ಪ್ಯಾರಿಸ್ ಒಲಂಪಿಕ್ಸ್ 2024: ಭಾರತಕ್ಕೆ ಮೊದಲ ಪದಕ – ಕಂಚು ಗೆದ್ದ ಮನು ಭಾಕರ್

Team Newsnap
1 Min Read

ಪ್ಯಾರಿಸ್ :2024ರ ಪ್ಯಾರಿಸ್‌ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಆರಂಭವಾಗಿದೆ.

10 ಮೀಟರ್‌ ಏರ್‌ ಪಿಸ್ತೂಲ್‌ ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ ಭಾರತದ ಮನು ಭಾಕರ್‌ ಕಂಚಿನ ಪದಕ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

ಶನಿವಾರ ಫೈನಲ್‌ ಪ್ರವೇಶಿಸಿದ್ದ 22 ವರ್ಷ ವಯಸ್ಸಿನ ಮನು ಭಾಕರ್‌ ಭಾನುವಾರ ಮೂರನೇ ಸ್ಥಾನ ಪಡೆದಿದ್ದಾರೆ.

ಈ ಮೂಲಕ ಶೂಟಿಂಗ್‌ನಲ್ಲಿ ಭಾರತದ ಪರ ಪದಕ ಗೆದ್ದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

2004ರಲ್ಲಿ ಅಥೆನ್ಸ್‌ನಲ್ಲಿ ನಡೆದ 10 ಮೀಟರ್‌ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಸುಮಾ ಶಿರೂರ್‌ ಕೊನೆಯ ಬಾರಿಗೆ ಫೈನಲ್‌ ತಲುಪಿದ್ದರು.

ಇದು ಈವರೆಗಿನ ಇತಿಹಾಸವಾಗಿತ್ತು.ಮೈಸೂರಿನ ಬಿಜೆಪಿ ನಾಯಕ ವಿಜಯಶಂಕರ್ ಮೇಘಾಲಯ ರಾಜ್ಯಪಾಲರಾಗಿ ನೇಮಕ

ಫೈನಲ್‌ನಲ್ಲಿ ದಕ್ಷಿಣ ಕೊರಿಯಾದ ಓಹ್ ಯೇ ಜಿನ್ 243.2, ಕಿಮ್‌ ಯೇಜಿ 241.3 ಅಂಕ ಪಡೆದರೆ ಮನು ಭಾಕರ್‌ 221.7 ಅಂಕ ಪಡೆದು ಮೂರನೇ ಸ್ಥಾನ ಪಡೆದರು. ಅಲ್ಲದೇ ಒಂದು ಕಂಚಿನ ಪದಕದೊಂದಿಗೆ ಪದಕ ಪಟ್ಟಿಯಲ್ಲಿ ಭಾರತ 17ನೇ ಸ್ಥಾನದಲ್ಲಿದೆ.

Share This Article
Leave a comment