January 13, 2025

Newsnap Kannada

The World at your finger tips!

parasiling

ಪ್ಯಾರಾಸೈಲಿಂಗ್ ವೇಳೆ ತುಂಡಾದ ಹಗ್ಗ : ಸಮುದ್ರಕ್ಕೆ ಬಿದ್ದ ದಂಪತಿ – ಪ್ರಾಣಾಪಾಯದಿಂದ ಪಾರು

Spread the love

ದಿಯುನ ನಗೋವಾ ಬೀಚ್ ನಲ್ಲಿ ಪ್ಯಾರಾಸೈಲಿಂಗ್​​ ಎಂಜಾಯ್ ಮಾಡುತ್ತಿದ್ದಾಗ ಹಗ್ಗ ತುಂಡಾಗಿ ಬಿದ್ದ ಪರಿಣಾಮ ದಂಪತಿಗಳು ಸಮುದ್ರಕ್ಕೆ ಬಿದ್ದಿರುವ ಘಟನೆ ನಡೆದಿದೆ

ದಂಪತಿಗಳು ಸಮುದ್ರಕ್ಕೆ ಬಿದ್ದ ದೃಷ್ಯದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ ಗುಜರಾತ್ ಮೂಲದ ದಂಪತಿ ವೀಕೆಂಡ್ ಕಳೆಯಲು ದಿಯುಗೆ ಬಂದಿದ್ದರು.

ದಿಯುನಲ್ಲಿರುವ ನಗೋವಾ ಬೀಚ್​​ನಲ್ಲಿ ಪ್ಯಾರಾಸೈಲಿಂಗ್​ನಲ್ಲಿ ಹಾರಾಟ ಮಾಡಲು ನಿರ್ಧರಿಸಿದೆ. ಅದರಂತೆ ಗಾಳಿಯಲ್ಲಿ ಮೇಲೆ ಹೋಗುತ್ತಿದ್ದಾಗ ಹಗ್ಗ ಕಟ್ಟಾಗಿ ದಂಪತಿ ಸಮುದ್ರಕ್ಕೆ ಬಿದ್ದಿದ್ದಾರೆ.

ಆದರೆ ದಂಪತಿ ಲೈಫ್ ಜಾಕೆಟ್ ಧರಿಸಿದ್ದರಿಂದ ಯಾವುದೇ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಈ ದಂಪತಿಗೆ ಮಗ ಕೂಡ ಇದ್ದ. ಆದರೆ ಆತ ಪ್ಯಾರಾಸೈಲಿಂಗ್ ಏರಿರಲಿಲ್ಲ ಎಂದು ತಿಳಿದುಬಂದಿದೆ.

Copyright © All rights reserved Newsnap | Newsever by AF themes.
error: Content is protected !!