ದುಬೈನ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 13ನೇ ಸರಣಿಯ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮುಂಬೈ ಇಂಡಿಯನ್ಸ್ ತಂಡದ ವಿರುದ್ಧ ಭರ್ಜರಿ ಜಯ ಸಾಧಿಸಿ ಕನ್ನಡಿಗರಲ್ಲಿ ಬಹು ಸಂತೋಷ ಮೂಡಿಸಿದೆ.
ಟಾಸ್‌ನಲ್ಲಿ ತನ್ನ ಪರ ಜಯಗಳಿಸಿ ಬೌಲಿಂಗ್ ಆಯ್ಕೆ ಮಾಡಿಕೊಂಡ ಮುಂಬೈ ಇಂಡಿಯನ್ಸ್ ತಂಡ ಬೆಂಗಳೂರು ತಂಡದ ಚಾಲೆಂಜ್‌ನ್ನು ತೀಕ್ಷ್ಣವಾಗಿಯೇ ಎದುರಿಸಬೇಕಾಯ್ತು ಬೆಂಗಳೂರು ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾಗಿ ಮೈದಾನಕ್ಕಿಳಿದ ಡಿ. ಪಡಿಕ್ಕಲ್ ಹಾಗೂ ಎ. ಫಿಂಚ್ ಉತ್ತಮ ಜೊತೆಯಾಟ ಆಡಿದರು. ಪಡಿಕ್ಕಲ್ ಅವರು 40 ಬಾಲ್‌ಗಳಿಗೆ 54 ರನ್ ಗಳಿಸಿದರೆ ಫಿಂಚ್ ಅವರು 35 ಬೌಲ್‌ಗಳಿಗೆ 52 ರನ್ ಗಳಿಸಿದೆ. ಕಳೆದ ಎರಡು ಬಾರಿಯಂತೆ, ಈ ಬಾರಿಯೂ ವಿರಾಟ್ ಕೊಹ್ಲಿ ಕಳಪೆ ಪ್ರದರ್ಶನ ನೀಡಿದರು. ಆದರೆ ಕೊಹ್ಲಿ ನಂತರ ಬಂದ ಎಬಿ ಡೀ ವಿಲಿಯರ್ಸ್ ಉತ್ತಮ ಆಟವಾಡುವದರ ಜೊತೆಗೆ ತಂಡಕ್ಕೆ ಬೆಂಬಲವಾಗಿ ಆಟವಾಡಿದರು. ಕೇವಲ 24 ಬಾಲ್‌ಗಳಲ್ಲಿ 55 ರನ್ ಗಳಿಸಿ ತಂಡವನ್ನು ಗೆಲುವಿನೆಡೆಗೆ ನಡೆಸಿದರು. ರಾಯಲ್ ಚಾಲೆಂಜರ್ಸ್ ಒಟ್ಟು 20 ಓವರ್‌ಗಳಲ್ಲಿ 3ವಿಕೆಟ್ ನಷ್ಟಕ್ಕೆ 201 ರನ್ ಗಳಿಸಿದರು. ಆದರೆ ಮುಂಬೈ ತಂಡವೂ ಸಹ ಸಮಾನವಾದ ರನ್ ಗಳಿಸಿದ್ದರಿಂದ ಮ್ಯಾಚ್ ಸೂಪರ್ ಓವರ್‌ಗೆ ಹೋಯ್ತು. ಸೂಪರ್ ಓವರ್‌ನಲ್ಲಿ ಎಬಿ ಡೀ ಹಾಗೂ ಕೊಹ್ಲಿ ಜೊತೆಯಾಟದಲ್ಲಿ ತಂಡ ಒಟ್ಟು 212 ರನ್‌ಗಳನ್ನು ಗಳಿಸಿತು.
ರಾಯಲ್ ಚಾಲೆಂಜರ್ಸ್‌ನ ಚಾಲೆಂಜನ್ನು ಬೆನ್ನಟ್ಟಿದ ಮುಂಬೈ ತಂಡ ಆರಂಭದಲ್ಲೇ ಮುಗ್ಗರಿಸಿತು.ಮುಂಬೈತಂಡದ ನಾಯಕ ನಾಯಕ ರೋಹಿತ್ ಶರ್ಮ ಕೇವಲ 8 ರನ್‌ಗಳಿಗೆ ಪೆವಿಲಿಯನ್ ಸೇರಿದಾಗ ತಂಡಕ್ಕೆ ದಿಗ್ಭ್ರಮೆಯಾಯ್ತು. ಆದರೆ ತಂಡವನ್ನು ಸೋಲಿನ ಭಯದ ಸುಳಿಯಿಂದ ಮೇಲೆತ್ತಲು ಪ್ರಯತ್ನಿಸಿದ್ದು ಐ. ಕಿಶನ್ ಮತ್ತು ಜೆ. ಪೋಲಾರ್ಡ್ ಅವರ ಉತ್ತಮ ಜೊತೆಯಾಟ. ಐ. ಕಿಶನ್ ಅವರು 58 ಬಾಲ್‌ಗಳಿಗೆ 99 ರನ್ ಗಳಿಸಿದರೆ ಪೋಲಾರ್ಡ್ ಅವರು 24 ಬಾಲ್‌ಗಳಿಗೆ 60 ರನ್ ಗಳಿಸಿದರು. ಬೆಂಗಳೂರು ಹಾಗೂ ಮುಂಬೈ ತಂಡದ ರನ್‌ಗಳು ಸಮವಾಗಿ ಪಂದ್ಯ ಸೂಪರ್ ಓವರ್‌ಗೆ ಹೋಯ್ತು.
ಸೂಪರ್ ಓವರ್‌ನಲ್ಲಿ ಮತ್ತೆ 7 ರನ್‌ಗಳಿಕೆ ಮೂಲಕ ತಂಡದ ಮೊತ್ತ 20 ಓವರ್ ಗಳಲ್ಲಿ 201 ಆಯ್ತು. ಸೂಪರ್ ಓವರ್‌ನಲ್ಲಿ 7 ರನ್ ಗಳಿಸುವ ಮೂಲಕ ತಂಡದ ಒಟ್ಟು 208 ರನ್ ಗಳಿಸಿತು.
ಎರಡನೇ ಬಾರಿ ಗೆಲುವು ಸಾಧಿಸಿದ ಆರ್‌ಸಿಬಿ ತಂಡದ ಮೇಲೆ ಅಭಿಮಾನಿಗಳು ಭರವಸೆ ಇಡುವಂತೆ ಮಾಡಿದೆ.
Escn