November 20, 2024

Newsnap Kannada

The World at your finger tips!

WhatsApp Image 2022 11 11 at 6.18.21 PM

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಆರ್.ಎಲ್ ಕಶ್ಯಪ್ ನಿಧನ

Spread the love

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂಶೋಧಕ ಆರ್ ಎಲ್ ಕಶ್ಯಪ್ ಅವರು ಇಂದು ವಿಧಿವಶರಾಗಿದ್ದಾರೆ. ಈ ಮೂಲಕ ಸಂಶೋಧಕ ಹಾಗೂ ವೇದ ಪ್ರಸಾರ ಸಾಧನೆಯನ್ನು ತೋರಿದ್ದಂತ ಆರ್ ಎಲ್ ಕಶ್ಯಪ್ ಇನ್ನಿಲ್ಲವಾಗಿದ್ದಾರೆ.

ಪ್ರೊಫೆಸರ್ ಶ್ರೀ ಆರ್.ಎಲ್.ಕಶ್ಯಪ್ ರವರು, ಸಾಕ್ಷಿ ಸಂಸ್ಥೆಯ ಸಂಸ್ಥಾಪಕರಾಗಿದ್ದರು. ನಾಲ್ಕೂ ವೇದಗಳ 25,000ಕ್ಕೂ ಅಧಿಕ ಮಂತ್ರಗಳನ್ನು ಇಂಗ್ಲೀಷಿಗೆ ಅನುವಾದಿಸಿ 26 ಸಂಪುಟಗಳಲ್ಲಿ ಪ್ರಕಟಿಸಿದ್ದರು.

ವೇದಕ್ಕೆ ಸಂಬಂಧಿಸಿದಂತೆ, 50ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಇವರ ಪುಸ್ತಕಗಳು, ಕನ್ನಡ, ತೆಲುಗು, ತಮಿಳು, ಮಲಯಾಳಂ, ಮರಾಠಿ, ಹಿಂದಿ, ಇಂಡೋನೇಷಿಯನ್, ಜರ್ಮನಿ ಭಾಷೆಗಳಿಗೆ ಅನುವಾದವಾಗಿವೆ.

ಶ್ರೀಯುತರು, ಶ್ರೀ ಅರಬಿಂದೋ ಹಾಗೂ ಶ್ರೀ ಕಪಾಲಿ ಶಾಸ್ತ್ರಿಗಳ, ಭಾರತೀಯ ಸಂಸ್ಕೃತಿಯ ಕುರಿತಾಗಿ ಕೆಲಸವನ್ನು ಎಡೆಬಿಡದೆ ನಡೆಸಿದ್ದರು. 85 ವರ್ಷ ವಯಸ್ಸಿನ ಡಾ.ಕಶ್ಯಪ್ ಅವರು ಕಿರಿಯರಿಗೆ ಮತ್ತು ಹಿರಿಯರಿಗೆ ಮಾರ್ಗದರ್ಶಕರಾಗಿದ್ದರು.

‌ಸಂಶೋಧನೆ ಮತ್ತು ವೇದ ಪ್ರಸಾರ ಸಾಧನೆಯನ್ನು ಮೆಚ್ಚಿ, ಕೇಂದ್ರ ಸರ್ಕಾರವು‌ ಇವರಿಗೆ 2021ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಕೆಂಪೇಗೌಡ ಏರ್ ಪೋರ್ಟ್ ಟರ್ಮಿನಲ್-2 ಉದ್ಘಾಟಿಸಿದ ಪ್ರಧಾನಿ ಮೋದಿ – ವಂದೇ ಭಾರತ್ ರೈಲಿಗೂ ಚಾಲನೆ

ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಪದ್ಮಶ್ರೀ ಆರ್.ಎಲ್.ಕಶ್ಯಪ್ ಅವರು ಇಂದು ಸ್ವರ್ಗಸ್ಥರಾದ ವಿಷಯ ತಿಳಿದು ಅತೀವವಾದ ದುಃಖವಾಯ್ತು.ದೇವರು ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ‌ ಹಾಗೂ ಅವರ ಕುಟುಂಬ ವರ್ಗದವರಿಗೆ ಈ ದುಃಖವನ್ನು ಭರಿಸುವ ಶಕ್ತಿ ಕೊಡಲೆಂದು ಭಗವಂತನನ್ನು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!