೇಳುತ್ತಿದ್ದರಂತೆ ಹಾರ್ಡ್ವರ್ಡ್ ವಿಶ್ವವಿದ್ಯಾಲಯದ ಗ್ರೀಕ್ ಸಾಹಿತ್ಯ ಪ್ರಾಧ್ಯಾಪಕರಾಗಿದ್ದ ಪ್ರೊ. ಜಾನ್ ಹೆನ್ರಿ ರೈಟ್. ಪೌರ್ವಾತ್ಯ ಮತ್ತು ಪಾಶ್ಚಾತ್ಯ ರಾಷ್ಟಗಳ ಇತಿಹಾಸ, ಸಾಹಿತ್ಯ, ತತ್ವಶಾಸ್ತ್ರ, ಸಮಕಾಲೀನ ವಿಜ್ಞಾನ, ಹಲವಾರು ಭಾಷೆಗಳು ಮತ್ತು ವಿವಿಧ ವಿಷಯಗಳಲ್ಲಿ ಅವರಿಗೆ ಅಪರಿಮಿತ ಜ್ಞಾನದ ಮಾಹಿತಿಯಿತ್ತು. ಅವರ ಕಲಿಕೆಯ ಗತಿ ವೇಗವಾಗಿದ್ದು ಗ್ರಹಣ ಸಾಮರ್ಥ್ಯ ಅತ್ಯುನ್ನತ ಮಟ್ಟದ್ದಾಗಿತ್ತು. ಸ್ವಾಮೀಜಿಯವರಿಗೆ ವಿಶ್ವದಾದ್ಯಂತ ಪಂಡಿತರು ಹಾಗೂ ಪ್ರತಿಭಾನ್ವಿತರಿಂದ ಸಂದ ಮನ್ನಣೆಯ ಸಂಖ್ಯೆ ಗಣನೆಗೆ ಊಹೆಗೂ ನಿಲುಕದ್ದು.

ಆತ್ಮವಿಶ್ವಾಸಿ

ಆತ್ಮವಿಶ್ವಾಸ ಸ್ವಾಮೀಜಿಯವರ ಸ್ವಭಾವ ಸಹಜ ಗುಣ. ಅವರ ಪ್ರಕಾರ ಆತ್ಮವಿಶ್ವಾಸವೆಂದರೆ, ಮೂವತ್ತು ಮೂರು ಕೋಟಿ ದೇವತೆಗಳಲ್ಲಿ ನಿಮಗೆ ನಂಬಿಕೆಯಿದ್ದು, ಪರಕೀಯರು ನಿಮ್ಮ ನಡುವೆ ತಂದು ಬಿತ್ತಿದ ದೇವತೆಗಳಲ್ಲಿ ನಂಬಿಕೆಯಿದ್ದು, ನಿಮ್ಮಲ್ಲೇ ನಿಮಗೆ ನಂಬಿಕೆ ಇಲ್ಲದಿದ್ದರೆ, ನಿಮಗೆ ಮುಕ್ತಿ ಇಲ್ಲ, ಜನ ಹೇಳುತ್ತಾರೆ “ಅವನನ್ನು ನಂಬು ಇವನನ್ನು ನಂಬು, ಎಂದು ಆದರೆ ನಾನು ಹೇಳುತ್ತೇನೆ “ನಿನ್ನನ್ನು ನೀನು ನಂಬು”. ನಿಜಕ್ಕೂ ಇದು ಸ್ವಾಮೀಜಿಯವರ ಜೀವನದಲ್ಲಿನ ಅತಿಪ್ರಮುಖವಾದ ಅಂಶ ಅವರ ಆತ್ಮವಿಶ್ವಾಸ. ಈ ಆತ್ಮವಿಶ್ವಾಸವು ಅತ್ಯಂತ ಅನಿರೀಕ್ಷಿತ ಸಂದರ್ಭಗಳಲ್ಲೂ ಹೊರಹೊಮ್ಮಿ ಅವರು ಕೈಗೊಂಡ ಪ್ರತೀ ಕಾರ್ಯದಲ್ಲಿ ಯಶಸ್ಸನ್ನು ತಂದುಕೊಡುತ್ತಿತ್ತು.

ಅತ್ಮಾಭಿಮಾನಿ

ಎಂಥಾ ಕಠಿಣ ಪರಿಸ್ಥಿತಿಗಳೇ ಎದುರಾಗಲಿ ಕಿಂಚಿತ್ತೂ ಕ್ಷಿತಿಬಾರದಂತೆ ಆತ್ಮಗೌರವವನ್ನು ಕಾಪಾಡಿಕೊಳ್ಳುವ ಮಹಾಗುಣ ಸ್ವಾಮೀಜೀಯವರಲ್ಲಿತ್ತು. ನಮ್ಮ ದೇಶ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ , ವಿವೇಕಾನಂದರು ಭಾರತೀಯರನ್ನು ಕುರಿತು ನೋಡಿ, ಈ ಐರೋಪ್ಯರೊಂದಿಗೆ ವ್ಯವಹರಿಸುವಾಗ ನಮ್ಮಲ್ಲಿ ಮುಖ್ಯವಾಗಿ ಇರಬೇಕಾದದ್ದು ಆತ್ಮ ಗೌರವ ನಾವು ಯಾರ ಬಳಿ ಹೇಗೆ ವರ್ತಿಸಬೇಕೋ ಹಾಗೆ ವರ್ತಿಸುವುದಿಲ್ಲ ಆದ್ದರಿಂದಲೇ ಅವರು ನಮ್ಮನ್ನು ಶೋಷಿಸಲು ಮುಂದಾಗುತ್ತಾರೆ ಇತರರ ಮುಂದೆ ನಮ್ಮ ಘನತೆಯನ್ನು ನಾವು ಬಿಟ್ಟುಕೊಡಬಾರದು ಇಲ್ಲದಿದ್ದರೆ ಇತರರು ನಮ್ಮನ್ನು ಹೀನಾಯವಾಗಿ ನೋಡಲು ಅವಕಾಶ ನೀಡಿದಂತಾಗುತ್ತದೆ ಎಂದು ಆತ್ಮಗೌರವದ ಮಹತ್ವವನ್ನು ತಿಳಿಸುತ್ತಾ ಎಲ್ಲರಲ್ಲೂ ಆತ್ಮ ಗೌರವವನ್ನು ತುಂಬುವ ಪ್ರಯತ್ನ ಮಾಡುತ್ತಿದ್ದರು.

ಪಾವಿತ್ರ್ಯ ಮೂರ್ತಿ

ಸ್ವಾಮೀಜಿಯವರ ವ್ಯಕ್ತಿತ್ವದ ಅತ್ಯಂತ ಪ್ರಧಾನವಾದ ಅಂಶ ಎಂದರೆ ಅವರ ಪರಮ ಪವಿತ್ರವಾದ ಚಾರಿತ್ರ್ಯ. ಬಾಲ್ಯದಿಂದಲೂ ಅವರು ಕಟ್ಟುನಿಟ್ಟಿನ ಬ್ರಹ್ಮಚರ್ಯವನ್ನು ಪಾಲಿಸಿಕೊಂಡು ಬಂದಿದ್ದ ಅವರಲ್ಲಿ ಎಂದಿಗೂ ಮನದೊಳಗೆ ಸ್ತ್ರೀಯರ ಕುರಿತಾಗಿ ಮಲಿನವಾದ ಭಾವನೆ ಮೂಡದಷ್ಟು ಪವಿತ್ರವಾಗಿತ್ತು ಅವರ ವ್ಯಕ್ತಿತ್ವ. ಈ ಅದ್ಭುತ ಬ್ರಹ್ಮಚರ್ಯದ ಪರಿಶುದ್ಧತೆಯೇ ಅವರು ಜೀವನದಲ್ಲಿ ಸಾಧಿಸಿದ ಅಭೂತಪೂರ್ವ ಯಶಸ್ಸಿಗೆ ಕಾರಣವೆನ್ನುವುದು ಪರಮ ಸತ್ಯ.

ರಾಷ್ಟ್ರಭಕ್ತ ಸoನ್ಯಾಸಿ

ಧಮನಿ ಧಮನಿಗಳಲ್ಲಿ ದೇಶಭಕ್ತಿಯನ್ನು ತುಂಬಿಕೊಂಡು, ಪರಕೀಯರ ಆಳ್ವಿಕೆಗೆ ಸಿಲುಕಿ ತನ್ನತನವನ್ನು ಕಳೆದುಕೊಂಡು, ದಾರಿದ್ರ ಅಜ್ಞಾನಗಳಲ್ಲಿ ತೊಳಲುತ್ತಿದ್ದ ನಮ್ಮ ದೇಶವನ್ನು ಆಧ್ಯಾತ್ಮ ಜ್ಞಾನದ ಸಂಪತ್ತನ್ನು ಪಾಶ್ಚಾತ್ಯ ರಾಷ್ಟ್ರಗಳಿಗೆ ನೀಡಿ ಬದಲಿಗೆ ವಿಜ್ಞಾನ- ತಂತ್ರಜ್ಞಾನಗಳ ನೆರವನ್ನು ಅವರು ಬೇರೆ ರಾಷ್ಟ್ರಗಳಿಂದ ಪಡೆದುಕೊಳ್ಳಲು ತಮ್ಮ ಜೀವನವನ್ನೇ ಈ ವಿನಿಮಯ ಕಾರ್ಯಕ್ಕಾಗಿ ಹವಿಸ್ಸಾಗಿ ನೀಡಿದ ಮಹಾಚೇತನ ಸ್ವಾಮಿ ವಿವೇಕಾನಂದರು. ಒಮ್ಮೆ ಮಿಸ್ ಜೋಸೆಫ್ ಇನ್ ಮೆಕ್ಲಾಡ್ ಸ್ವಾಮೀಜಿಯವರನ್ನು ನಾನು ನಿಮಗೆ ಯಾವ ರೀತಿಯಲ್ಲಿ ನೆರವಾಗಬಲ್ಲೇ ಎಂದು ಕೇಳಿದಾಗ ತಕ್ಷಣ ಸ್ವಾಮೀಜಿಯವರು “ಭಾರತವನ್ನು ಪ್ರೀತಿಸು” ಎಂದರಂತೆ. ನಮಗೆ ನಿಜವಾದ ರಾಷ್ಟ್ರ ಭಕ್ತಿಗೆ ಇದಕ್ಕಿಂತ ಉಜ್ವಲ ಉದಾಹರಣೆ ದೊರೆಯಲು ಸಾಧ್ಯವೇ.

ಪ್ರಭಾವಿಮುಖಿ

ಚಿಕಾಗೋ ನಗರದ ದಟ್ಟ ವಾತಾವರಣದ ನಡುವೆ ಪ್ರಖರ ಪಿತಾರುಣ ವಸ್ತ್ರವನ್ನು ಧರಿಸಿ ಭಾರತೀಯ ಸೂರ್ಯನಂತೆ ಗಂಗೊಳಿಸುತ್ತಿದ್ದ ತೇಜಸ್ವಿ ಮೂರ್ತಿ, ಸಿಂಹ ಸದೃಶ ಶಿರ, ಅಂತರಂಗವನ್ನು ಒಳಹೊಕ್ಕು ನೋಡಬಲ್ಲ ದೃಷ್ಟಿ, ಚುರುಕಿನ ಚಲನವಲನ, ಜನರೆಲ್ಲರೂ ಅವರನ್ನು ಸoನ್ಯಾಸಿ ಎಂದು ಕರೆಯುತ್ತಿದ್ದರು ಹೌದು ಅವರೊಬ್ಬ ಯೋಧ ಸoನ್ಯಾಸಿಯೇ ಆದರೆ ಪ್ರಥಮ ನೋಟದಲ್ಲಿ ನನಗೆ ಅವರು ಸoನ್ಯಾಸಿಗಿಂತ ಹೆಚ್ಚಾಗಿ ಯೋಧನಂತೆ ಕಂಡುಬಂದರು ಅವರಲ್ಲಿ ರಾಷ್ಟ್ರಾಭಿಮಾನ ಸ್ವಜನಾಭಿಮಾನಗಳು… ಕಿಡಿಗಳಂತೆ ಸಿಡಿಯುತ್ತಿದ್ದವು.. ಎಂಬ ಈ ಮೇಲಿನ ಮಾತುಗಳನ್ನು ಶ್ರೀಮತಿ ಅನಿಬೆಸೆಂಟ್ ಅವರು ಚಿಕಾಗೋದ ಸರ್ವಧರ್ಮ ಸಮ್ಮೇಳನದ ಸಮಾರಂಭದಲ್ಲಿ ಸ್ವಾಮಿ ವಿವೇಕಾನಂದರೆಂಬ ಪುರುಷ ಸಿಂಹನನ್ನು ಕಂಡು ವರ್ಣಿಸಿದ ಪರಿ. ಎಂತಾ ಅದ್ಭುತವಾದ ಮಾತುಗಳಿವು ಹೌದು ಅಂದು ತಮ್ಮ ಪ್ರಭಾವಿ ವ್ಯಕ್ತಿತ್ವದಿಂದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮೀಜಿಯವರು ಅದ್ಭುತ ಉಪನ್ಯಾಸವನ್ನು ನೀಡಿ ಇಡೀ ಜಗತ್ತನ್ನು ಮಂತ್ರ ಮುಗ್ಧಗೊಳಿಸಿ ಭಾರತದ ಗೌರವದ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದರು.

ಅಂತಃಸತ್ವಿ

ಸ್ತ್ರೀಯರಿಗೆ ಸ್ವಾತಂತ್ರ್ಯವೇ ಇಲ್ಲದಿದ್ದ ಅಂದಿನ ದಿನಗಳಲ್ಲಿ, ಅವರ ಸರ್ವತೋಮುಖ ಅಭಿವೃದ್ಧಿಗಾಗಿ ವಿದ್ಯಾಭ್ಯಾಸವನ್ನು ಅಂದರೆ, ಧರ್ಮಶಾಸ್ತ್ರಗಳು, ಸಾಹಿತ್ಯ, ಸಂಸ್ಕೃತಿ, ವ್ಯಾಕರಣ ಮತ್ತು ಇಂಗ್ಲೀಷ್ ಭಾಷೆಯ ಜೊತೆಗೆ ಹೊಲಿಗೆ, ಅಡುಗೆ, ಮನೆವಾರ್ತೆಯ ಕೆಲಸಗಳು, ಮಕ್ಕಳಿಗೆ ಲಾಲನೆ ಪಾಲನೆಗಳ ಜೊತೆಗೆ ಜಪ – ಧ್ಯಾನ ಮತ್ತು ಪೂಜೆಯಲ್ಲೂ ತರಬೇತಿಯನ್ನು ನೀಡಬೇಕೆಂಬುದರ ನಿಟ್ಟಿನಲ್ಲಿ ಸ್ತ್ರೀಯರಿಗೆ ಮೀಸಲಾದ ಮಠ ಒಂದನ್ನು ಸ್ಥಾಪಿಸುವ ಇಚ್ಛೆ ಸ್ವಾಮೀಜಿಯವರದಾಗಿತ್ತು. “ಒಳ್ಳೆಯ ವಿದ್ಯಾಭ್ಯಾಸವನ್ನು ಕೊಟ್ಟರೆ ಸ್ತ್ರೀಯರು ತಮ್ಮ ಸಮಸ್ಯೆಗಳನ್ನು ತಾವೇ ಪರಿಹರಿಸಿಕೊಳ್ಳುತ್ತಾರೆ ಇನ್ನು ಅವರ ವಿಷಯದಲ್ಲಿ ಇತರರ ಹಸ್ತಕ್ಷೇಪದ ಅಗತ್ಯವಿರುವುದಿಲ್ಲ” ಎನ್ನುತ್ತ ಸ್ತ್ರೀಯರ ಅಂತಃಸತ್ವದಲ್ಲಿ ಅವಿಚಲ ವಿಶ್ವಾಸವನ್ನು ತೋರಿದ ಏಕೈಕ ವ್ಯಕ್ತಿ ಸ್ವಾಮೀಜಿಯವರು.

ಹಸನ್ಮುಖಿ

“ಜೋಲುಮೋರೆ ಎಂದಿಗೂ ಧರ್ಮವೆನಿಸಲಾರದು. ನೀನು ಸದಾ ಪ್ರಸನ್ನನಾಗಿದ್ದರೆ ಮತ್ತು ಹಸನ್ಮುಖಿಯಾಗಿದ್ದರೆ, ಅದು ನಿನ್ನನ್ನು ಯಾವುದೇ ಪ್ರಾರ್ಥನೆಗಿಂತಲೂ ಹೆಚ್ಚಾಗಿ ಭಗವಂತನ ಸಮೀಪಕ್ಕೆ ಕರೆದೊಯ್ಯುತ್ತದೆ! ಎಂದು,ತಮ್ಮ ಅನುಯಾಯಿಗಳಿಗೆ ಅವರು ಆಗಾಗ ಹೇಳುತ್ತಿದ್ದ ಮಾತುಗಳಿವು. “ನಿನ್ನ ಮುಖ ಜೋಲು ಬಡಿದುಕೊಂಡಿದ್ದರೆ ಅಂದು ನೀನೆಲ್ಲೂ ಹೋಗಲೇಬೇಡ ಸುಮ್ಮನೆ ಕೋಣೆಯೊಳಗೆ ಹೋಗಿ, ಬಾಗಿಲು ಮುಚ್ಚಿಕೋ ಆ ಜ್ಯಾಡ್ಯವನ್ನು ಜಗತ್ತಿನಲ್ಲೆಲ್ಲ ಹರಡಲು ನಿನಗೇನು ಹಕ್ಕು? ಎಂದು…. ಇವು ನಿಜಕ್ಕೂ ಎಷ್ಟು ಅರ್ಥಪೂರ್ಣ ಹಾಗೂ ಅದ್ಭುತವಾದ ಮಾತುಗಳು. ಸ್ವಾಮಿ ವಿವೇಕಾನಂದರ ಸಾನಿಧ್ಯ ಅವರ ವ್ಯಕ್ತಿತ್ವದಂತೆ ಸದಾ ಆನಂದಮಯ! ಅವರಿರುವಲ್ಲೆಲ್ಲ ತಿಳಿಹಾಸ್ಯದ ಲಹರಿ! ಸರ್ವದಾ ಆನಂದದಿಂದಿರುತ್ತ ನಗೆಮೊಗದಿಂದ ಬಾಳುವುದು ಆಧ್ಯಾತ್ಮಿಕ ಜೀವನದ ಲಕ್ಷಣ ಎನ್ನುವ ವಿವೇಕವನ್ನು ಜಗತ್ತಿಗೆ ತಿಳಿಸಿಕೊಟ್ಟ ಪ್ರಭುದ್ಧ ವ್ಯಕ್ತಿತ್ವ ಸ್ವಾಮೀಜಿಯವರದು.

ಜೀವನ್ಮುಖಿ

ಕಬ್ಬಿಣದಂಥ ಮಾಂಸಖಂಡಗಳು ಉಕ್ಕಿನ ನರಗಳು, ವಿದ್ಯುತ್ ಶಕ್ತಿಯಂತ ಇಚ್ಛಾಶಕ್ತಿ ಮತ್ತು ವಜ್ರದಂತ ಮಾನಸಿಕ ದೃಢತೆಯನ್ನು ಹೊಂದಿರಿ ನಮಗಿಂದು ಬೇಕಾಗಿರುವುದು ಪುರುಷನಿರ್ಮಾಪಕವಾದ ಧರ್ಮ, ಪುರುಷವೀರರನ್ನು ಸೃಷ್ಟಿಸುವ ತತ್ವಗಳು ಎಂಬ ಭರವಸೆಯ ನುಡಿಗಳನ್ನು ಸ್ವಾಮೀಜಿಯವರು ಯುವಕರನ್ನು ಉದ್ದೇಶಿಸಿ ಹೇಳುತ್ತಿದ್ದರು. “ಯಾವುದು ನಿಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ, ಆಧ್ಯಾತ್ಮಿಕವಾಗಿ, ದುರ್ಬಲರನ್ನಾಗಿ ಮಾಡುತ್ತದೋ ಅದನ್ನು ವಿಷವೆಂದು ಪರಿಗಣಿಸಿ ಕೂಡಲೇ ತ್ಯಜಿಸಿ” ಎಂದು. ಶಕ್ತಿಯ ಸ್ವರೂಪವನ್ನು ಇಷ್ಟು ಅದ್ಭುತವಾಗಿ ವರ್ಣಿಸುವ ಈ ನುಡಿಮುತ್ತುಗಳು ವಿಶ್ವದ ಸಾಹಿತ್ಯ ಕೋಶದಲ್ಲಿ ಇಲ್ಲ ಎಂದರೆ ಅತಿಶಯೋಕ್ತಿಯಾಗಲಾರದು.

ಆಗೋ, ಸ್ವಾಮೀಜಿಯವರ ಧೀರಗಂಭೀರ ಕಂಠದಿಂದ ಉದ್ಘೋಷವೊಂದು ಮೊಳಗುತ್ತಿದೆ – “ಉತ್ತಿಷ್ಠತ, ಜಾಗ್ರತ! ಪ್ರಾಪ್ಯವರಾನ್ನಿಭೋಧತ! ” ಏಳಿ, ಎದ್ದೇಳಿ, ಎಚ್ಚರಗೊಳ್ಳಿ, ಗುರಿ ತಲುಪುವವರೆಗೂ ನಿಲ್ಲದಿರಿ! ಎನ್ನುತ್ತಾ, ನನ್ನ ಭರವಸೆ ಇರುವುದು ಯುವ ಜನಾಂಗದಲ್ಲಿ ನನ್ನ ಕಾರ್ಯವನ್ನು ಮುಂದುವರಿಸುವರು ಸಮಾಜದ ಯುವ ಜನತೆ ಎನ್ನುತ್ತಿದ್ದರು.ಮೈಸೂರಿನಲ್ಲಿ ಡೆಂಗ್ಯೂ ಮಹಾಮಾರಿಗೆ ಆರೋಗ್ಯಾಧಿಕಾರಿ ಬಲಿ

ಶ್ರೇಷ್ಠ ವ್ಯಕ್ತಿತ್ವವನ್ನು ನಿರ್ಮಿಸಿಕೊಂಡು ವೈಯಕ್ತಿಕ ಸಮಸ್ಯೆಗಳನ್ನು ಮಾತ್ರವಲ್ಲ ರಾಷ್ಟ್ರದ ಸಮಸ್ಯೆಗಳನ್ನು ಪರಿಹರಿಸಬಲ್ಲ ಸಾಮರ್ಥ್ಯ ಇರುವುದು ಯುವಜನರಲ್ಲಿ ಎಂಬುದನ್ನು ಅಪೇಕ್ಷಿಸಿದರು! ಇನ್ನೇಕೆ ತಡ ಪ್ರಾಮಾಣಿಕ ಪ್ರಯತ್ನ ರೂಪದಲ್ಲಿ ಯುವಜನರ ಮರುತ್ತರ ಸ್ವಾಮೀಜಿಯವರನ್ನು ತಲುಪಲಿ! ಆ ದಿವ್ಯ ಚೇತನದ ಉತ್ತಮಿಕೆ ಕಿಂಚಿತ್ತಾದರೂ ನಮ್ಮ ನಿಮ್ಮಲ್ಲೂ ಉದಿಸುವಂತೆ ಅವರ ಪಾದ ಕಮಲಗಳಿಗೆ ಶಿರಸಾ ತಲೆಬಾಗಿಸಿ ವಂದಿಸುತ್ತಾ ಶ್ರಮಿಸೋಣ!!

ಸೌಮ್ಯ ಸನತ್ ✍️.

Team Newsnap
Leave a Comment

Recent Posts

ತಾತ್ಕಾಲಿಕವಾಗಿ ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​ಗೆ ತಡೆ : ಚೆಲುವರ್ಯಸ್ವಾಮಿ

ಮಂಡ್ಯ : ಸಚಿವ ಚಲುವರಾಯಸ್ವಾಮಿ ತುರ್ತು ಸಭೆ ನಡೆಸಿದ್ದು, ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್​ಗೆ ತಾತ್ಕಾಲಿಕ ತಡೆ ನೀಡಿದ್ದಾರೆ. ಸರ್ಕಾರ… Read More

July 6, 2024

ವಿದ್ಯಾರ್ಥಿ ಮೊಬೈಲ್ ಚಾರ್ಜ್ ಹಾಕಲು ಹೋಗಿ ದುರ್ಮರಣ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮೊಬೈಲ್ ಚಾರ್ಜ್ ಹಾಕಲು ಹೋಗಿ ಎಲೆಕ್ಟ್ರಿಕ್ ಶಾಕ್ ನಿಂದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ನಡೆದಿದೆ.… Read More

July 6, 2024

“ಹೃದಯದ ಸ್ವಾಸ್ಥ್ಯ ಕಾಪಾಡುವ ಬಾಳೆ ಹೃದಯ”

"ಬಾಳೆಗೆ ಒಂದೇ ಗೊನೆ ರಾಗಿಗೆ ಒಂದೇ ತೆನೆ"! ಎಂಬ ಮಾತಿನಂತೆ ಬಾಳೆಯು ನಮ್ಮ ಬದುಕಿನುದ್ದಕ್ಕೂ ಒಂದಲ್ಲಾ ಒಂದು ರೀತಿಯಲ್ಲಿ ಸಂಬಂಧ… Read More

July 6, 2024

ನಾನೇ ಚನ್ನಪಟ್ಟಣದ ಮೈತ್ರಿ ಅಭ್ಯರ್ಥಿ, ಅಧಿಕೃತ ಘೋಷಣೆ ಅಷ್ಟೇ ಬಾಕಿ : ಸಿ.ಪಿ.ಯೋಗೇಶ್ವರ್

ರಾಮನಗರ : ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ , ಚನ್ನಪಟ್ಟಣ ಉಪಚುನಾವಣೆಗೆ ನಾನೇ ಮೈತ್ರಿ ಅಭ್ಯರ್ಥಿ , ನಾನು ಸ್ಪರ್ಧಿಸುವಂತೆ ಹೆಚ್.ಡಿ.ಕುಮಾರಸ್ವಾಮಿ… Read More

July 5, 2024

KRS ಅಣೆಕಟ್ಟು ವ್ಯಾಪ್ತಿಯಲ್ಲಿ ಟ್ರಯಲ್ ಬ್ಲಾಸ್ಟ್ ವಿರೋಧಿಸಿ ಪ್ರತಿಭಟನೆ

ಮಂಡ್ಯ :ಜಿಲ್ಲೆಯ ಪಾಂಡವಪುರ ತಾಲೂಕಿನ ವಿವಾದಿತ ಬೇಬಿಬೆಟ್ಟದಲ್ಲಿ ಐದು ಕಡೆಗಳಲ್ಲಿ ಕುಳಿಗಳನ್ನು ಕೊರೆದು ಇನ್ನು ಎರಡು ಮೂರು ದಿನಗಳಲ್ಲಿ ಪರಿಕ್ಷಾರ್ಥ… Read More

July 5, 2024

ವರದಕ್ಷಿಣೆ ಕಿರುಕುಳಕ್ಕೆ ಸಿಲುಕಿದ ಯುವತಿ ಆತ್ಮಹತ್ಯೆಗೆ ಶರಣು

ಬೆಂಗಳೂರು: ಬೆಂಗಳೂರಿನ ಗಂಗಮ್ಮನ ಗುಡಿಯಲ್ಲಿ ಎರಡು ವರ್ಷದ ಹಿಂದೆ ಮದುವೆಯಾಗಿದ್ದ ಹುಡುಗಿಯೊಬ್ಬಳು ಆತ್ಮಹತ್ಯೆಗೆ ಶರಣಾದ ಘಟನೆ ನಡೆದಿದೆ. ಎರಡು ವರ್ಷಗಳ… Read More

July 5, 2024