November 13, 2024

Newsnap Kannada

The World at your finger tips!

nano

ಇಸ್ರೋ ನ್ಯಾನೋ ಉಪಗ್ರಹದಲ್ಲಿ ಭಗವದ್ಗೀತೆ ಪ್ರತಿ, ಮೋದಿ ಭಾವಚಿತ್ರ ಕಕ್ಷೆಗೆ ರವಾನೆ

Spread the love

ಇಸ್ರೋದ ನ್ಯಾನೋ ಉಪಗ್ರಹ ಉಡಾವಣೆಗೆ ಸಜ್ಜಾಗಿದೆ.
ಈ ಉಪಗ್ರಹಕ್ಕೆ ಉಪಗ್ರಹಗಳ ಪಿತಾಮಹ ಸತೀಶ್ ಧವನ್ ಹೆಸರು ಇಡಲಾಗಿದೆ.

ಇದೇ ಮೊದಲ ಬಾರಿಗೆ ಉಪಗ್ರಹದಲ್ಲಿ ಭಗವದ್ಗೀತೆ ಪ್ರತಿ ಹಾಗೂ ಪ್ರಧಾನಿ ಮೋದಿಯವರ ಭಾವ ಚಿತ್ರವನ್ನು ಜೊತೆಯಲ್ಲಿ 25,000 ಸಾಧಕರ ಹೆಸರುಗಳನ್ನು ಈ ನ್ಯಾನೋ ಉಪಗ್ರಹ ಮೂಲಕ ನಭೋಮಂಡಲಕ್ಕೆ ರವಾನಿಸಲು ನಿರ್ಧರಿಸಲಾಗಿದೆ.

ಸತೀಶ್ ಧವನ್ ಹೆಸರಿನ‌ ಈ ಉಪಗ್ರಹ ವೈಜ್ಞಾನಿಕ ಪೆಲೋಡ್ ಹೊತ್ತೊಯ್ಯಲಿದೆ. ಬಾಹ್ಯಾಕಾಶ ವಿಕಿರಣ ಅದ್ಯಯನ, ಮೆಗ್ನೋಟೋಸ್ಟಿ , ಸಂವನಹ ಜಾಲ ಪೆಲೋಡ್ ಹೊತ್ತೊಯ್ಯಲಿದೆ.

ಅಮೇರಿಕಾ ಸೇರಿದಂತೆ ಅನೇಕ‌ ರಾಷ್ಟ್ರಗಳು ಬೈಬಲ್ ಪ್ರತಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸಿದ ಮಾದರಿಯಲ್ಲಿ ಭಗವದ್ಗೀತೆ ಪ್ರತಿ‌ ಹಾಗೂ ಮೋದಿ ಭಾವ ಚಿತ್ರವನ್ನು ಸ್ವದೇಶಿ ಉಪಗ್ರಹ ದಲ್ಲಿ ಕಳುಹಿಸಲಾಗುವುದು.

ಭಾರತೀಯ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಿಜ್ಞಾನ ದ ಕುರಿತು ಉತ್ತೇಜನ ನೀಡಲು ಯೋಜನೆ ರೂಪಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!