November 16, 2024

Newsnap Kannada

The World at your finger tips!

d c office mandya

ಸ್ವಂತ ಮನೆ ನಮ್ಮ ಹಕ್ಕು, ಹೋರಾಟ ಸಮಿತಿಯಿಂದ ಅ. 2 ರಂದು ಮಂಡ್ಯದಲ್ಲಿ ಅರೆಬೆತ್ತಲೆ ಪ್ರತಿಭಟನೆ

Spread the love

ಮಂಡ್ಯ ತಾಲೂಕಿನ ಹಳೇ ಬೂದನೂರು ಗ್ರಾಮದ ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿಯು ನಿವೇಶನ ರಹಿತರ ಸಮಸ್ಯೆ ಬಗೆಹರಿಸಲು ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ದಿನಾಚರಣೆ ದಿನ ವಸತಿ ರಹಿತರೊಡಗೂಡಿ ಅರೆಬೆತ್ತಲೆ ಪ್ರತಿಭಟನೆ ಹಮ್ಮಿಕೊಳ್ಳಲು ನಿರ್ಧಾರಿಸಿದೆ.

ಸಮಿತಿಯ ಸಂಚಾಲ ಬಿ ಕೆ ಸತೀಶ್ ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಈ ಕುರಿತಾದ ಹೋರಾಟಕ್ಕೆ ಸಂಬಂಧಿಸಿದಂತೆ ಕಳೆದ 5 ವರ್ಷಗಳಿಂದ ಮಂಡ್ಯ ತಾಲ್ಲೂಕು ಬೂದನೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಿವೇಶನರಹಿತ ಕುಟುಂಬಗಳು ಆಶ್ರಯ ಯೋಜನೆಗೆ ಗುರುತಿಸಿರುವ ಸರ್ಕಾರಿ ಭೂಮಿ ದೊರಕಿಸಿಕೊಡಲು ಹಲವು ಹೋರಾಟ ನಡೆಸಿಕೊಂಡು ಮನವಿ ನೀಡಿದರೂ ಯಾವುದೇ ಫಲ ಕೊಟ್ಟಿಲ್ಲ.

ತಾವು ಸರ್ಕಾರಿ ಭೂಮಿಯ ಒತ್ತುವರಿ ತೆರವುಗೊಳಿಸಲು ಆದೇಶ ಮಾಡಿರುವುದು ಶ್ಲಾಘನೀಯ. ಸದ್ಯ ಉಪ ವಿಭಾಗಾಧಿಕಾರಿ ಕಚೇರಿಯಲ್ಲಿ ತಹಶೀಲ್ದಾರ್ ಸುಮೊಟೋ ಪ್ರಕರಣ ದಾಖಲಿಸಿ ನಿವೇಶನಕ್ಕೆ ಗುರುತಿಸಿರುವ ಭೂಮಿ ವಿವಾದ ಕಂಗಟ್ಟಾಗಿದೆ.

ಈ ನಿವೇಶನರಹಿತರಿಗೆ ಮಾನ್ಯ ಸಂಸದರು, ಶಾಸಕರ ಒತ್ತಾಸೆಯಿಂದ ಒಂದೇ ಬಾರಿಗೆ ಅಮೃತ್ ವಸತಿ ಯೋಜನೆಯಲ್ಲಿ 130 ಮನೆ ನಿರ್ಮಿಸಲು ಕ್ರಮ ಕೈಗೊಳ್ಳಲು ಮುಖ್ಯಮಂತ್ರಿಗಳು ವಸತಿ ಸಚಿವರಿಗೆ ಸೂಚಿಸಿರುತ್ತಾರೆ.

ಆದರೂ ನಿವೇಶನ ಹಂಚಿಕೆ ಕೂಡ ಅರಂಭವಾಗಿಲ್ಲ. ಸರ್ಕಾರಿ ಭೂಮಿಯಲ್ಲಿನ ಬೆಳೆ ಕಟಾವು ಕಾರ್ಯ ಮುಗಿದಿದೆ. ಕಾನೂನು ಪ್ರಕ್ರಿಯೆ ಕಾರಣದಿಂದ ಭೂಮಿ ಗುರುತಿಸುವಿಕೆ ತಡವಾಗಿ ಒತ್ತುವರಿ ಭೂಮಿಯಲ್ಲಿ ಬೆಳೆ ಹಾಕುವ ಕಾರ್ಯ ಅರಂಭವಾಗುತ್ತಿದೆ. ಪರಿಣಾಮ ಮತ್ತೆ ಭೂಮಿ ಗುರುತಿಸುವಿಕೆ ಕಾರ್ಯ ವಿಳಂಬವಾಗಲಿದೆ. ತಾವು ಮಧ್ಯ ಪ್ರವೇಶಿಸಿ ವಾರದೊಳಗೆ ಭೂಮಿ ವಿವಾದ ಇತ್ಯರ್ಥಪಡಿಸಲು ಈ ಮೂಲಕ ಆಗ್ರಹಪಡಿಸುತ್ತೇವೆ.

ಕೆಲವು ಪ್ರಮುಖ ಬೇಡಿಕೆ ಇಟ್ಟು ಕೊಂಡು ಸಮಿತಿಯು ಅಕ್ಟೋಬರ್ 2 ರಂದು ರಾಷ್ಟ್ರಪಿತ ಮಹಾತ್ಮಗಾಂಧಿ ಜಯಂತಿ ದಿನಾಚರಣೆ ದಿನ ವಸತಿ ರಹಿತರೊಡಗೂಡಿ ಅರೆಬೆತ್ತಲೆ ಪ್ರತಿಭಟನೆ ಹಮ್ಮಿಕೊಳ್ಳುತ್ತಿರುವು ದಾಗಿ ಸತೀಶ್ ಹೇಳಿದ್ದಾರೆ.

ಬೇಡಿಕೆಗಳು:

  1. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಾರದೊಳಗೆ ಸರ್ಕಾರಿ ಭೂಮಿ ವಿವಾದ ಬಗೆಹರಿಸಬೇಕು.
  2. ಈಗಾಗಲೇ ಉಪ ವಿಭಾಗಾಧಿಕಾರಿ, ತಹಶೀಲ್ದಾರ್, ಭೂಮಾಪಕರ ನೇತೃತ್ವದಲ್ಲಿ ಗುರುತಿಸಿರುವ ನಿವೇಶನ ಭೂಮಿಯ ಅಳತೆ ಹದ್ದಬಸ್ತ್ ಮಾಡಿ ನಿವೇಶನರಹಿತರಿಗೆ ಕಾಯ್ದಿರಿಸಬೇಕು.
  3. ನಿವೇಶನರಹಿತರ ಸರ್ಕಾರಿ ಭೂಮಿ ಪ್ರಕರಣವನ್ನು ವಿಶೇಷ ಪ್ರಕರಣವಾಗಿ ಪರಿಗಣಿಸಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಬೇಕು.
  4. ಈ ಹಿಂದೆ ಗರೀಭಿ ಹಠಾವೋ ಅಲ್ಲಿ ಭೂಸ್ವಾಧೀನಗೊಂಡು ಉಳಿಕೆ ಇರುವ 2 ಎಕರೆ ಭೂಮಿಯ ಅಳತೆ, ಹದ್ದುಬಸ್ತ್ ಮಾಡಿ ವಿತರಣೆ ಆದೇಶ ನೀಡಬೇಕು.
Copyright © All rights reserved Newsnap | Newsever by AF themes.
error: Content is protected !!