ಭಾರತದ ವಿರುದ್ಧ ಪಾಕ್​​ ಗೆಲುವು: ಸಂಭ್ರಮಾಚರಿಸಿದ ಶಿಕ್ಷಕಿ ಬಂಧನ

Team Newsnap
1 Min Read

ಐಸಿಸಿ ಟಿ-20 ವಿಶ್ವಕಪ್ ಪಂದ್ಯದಲ್ಲಿ ಭಾರತದ ವಿರುದ್ಧ ಪಾಕ್​​ ಗೆಲುವನ್ನು ಸಂಭ್ರಮಿಸಿದ್ದ ರಾಜಸ್ಥಾನದ ಉದಯಪುರದ ಖಾಸಗಿ ಶಾಲೆಯೊಂದರ ಶಿಕ್ಷಕಿಯನ್ನು ಕೆಲಸದಿಂದ ವಜಾ ಮಾಡಿ. ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ.

ನಫೀಸಾ ಅಟಾರಿ ಎಂಬ ಶಿಕ್ಷಕಿ ಬಂಧಿತಳು . ಈಕೆ ಉದಯಪುರದ ನೀರಜಾ ಮೋದಿ ಎಂಬ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು.

ಕಳೆದ ಭಾನುವಾರ ರಾತ್ರಿ ಭಾರತದ ವಿರುದ್ಧದ ಪಾಕ್ ಗೆಲುವನ್ನು ಸಂಭ್ರಮಿಸಿ ವಾಟ್ಸಪ್​ ಸ್ಟೇಟಸ್​​ ಹಾಕಿದ್ದರು.
‘ಜೀತ್ ಗಯಿ ಹಮಾರಾ ಟೀಮ್​​’ ಎಂದು ನಫೀಸಾ ಹಾಕಿದ್ದ ವಾಟ್ಸಾಪ್ ಸಂದೇಶ ಮೊದಲೇ ಭಾರತ ಸೋತ ಹತಾಶೆಯಲ್ಲಿದ್ದ ಕೋಟ್ಯಂತರ ಭಾರತೀಯರನ್ನು ಕೆರಳಿಸಿದೆ.

ಕೂಡಲೇ ಜನ ನಫೀಸಾ ಗಮನಕ್ಕೂ ತರದಂತೆಯೇ ವಾಟ್ಸಾಪ್ ಸ್ಟೇಟಸ್ ಸ್ಕ್ರೀನ್​​ ಶಾಟ್​​ ಅನ್ನು ಸೋಷಿಯಲ್​​ ಮೀಡಿಯಾದಲ್ಲಿ ಪೋಸ್ಟ್​ ಮಾಡಿ ವೈರಲ್​​ ಮಾಡಿದ್ದಾರೆ.

Share This Article
Leave a comment