ಕಾರ್ತಿಕಿ ಗೊನ್ಸಾಲ್ವೆಸ್ ನಿರ್ದೇಶಿಸಿರುವ ಹಾಗೂ ಗುನೀತ್ ಮೊಂಗಾ ನಿರ್ಮಾಣದ ಭಾರತದ ಕಿರುಚಿತ್ರ ದಿ ಎಲಿಫೆಂಟ್ ವಿಸ್ಪರರ್ಸ್‌ಗೆ ಬೆಸ್ಟ್ ಡಾಕ್ಯುಮೆಂಟ್ ಶಾರ್ಟ್ ಫಿಲಂ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿ ಲಭಿಸಿದೆ.
ಭಾರತೀಯ ಸಿನಿಮಾ ರಂಗದಲ್ಲಿ ಅತ್ಯುತ್ತಮ ಗೌರವಕ್ಕೆ ಈ ಕಿರುಚಿತ್ರ ಪಾತ್ರವಾಗಿದೆ. ಎಲಿಫೆಂಟ್ ವಿಸ್ಪರರ್ಸ್ ಕಿರುಚಿತ್ರ ಕಳೆದ ವರ್ಷ ಡಿಸೆಂಬರ್‌ನಲ್ಲಿ ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಯಿತು.
ಮುದುಮಲೈ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಸಿನಿಮಾ ಅನಾಥ ಆನೆ ಮರಿಯ ಕಥೆಯಾಗಿದೆ. ಸ್ಥಳೀಯ ದಂಪತಿ ಬೆಳ್ಳಿ ಹಾಗೂ ಬೊಮ್ಮನ್ ಆರೈಕೆಯಲ್ಲಿ ಆನೆ ಮರಿ ಬೆಳೆಯುವ, ಬಾಂಧವ್ಯವನ್ನು ಸೂಚಿಸುವ ಹಾಗೂ ನೈಸರ್ಗಿಕ ಸೌಂದರ್ಯವನ್ನು ಅನುಭವಿಸುವ ವಿಷಯಗಳು ಸಿನಿಮಾದಲ್ಲಿದೆ.
#oscaraward #theelephantwhisperes #netflix #Shortmovie #india #Oscar2023 #Pridemoment #kannadanews
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಕನ್ನಡ ಸಿನಿಮಾ ಕ್ಷೇತ್ರಕ್ಕೆ ಉದ್ಯಮ ಸ್ಥಾನಮಾನ
ರಾಜ್ಯ ಸರ್ಕಾರದಿಂದ ಸಿನಿಮಾ ಟಿಕೆಟ್ ದರ ನಿಯಂತ್ರಣದ ಚಿಂತನೆ: ಗೃಹ ಸಚಿವ ಜಿ. ಪರಮೇಶ್ವರ್