February 22, 2026

Newsnap Kannada

The World at your finger tips!

pandavapur

ಪಾಂಡವಪುರ : ಕೃಷಿ ಹೊಂಡದಲ್ಲಿ‌ ಈಜಲು ಹೋಗಿ‌ ಮೂವರು ಮಕ್ಕಳ ಧಾರುಣ ಸಾವು

Spread the love

ಕೃಷಿ ಹೊಂಡದಲ್ಲಿ ಈಜಲು ಹೋಗಿ ಮೂವರು ಮಕ್ಕಳು ಜಲ ಸಮಾಧಿಯಾದ ಘಟನೆ ಪಾಂಡವಪುರ ತಾಲೂಕಿನ ಬಳ್ಳೇ ಅತ್ತಿಗುಪ್ಪೆ ಗ್ರಾಮದಲ್ಲಿ ಗುರುವಾರ ಜರುಗಿದೆ.

ಬಳ್ಳೇಅತ್ತಿಗುಪ್ಪೆ ಗ್ರಾಮದ ಮಹದೇವಪ್ಪ ಎಂಬುವರ ಇಬ್ಬರು ಮಕ್ಕಳು ಸೇರಿ ಮೂವರು ಮಕ್ಕಳ ಸಾವನ್ನಪ್ಪಿದ್ದಾರೆ.

ಮಹದೇವಪ್ಪ ಮಕ್ಕಳಾದ ಚಂದನ್, ಕಾರ್ತಿಕ್, ಮಲ್ಲಿಕಾರ್ಜುನರ ಪುತ್ರ ರೀತೇಶ್ ಮೃತರು.
ಸ್ಥಳದಲ್ಲಿ ಮುಗಿಲು ಮುಟ್ಟಿದ ಕುಟುಂಬದವರ ಆಕ್ರಂಧನ ಹೆಚ್ಚಾಗಿತ್ತು. ಸುದ್ದಿ ತಿಳಿದ ಕೂಡಲೇ ಗ್ರಾಮಕ್ಕೆ ಧಾವಿಸಿದ ಶಾಸಕ ಸಿ .ಎಸ್. ಪುಟ್ಟರಾಜು ಮೃತ ಮಕ್ಕಳ ಕುಟುಂಬದವರಿಗೆ‌ ಸಾಂತ್ವನ ಹೇಳಿದರು.

pandavapura1

ಮೂವರ ಮಕ್ಕಳ ಈ ಅಕಾಲಿಕ ಸಾವಿನಿಂದ ನೊಂದಿರುವ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸುವುದಾಗಿ ಶಾಸಕ ಪುಟ್ಟರಾಜು ಭರವಸೆ ನೀಡಿದರು.

ಪಾಂಡವಪುರ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ.

error: Content is protected !!