ಪಬ್ ಜೀ ಆಟ ಮತ್ತೊಂದು ರೂಪದಲ್ಲಿ ಮೊಬೈಲ್‍ಗೆ ಬಂದಿದೆ. ಆ ಆಟ ಈಗ ಜೀವ ತೆಗೆಯುವ ಹಂತಕ್ಕೆ ಬಂದಿದೆ ಮಂಗಳೂರಿನಲ್ಲಿ ಬಾಲಕನ ಜೀವ ಪಬ್ ಜೀ ಆಟದಲ್ಲಿ ಅಂತ್ಯವಾಗಿದೆ.
ಆಕೀಫ್(12) ಬರ್ಬರವಾಗಿ ಹತ್ಯೇಗೀಡಾದ ಬಾಲಕ. ಈತ ಮಂಗಳೂರು ನಗರ ಹೊರವಲಯದ ಕೆ.ಸಿ ರೋಡ್ ನಿವಾಸಿ.
ಪ್ರಸ್ತುತ ಕೆ.ಸಿ.ರೋಡ್‍ನ ಫಲಹಾ ಇಂಗ್ಲಿಷ್ ಮೀಡಿಯಾಂ ಶಾಲೆಯ 7 ತರಗತಿ ವಿದ್ಯಾರ್ಥಿಯಾಗಿದ್ದನು. ನಿನ್ನೆ ರಾತ್ರಿ 9 ಗಂಟೆಗೆ ಮನೆಯಿಂದ ಹೊರಟವನು ಇಂದು ಬೆಳಗ್ಗೆ ಕೊಲೆಯಾದ ಸ್ಥಿತಿಯಲ್ಲಿ ಮೈದಾನದಲ್ಲಿ ಪತ್ತೆಯಾಗಿದ್ದಾನೆ.
ಬಳಿಕ ರಾತ್ರಿ 9 ಗಂಟೆಗೆ ಇಬ್ಬರೂ ಮೈದಾನದಲ್ಲಿ ಪಬ್ ಜೀ ಆಡಿದ್ದಾರೆ. ಈ ವೇಳೆ ಆಟದಲ್ಲಿ ಬಾಲಕ ಸೋತಿದ್ದಾನೆ. ಇದರಿಂದ ಇಬ್ಬರ ನಡುವೆಯೂ ಗಲಾಟೆಯಾಗಿದೆ. ಗಲಾಟೆ ಮಧ್ಯೆ ಬಾಲಕ ಆಕೀಫ್‍ಗೆ ದೊಡ್ಡ ಕಲ್ಲಿನಲ್ಲಿ ಹೊಡೆದ್ದಾನೆ. ಆಕೀಫ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರಿಂದ ಗಾಬರಿಗೊಂಡ ಬಾಲಕ, ಆಕೀಫ್ ಶವವನ್ನು ಮೈದಾನದ ಪೊದೆಯಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದಾನೆ.
ಬೆಳಗ್ಗಿನ ವೇಳೆ ಆಕೀಫ್ ಮೃತದೇಹ ಮೈದಾನದ ಪೊದೆಯಲ್ಲಿ ಕಂಡುಬಂದಿದೆ. ಬಾಲಕನ ವಿಚಾರಣೆ ವೇಳೆ ಎಲ್ಲವನ್ನೂ ಬಾಯಿಬಿಟ್ಟಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
Karnataka Budget 2025-26 : ಶಕ್ತಿ ಯೋಜನೆಗೆ 5,300 ಕೋಟಿ ಅನುದಾನ
ಪೊಲೀಸ್ ಅಧಿಕಾರಿಯ ಕಿರುಕುಳಕ್ಕೆ ಮನನೊಂದು ವ್ಯಕ್ತಿ ಆತ್ಮಹತ್ಯೆ ಆರೋಪ