December 25, 2024

Newsnap Kannada

The World at your finger tips!

sidda

ನಮ್ಮವರೇ ರಾಯಣ್ಣನನ್ನು ಹಿಡಿದು ಕೊಟ್ಟರು: ದೇಶ ದ್ರೋಹಿಗಳು ಯಾವಾಗಲೂ ಇರ್ತಾರೆ: ಸಿದ್ದು

Spread the love

ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಗೇರಿಲ್ಲ ಯುದ್ಧ ಮಾಡಿ ಬ್ರಿಟಿಷರಿಗೆ ಕಾಡಿದ್ದರು. ಅಪ್ರತಿಮ ವೀರ ಆಗಿದ್ದರು, ಅವರನ್ನು ಹಿಡಿಯೋಕೆ ಆಗುತ್ತಿರಲೇ ಇಲ್ಲ. ಆದರೆ ನಮ್ಮವರೇ ಯಾರೋ ಅವರನ್ನು ಹಿಡಿಯೋಕೆ ಸಹಾಯ ಮಾಡಿಬಿಟ್ಟರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಇತಿಹಾಸವನ್ನು ನೆನೆಪಿಸಿದರು.‌

ಮೈಸೂರಿನ ಗಂಧನಹಳ್ಳಿ ಗ್ರಾಮದಲ್ಲಿ ದೇವಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಸಿದ್ದು, ಸಂಗೊಳ್ಳಿ ರಾಯಣ್ಣ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಗೇರಿಲ್ಲಾ ಯುದ್ಧ ಮಾಡಿ ಬ್ರಿಟಿಷರಿಗೆ ಕಾಡಿದ್ದರು. ಅಪ್ರತಿಮ ವೀರ ಆಗಿದ್ದರು, ಅವರನ್ನು ಹಿಡಿಯೋಕೆ ಆಗುತ್ತಿರಲೇ ಇಲ್ಲ. ಆದರೆ ನಮ್ಮವರೇ ಯಾರೋ ಅವರನ್ನು ಹಿಡಿಯೋಕೆ ಸಹಾಯ ಮಾಡಿಬಿಟ್ಟರು. ಕೊನೆಗೆ ಅವರನ್ನು ಬ್ರಿಟಿಷರು ಗಲ್ಲಿಗೇರಿಸಿದರು. ಇಂತಹ ದೇಶದ್ರೋಹಿಗಳು ಸಮಾಜದಲ್ಲಿ ಯಾವಾಗಲೂ ಇರುತ್ತಾರೆ ಎಂದು ಹೇಳಿದರು

ರಾಯಣ್ಣ ಹುಟ್ಟಿದ್ದು ಆಗಸ್ಟ್ 15ರಂದು. ಅವರನ್ನು ಗಲ್ಲಿಗೇರಿಸಿದ್ದು ಜನವರಿ 26ರಂದು. ಎರಡು ದಿನ ನಮ್ಮ ದೇಶಕ್ಕೆ ಅತ್ಯಂತ ವಿಶೇಷ ದಿನಗಳು. ನಿಮಗೆ ಗೊತ್ತಾ ಈ ದಿನಗಳು? ಸುಮ್ಮನೆ ಗೊತ್ತಿಲ್ಲದೆ ಮಾತನಾಡಬೇಡಿ. ಕೆಲವರಿಗೆ ಗೊತ್ತಿರುವುದಿಲ್ಲ ಆದರೂ ತಲೆ ಅಲ್ಲಾಡಿಸಿಬಿಡುತ್ತಾರೆ. ತಿಳ್ಕೋಬೇಕು ಇದನ್ನೆಲ್ಲ ಗೊತ್ತಾಯ್ತಾ ಎಂದು ಸಭೆಯಲ್ಲಿದ್ದವರನ್ನು ನಗೆಗಡಲಲ್ಲಿ ತೇಲಿ ಬಿಟ್ಟರು.

ಸಂಗೊಳ್ಳಿ ರಾಯಣ್ಣನ ಪ್ರತಿಮೆ ನಿಮ್ಮೂರಿನಲ್ಲಿ ನಿರ್ಮಾಣ ಆಗಿದೆ. ಅವರ ಪ್ರತಿಮೆನಾ ಯಾಕೇ ನಿರ್ಮಾಣ ಮಾಡ್ತಾರೆ ಗೊತ್ತಾ? ಅವರಂತೆ ದೇಶ ಪ್ರೇಮ ಹುಟ್ಟಲಿ ಅಂತ. ಕುರುಬ ಜಾತಿಯಲ್ಲಿ ಹುಟ್ಟಿದಕ್ಕೆ ಅವರ ಪ್ರತಿಮೆ ಮಾಡೋದಲ್ಲ. ಅವರೇನು ಅರ್ಜಿ ಹಾಕ್ಕೊಂಡು ಕುರುಬ ಜಾತಿಯಲ್ಲಿ ಹುಟ್ಟಿರಲಿಲ್ಲ. ಇದನ್ನ ಅರ್ಥ ಮಾಡಿಕೊಳ್ಳಿ ಎಂದು ನೆರೆದಿದ್ದ ಜನರಿಗೆ ತಿಳಿ ಹೇಳಿದರು.

Copyright © All rights reserved Newsnap | Newsever by AF themes.
error: Content is protected !!