February 22, 2026

Newsnap Kannada

The World at your finger tips!

karona

ಆ್ಯಕ್ಸಿಜನ್ ಕೊರತೆ : ಕೋಲಾರ ದಲ್ಲಿ ನಾಲ್ವರ ಸಾವು- ತುಮಕೂರಿನಲ್ಲಿ 27 ರ ಯುವಕ ಕೊರೋನಾ ಗೆ ಬಲಿ

Spread the love

ಸಕಾಲಕ್ಕೆ ‌ ಆ್ಯಕ್ಸಿಜನ್ ಕೊರತೆ ಯಿಂದಾಗಿ‌‌ ನಾಲ್ವರು ಕೊರೋನಾ ಸೋಂಕಿತರು‌ ಸಾವನ್ನಪ್ಪಿದ ಘಟನೆ ಕೋಲಾರದಲ್ಲಿ ಸೋಮವಾರ ಜರುಗಿದೆ.

ಮೂವರು‌ ಪುರುಷರು ಹಾಗೂ ಓರ್ವ ಮಹಿಳೆ ಆ್ಯಕ್ಸಿಜನ್ ಕೊರತೆಯಿಂದ ಸಾವನ್ನಪ್ಪಿದರು ಎಂದು ಪ್ರಾಥಮಿಕ ವರದಿಗಳು ಹೇಳಿವೆ.

ಈ ನಡುವೆ ಆರೋಗ್ಯ ಸಚಿವ ಡಾ. ಸುಧಾಕರ್ ಸುದ್ದಿಗಾರರ ಜೊತೆ ಮಾತನಾಡಿ, ಕೋಲಾರದಲ್ಲಿ ಕೊರೋನಾ ಸೋಂಕಿತರು ಯಾವ ಕಾರಣಕ್ಕಾಗಿ ಸಾವನ್ನಪ್ಪಿದರು ಎಂಬುದರ ಬಗ್ಗೆ ‌ಡಿಎಚ್ ಓ ಅವರಿಂದ ಮಾಹಿತಿ ಪಡೆದುಕೊಳ್ಳುವುದಾಗಿ ತಿಳಿಸಿದರು.

ತುಮಕೂರಿನಲ್ಲಿ 27 ವರ್ಷದ ಯುವಕ‌ ಸಾವು :

ಈ ನಡುವೆ ತುಮಕೂರಿನ ‌ಜಿಲ್ಲಾ ಆಸ್ಪತ್ರೆ ಯಲ್ಲಿ ಡಯಾಲಿಸಸ್ ವಿಭಾಗದ ಮುಖ್ಯಸ್ಥ 27 ವರ್ಷ ಯುವಕ ಉಸಿರಾಟದ ತೊಂದರೆಯಿಂದಾಗಿ ಸಾವನ್ನಪ್ಪಿದರು.

ಕೊರೋನಾ ಸೋಂಕಿತರಾಗಿದ್ದ ಯುವಕನಿಗೆ ಜಿಲ್ಲಾ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿತ್ತು. ನಿನ್ಮೆ ಸಂಜೆ ತೀವ್ರವಾಗಿ ಉಸಿರಾಟದ ತೊಂದರೆ ಕಾಣಿಸಿಕೊಂಡಾಗ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು.

error: Content is protected !!