ಆಕ್ಸಿಜನ್ ಟ್ಯಾಂಕ್​ಗಳ ಸಾಗಣೆ ಮಾಡಲು ಇಂಡಿಯನ್ ಏರ್​ಫೋರ್ಸ್​ ವಿಮಾನಗಳ ಬಳಕೆ

Team Newsnap
1 Min Read

ದೇಶದಲ್ಲಿ ಕೊರೊನಾ ರೋಗಿಗಳಿಗೆ ಅಗತ್ಯವಾಗಿರುವ ಆಕ್ಸಿಜನ್ ಪೂರೈಕೆಗೆ ಕೇಂದ್ರ ಸರ್ಕಾರ ಇಂಡಿಯನ್ ಏರ್ ಫೋಸ್೯ ನ ವಿಮಾನ ಬಳಕೆ ಮಾಡಲು ನಿರ್ಧರಿಸಿದೆ.

ಈಗಾಗಲೇ ಕ್ರಯೋಜೆನಿಕ್ ಟ್ಯಾಂಕ್​ಗಳ ಮೂಲಕ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆ ಮಾಡಲು ಭಾರತೀಯ ರೇಲ್ವೆ ಆಕ್ಸಿಜನ್ ಎಕ್ಸ್​ಪ್ರೆಸ್​​ ಎಂಬ ವಿಶೇಷ ರೈಲು ಸೇವೆ ಆರಂಭಿಸಿದೆ.

ಕಳೆದ ರಾತ್ರಿ ಮೊದಲ ಆಕ್ಸಿಜನ್ ಎಕ್ಸ್​ಪ್ರೆಸ್​ ವೈಜಾಗ್​​ನಿಂದ ಮಹಾರಾಷ್ಟ್ರದತ್ತ ತೆರಳಿದೆ. ಇದೀಗ ಆಕ್ಸಿಜನ್ ಟ್ಯಾಂಕ್​ಗಳನ್ನ ಫಿಲ್ಲಿಂಗ್ ಸ್ಟೇಷನ್​ಗಳಿಗೆ ಕೊಂಡೊಯ್ಯಲು ಭಾರತೀಯ ವಾಯುಪಡೆ ನೆರವಿಗೆ ಧಾವಿಸಿದೆ.

ಐಎಎಫ್​ ವಿಮಾನಗಳ ಮೂಲಕ ಖಾಲಿ ಕ್ರಯೋಜೆನಿಕ್ ಆಕ್ಸಿಜನ್ ಟ್ಯಾಂಕರ್​​​ಗಳನ್ನ ಏರ್​ಲಿಫ್ಟ್​ ಮಾಡಲಾಗಿದೆ. ಎರಡು ಐಎಎಫ್​ C-17 ವಿಮಾನಗಳು ಹಾಗೂ ಒಂದು IL-76 ವಿಮಾನದ ಮೂಲಕ ನಿನ್ನೆ ಪಾನಾಘಡದಿಂದ ಆಕ್ಸಿಜನ್​ ಕಂಟೇನರ್​ಗಳನ್ನು ಕಳುಹಿಸಿಕೊಡಲಾಗಿದೆ.‌

ವೈದ್ಯಕೀಯ ಸಿಬ್ಬಂದಿ, ಉಪಕರಣಗಳು ಹಾಗೂ ಔಷಧಿಗಳನ್ನು ದೇಶಾದ್ಯಂತ ಕೋವಿಡ್​ ಆಸ್ಪತ್ರೆಗಳಿಗೆ ರವಾನಿಸಲು ಐಎಎಫ್​​ ನೆರವಾಗುತ್ತಿದೆ.‌

Share This Article
Leave a comment