Trending

ಪಡಿಕಲ್ , ಎಬಿಡೀ ಉತ್ತಮ ಆಟ ಆರ್ ಸಿ ಬಿ ಗೆ ಅದೃಷ್ಟದ ಗೆಲವು

ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಸರಣಿಯ 10ನೇ ಪಂದ್ಯದಲ್ಲಿ‌ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿ ಕನ್ನಡಿಗರಲ್ಲಿ ಬಹು ಸಂತೋಷ ಮೂಡಿಸಿದೆ.

ಟಾಸ್‌ನಲ್ಲಿ ತನ್ನ ಪರ ಜಯಗಳಿಸಿ ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್ ತಂಡ ಬೆಂಗಳೂರು ತಂಡದ ಚಾಲೆಂಜ್‌ನ್ನು ತೀಕ್ಷ್ಣವಾಗಿಯೇ ಎದುರಿಸಬೇಕಾಯ್ತು‌ ಬೆಂಗಳೂರು ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮೈದಾನಕ್ಕಿಳಿದ ಡಿ. ಪಡಿಕ್ಕಲ್ ಹಾಗೂ ಎ. ಫಿಂಚ್ ಉತ್ತಮ ಜೊತೆಯಾಟ ಆಡಿದರು. ಪಡಿಕ್ಕಲ್ ಅವರು 40 ಬಾಲ್‌ಗಳಿಗೆ 54 ರನ್ ಗಳಿಸಿದರೆ ಫಿಂಚ್ ಅವರು 35 ಬೌಲ್‌ಗಳಿಗೆ 52 ರನ್ ಗಳಿಸಿದೆ. ಕಳೆದ ಎರಡು ಬಾರಿಯಂತೆ, ಈ ಬಾರಿಯೂ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದರು. ಆದರೆ ಕೊಹ್ಲಿ ನಂತರ ಬಂದ ಎಬಿ ಡೀ ವಿಲಿಯರ್ಸ್ ಉತ್ತಮ ಆಟವಾಡುವದರ ಜೊತೆಗೆ ತಂಡಕ್ಕೆ ಬೆಂಬಲವಾಗಿ ಆಟವಾಡಿದರು. ಕೇವಲ 24 ಬಾಲ್‌ಗಳಲ್ಲಿ 55 ರನ್ ಗಳಿಸಿ‌ ತಂಡವನ್ನು ಗೆಲುವಿನೆಡೆಗೆ ನಡೆಸಿದರು. ರಾಯಲ್ ಚಾಲೆಂಜರ್ಸ್ ಒಟ್ಟು 20 ಓವರ್‌ಗಳಲ್ಲಿ 3ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿದರು. ಆದರೆ ಮುಂಬೈ ತಂಡವೂ ಸಹ ಸಮಾನವಾದ ರನ್ ಗಳಿಸಿದ್ದರಿಂದ ಮ್ಯಾಚ್ ಸೂಪರ್ ಓವರ್‌ಗೆ ಹೋಯ್ತು. ಸೂಪರ್ ಓವರ್‌ನಲ್ಲಿ ಎಬಿ ಡೀ ಹಾಗೂ ಕೊಹ್ಲಿ ಜೊತೆಯಾಟದಲ್ಲಿ ತಂಡ ಒಟ್ಟು 212 ರನ್‌ಗಳನ್ನು ಗಳಿಸಿತು.

credits – IPLt20

ರಾಯಲ್ ಚಾಲೆಂಜರ್ಸ್‌ನ ಚಾಲೆಂಜನ್ನು ಬೆನ್ನಟ್ಟಿದ ಮುಂಬೈ ತಂಡ ಆರಂಭದಲ್ಲೇ ಮುಗ್ಗರಿಸಿತು.ಮುಂಬೈತಂಡದ ನಾಯಕ ನಾಯಕ ರೋಹಿತ್ ಶರ್ಮ‌ ಕೇವಲ 8 ರನ್‌ಗಳಿಗೆ ಪೆವಿಲಿಯನ್ ಸೇರಿದಾಗ ತಂಡಕ್ಕೆ ದಿಗ್ಭ್ರಮೆಯಾಯ್ತು. ಆದರೆ ತಂಡವನ್ನು ಸೋಲಿನ ಭಯದ ಸುಳಿಯಿಂದ ಮೇಲೆತ್ತಲು ಪ್ರಯತ್ನಿಸಿದ್ದು ಐ. ಕಿಶನ್ ಮತ್ತು ಜೆ. ಪೋಲಾರ್ಡ್ ಅವರ ಉತ್ತಮ‌ ಜೊತೆಯಾಟ. ಐ. ಕಿಶನ್ ಅವರು 58 ಬಾಲ್‌ಗಳಿಗೆ 99 ರನ್ ಗಳಿಸಿದರೆ ಪೋಲಾರ್ಡ್ ಅವರು 24 ಬಾಲ್‌ಗಳಿಗೆ 60 ರನ್ ಗಳಿಸಿದರು. ಬೆಂಗಳೂರು ಹಾಗೂ ಮುಂಬೈ ತಂಡದ ರನ್‌ಗಳು ಸಮವಾಗಿ ಪಂದ್ಯ ಸೂಪರ್ ಓವರ್‌ಗೆ ಹೋಯ್ತು.

ಸೂಪರ್ ಓವರ್‌ನಲ್ಲಿ ಮತ್ತೆ 7 ರನ್‌ಗಳಿಕೆ ಮೂಲಕ ತಂಡದ ಮೊತ್ತ 20 ಓವರ್ ಗಳಲ್ಲಿ 201 ಆಯ್ತು. ಸೂಪರ್ ಓವರ್‌ನಲ್ಲಿ 7 ರನ್ ಗಳಿಸುವ ಮೂಲಕ ತಂಡದ ಒಟ್ಟು‌ 208 ರನ್‌ ಗಳಿಸಿತು.

ಎರಡನೇ ಬಾರಿ ಗೆಲುವು ಸಾಧಿಸಿದ ಆರ್‌ಸಿ‌ಬಿ ತಂಡದ ಮೇಲೆ‌ ಅಭಿಮಾನಿಗಳು ಭರವಸೆ ಇಡುವಂತೆ ಮಾಡಿದೆ.

Team Newsnap
Leave a Comment

View Comments

Share
Published by
Team Newsnap

Recent Posts

ಅಕ್ರಮ ಜಾಹಿರಾತು ಫಲಕ ಕುಸಿತಕ್ಕೆ 14 ಸಾವು, 74 ಜನರು ಗಂಭೀರ

ಮುಂಬೈ: ನಿನ್ನೆ ಬೀಸಿದ ಬಿರುಗಾಳಿಗೆ ನಗರದಲ್ಲಿ ತಲೆಎತ್ತಿದ್ದ ಅಕ್ರಮ ಜಾಹಿರಾತು ಫಲಕ ಕುಸಿದು, 8 ಮಂದಿ ಸಾವನ್ನಪ್ಪಿದ್ದು, 60 ಜನರು… Read More

May 14, 2024

ರೇವಣ್ಣ ರಿಲೀಸ್ : ಬಿಗ್ ರಿಲೀಪ್

ಐದು ದಿನಗಳ ಜೈಲು ವಾಸಕ್ಕೆ ಅಂತ್ಯ ⁠5 ಲಕ್ಷ ರು ಬಾಂಡ್ , ಎಸ್ ಐಟಿ ತನಿಖೆಗೆ ಸಹಕರಿಸಬೇಕು ಎಂಬ… Read More

May 13, 2024

ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಕಿಡ್ನ್ಯಾಪ್ ಸಂತ್ರಸ್ತೆ

ಬೆಂಗಳೂರು : ಪ್ರಜ್ವಲ್‌ ರೇವಣ್ಣ ವಿಚಾರದ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್‌ನಲ್ಲಿ ಸಂತ್ರಸ್ತೆ… Read More

May 13, 2024

ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಬಂದಿದ್ದರೆ ಮಂಡ್ಯದ ನಟಿ ಪವಿತ್ರಾ ಸಾಯುತ್ತಿರಲಿಲ್ಲ- ಗೆಳೆಯ ಚಂದ್ರಕಾಂತ್

ಹೈದ್ರಾಬಾದ್ : ನಿಜ ಹೇಳಬೇಕು ಅಂದ್ರೆ ಅಪಘಾವಾದ ಸ್ಥಳಕ್ಕೆ ಆಂಬ್ಯುಲೆನ್ಸ್ ಸುಮಾರು 20 ನಿಮಿಷಗಳ ಕಾಲ ತಡವಾಗಿ ಬಂದಿದ್ದಕ್ಕೆ ಆಕೆ… Read More

May 13, 2024

CBSE 12 ನೇ ತರಗತಿಯ ಫಲಿತಾಂಶ ಪ್ರಕಟ: ಇಲ್ಲಿದೆ ಫಲಿತಾಂಶವನ್ನು ಪರಿಶೀಲಿಸಲು ನೇರ ಲಿಂಕ್

ನವದೆಹಲಿ : ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ ( CBSE ) 12ನೇ ತರಗತಿ ಫಲಿತಾಂಶ ಇಂದು ಪ್ರಕಟವಾಗಿದ್ದು… Read More

May 13, 2024

ರಾಜ್ಯದಾದ್ಯಂತ ಮುಂದಿನ 5 ದಿನ ಭಾರಿ ಮಳೆ

ಬೆಂಗಳೂರು : ಮುಂದಿನ 5 ದಿನ ರಾಜ್ಯದಾದ್ಯಂತ ಭಾರಿ ಮಳೆ ಆಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ… Read More

May 13, 2024