Karnataka

ಅನಾಥ ಮಕ್ಕಳ ಆಶಾಕಿರಣ ‘ಸಂಸ್ಕಾರ’

ಬಳ್ಳಾರಿ.

ಶಿಕ್ಷಕರು ಕೇವಲಶಾಲೆಗೆ ಹೋಗುವುದು, ಮಕ್ಕಳಿಗೆ ಪಾಠ ಮಾಡುವುದು, ಸರ್ಕಾರತಮಗೆ ವಹಿಸಿರುವ ಜವಾಬ್ದಾರಿಯಂತೆ ಶಾಲೆ ಕೆಲಸಗಳನ್ನು ಪೂರೈಸುವುದು ಇಷ್ಟೆ ಶಿಕ್ಷಕನ ಕೆಲಸವಲ್ಲ, ಇದನ್ನು ಮೀರಿಯೂ ಕೆಲ ಶಿಕ್ಷಕರು ಮಾನವೀಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಗರಕೌಲ್‍ಬಜಾರ್‍ನಲ್ಲಿರುವ ಬಸಮ್ಮ ಹಿರಿಯ ಪ್ರಾಥಮಿಕ ಶಾಲೆಯದೈಹಿಕ ಶಿಕ್ಷಕ ಬಿ.ಎಚ್.ಎಂ.ವಿರೂಪಾಕ್ಷಯ್ಯ, ಅನಾಥ ಮಕ್ಕಳಿಗೆ ಬದುಕುರೂಪಿಸಲು ‘ಸಂಸ್ಕಾರ’ ಎಂಬ ಅನಾಥಾಶ್ರಮ ಆರಂಭಿಸಿದ್ದಾರೆ.

ಜಾಗೃತಿ ನಗರದಲ್ಲಿ ಆರಂಭಿಸಿರುವ ಈ ಆಶ್ರಮದಲ್ಲಿ ಈಗಾಗಲೇ ತಂದೆ-ತಾಯಿಇಲ್ಲದ, ಎಚ್‍ಐವಿ/ಕ್ಯಾನ್ಸರ್ ಸೋಂಕಿತರ 12 ಮಕ್ಕಳನ್ನು ಸೇರಿಸಿಕೊಂಡಿದ್ದಾರೆ. ಇನ್ನೂ 18 ಮಕ್ಕಳನ್ನು ಸೇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಶಾಲೆಯಲ್ಲಿದ್ದ ಬಡ ಮಕ್ಕಳಿಗೆ ಪುಸ್ತಕ, ಶುಲ್ಕ, ಬಟ್ಟೆ ಮತ್ತಿತರ ವೆಚ್ಚ ಭರಿಸುತ್ತಿದ್ದರು ಶಿಕ್ಷಕ ವಿರೂಪಾಕ್ಷಯ್ಯ. ಅಲ್ಲದೆ, ಶಾಲೆಗೆ ತಡವಾಗಿ ಬರುತ್ತಿದ್ದ ಮಕ್ಕಳನ್ನು ಗಮನಿಸಿ, ಅವರ ಮನೆಗಳಿಗೆ ಹೋಗಿ ಅವರ ಸಮಸ್ಯೆಗಳನ್ನು ಕಣ್ಣಿಂದಕಂಡು, ಅಂತಹ ಮಕ್ಕಳಿಗೆ ಏನಾದರೂ ಮಾಡಬೇಕೆಂದು ನಿರ್ಧರಿಸಿದರು. ಆ ನಿರ್ಧಾರದ ಫಲವೇ ‘ಸಂಸ್ಕಾರ’ ಅನಾಥಾಶ್ರಮ.

ಶಿಕ್ಷಕರಿಗೆ ಸಮಾಜವನ್ನುತಿದ್ದಬಲ್ಲ ಶಕ್ತಿ ಇದೆ. ಅದಕ್ಕೆ ಮನಸ್ಸು ಮಾಡಬೇಕಷ್ಟೆ. ಮನಸ್ಸಿದ್ದರೆ ಮಾರ್ಗ. ಶಿಕ್ಷಕರೆಲ್ಲರೂ ಸರ್ಕಾರಿ ಶಾಲೆಗಳಿಗೆ ಬರುವ ಬಡ ಮಕ್ಕಳ ಸಮಸ್ಯೆಗಳನ್ನು ಮನವಿಟ್ಟು ಗಮನಿಸಿದರೆ, ಬಡ ಮಕ್ಕಳ ಭವಿಷ್ಯವೂಉಜ್ವಲವಾಗುತ್ತದೆ. ಅದಕ್ಕೆ ವಿರೂಪಾಕ್ಷಯ್ಯಅವರಂತೆಇತರೆ ಶಿಕ್ಷಕರು ಮನಸ್ಸು ಮಾಡಬೇಕು.

Team Newsnap
Leave a Comment

View Comments

  • ಜಾಗೃತಿ ನಗರದಲ್ಲಿ ಆನಾಥ ಮಕ್ಕಳ ಸಂಸ್ಕಾರ , ಶಿಕ್ಷಣ ಕ್ಷೇತ್ರ ವ್ಯಾಪಾರ ಮಾಡುತ್ತಿರುವ ವ್ಯವಸ್ಥೆಯಲ್ಲಿ ಮಾನ್ಯ ವಿರುಪಾಕ್ಷಪ್ಪನವರ ಸೇವೆ ಶ್ಲಾಘನೀಯ ಅವರು ಶಿಕ್ಷಕರಲ್ಲ ಸಮಾಜದ ಗುರುವಿನ ಸ್ಥಾನದಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವುದು ಮಾನವೀಯ ಕಳಕಳಿ ಮೆಚ್ಚುಗೆಗೆ ಪಾತ್ರವಾದುದು ಅವರಿಗೆ ನಮ್ಮದೊಂದು ಸಲಾಮ್

Share
Published by
Team Newsnap

Recent Posts

ಎಸ್ ಎಸ್ ಎಲ್ ಸಿ ಕಡಮೆ ಅಂಕ : ಮದ್ದೂರಿನಲ್ಲಿ ಇಬ್ಬರ ವಿದ್ಯಾರ್ಥಿ ಗಳು ಆತ್ಮಹತ್ಯೆ

ಮದ್ದೂರು : ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಕಡಿಮೆ ಅಂಕ ಬಂದಿದೆ ಎಂದು ಮನನೊಂದ ವಿ ಇಬ್ಬರ… Read More

May 9, 2024

ಸೋಮವಾರದ ತನಕವೂ ರೇವಣ್ಣ ಜೈಲು ಹಕ್ಕಿ

ಬೆಂಗಳೂರು : ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಸದ್ಯ ನಾಯಾಂಗ ಬಂಧನದಲ್ಲಿರುವ ಮಾಜಿ ಸಚಿವ ಹೆಚ್‌ಡಿ ರೇವಣ್ಣ ಸೋಮವಾರದವರೆಗೆ… Read More

May 9, 2024

SSLC ಫಲಿತಾಂಶ : ಬಾಲಕಿಯರೇ ಮೇಲುಗೈ ಉಡುಪಿ ಪ್ರಥಮ- ಯಾದಗಿರಿ ಕೊನೆ

ಎಸ್ಎಸ್ಎಲ್ ಸಿ 2024ರ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.ಉಡುಪಿಗೆ ಪ್ರಥಮ ಸ್ಥಾನ ಲಭ್ಯವಾಗಿದೆ.8,59,967 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರಲ್ಲಿ… Read More

May 9, 2024

ರೇವಣ್ಣ ಕೇಂದ್ರ ಕಾರಾಗೃಹಕ್ಕೆ ಶಿಪ್ಟ್ : 4567 ಖೈದಿ ಸಂಖ್ಯೆ ನೀಡಿಕೆ

ಬೆಂಗಳೂರು : ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಜೆಡಿಎಸ್​ ಶಾಸಕ ಹಾಗೂ ಮಾಜಿ ಸಚಿವ ಹೆಚ್.… Read More

May 8, 2024

SSLC ಫಲಿತಾಂಶ ಪರಿಶೀಲಿಸಲು ಸುಲಭ ಹಂತಗಳು : ವಿವರ

ಬೆಂಗಳೂರು: ನಾಳೆ ( ಮೇ 9 ) ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ SSLC ಪರೀಕ್ಷೆ-… Read More

May 8, 2024

ಈಜು ಕಲಿಯಲು ಹೋದ 10 ವರ್ಷದ ಬಾಲಕ ನೀರುಪಾಲು

ರಾಯಚೂರು: ತಾಲೂಕಿನ ಹೆಂಬೆರಾಳ ಗ್ರಾಮದಲ್ಲಿ ಈಜು ಕಲಿಯಲು ಹೋಗಿದ್ದ ಬಾಲಕ ನೀರುಪಾಲಾದ ಘಟನೆ ನಡೆದಿದೆ. ವಿನಾಯಕ (10) ಜೇಗರ್‌ಕಲ್ ಮಲ್ಲಾಪೂರು… Read More

May 8, 2024