December 27, 2024

Newsnap Kannada

The World at your finger tips!

ashrama

ಅನಾಥ ಮಕ್ಕಳ ಆಶಾಕಿರಣ ‘ಸಂಸ್ಕಾರ’

Spread the love

ಬಳ್ಳಾರಿ.

ಶಿಕ್ಷಕರು ಕೇವಲಶಾಲೆಗೆ ಹೋಗುವುದು, ಮಕ್ಕಳಿಗೆ ಪಾಠ ಮಾಡುವುದು, ಸರ್ಕಾರತಮಗೆ ವಹಿಸಿರುವ ಜವಾಬ್ದಾರಿಯಂತೆ ಶಾಲೆ ಕೆಲಸಗಳನ್ನು ಪೂರೈಸುವುದು ಇಷ್ಟೆ ಶಿಕ್ಷಕನ ಕೆಲಸವಲ್ಲ, ಇದನ್ನು ಮೀರಿಯೂ ಕೆಲ ಶಿಕ್ಷಕರು ಮಾನವೀಯ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ನಗರಕೌಲ್‍ಬಜಾರ್‍ನಲ್ಲಿರುವ ಬಸಮ್ಮ ಹಿರಿಯ ಪ್ರಾಥಮಿಕ ಶಾಲೆಯದೈಹಿಕ ಶಿಕ್ಷಕ ಬಿ.ಎಚ್.ಎಂ.ವಿರೂಪಾಕ್ಷಯ್ಯ, ಅನಾಥ ಮಕ್ಕಳಿಗೆ ಬದುಕುರೂಪಿಸಲು ‘ಸಂಸ್ಕಾರ’ ಎಂಬ ಅನಾಥಾಶ್ರಮ ಆರಂಭಿಸಿದ್ದಾರೆ.

ಜಾಗೃತಿ ನಗರದಲ್ಲಿ ಆರಂಭಿಸಿರುವ ಈ ಆಶ್ರಮದಲ್ಲಿ ಈಗಾಗಲೇ ತಂದೆ-ತಾಯಿಇಲ್ಲದ, ಎಚ್‍ಐವಿ/ಕ್ಯಾನ್ಸರ್ ಸೋಂಕಿತರ 12 ಮಕ್ಕಳನ್ನು ಸೇರಿಸಿಕೊಂಡಿದ್ದಾರೆ. ಇನ್ನೂ 18 ಮಕ್ಕಳನ್ನು ಸೇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. ಶಾಲೆಯಲ್ಲಿದ್ದ ಬಡ ಮಕ್ಕಳಿಗೆ ಪುಸ್ತಕ, ಶುಲ್ಕ, ಬಟ್ಟೆ ಮತ್ತಿತರ ವೆಚ್ಚ ಭರಿಸುತ್ತಿದ್ದರು ಶಿಕ್ಷಕ ವಿರೂಪಾಕ್ಷಯ್ಯ. ಅಲ್ಲದೆ, ಶಾಲೆಗೆ ತಡವಾಗಿ ಬರುತ್ತಿದ್ದ ಮಕ್ಕಳನ್ನು ಗಮನಿಸಿ, ಅವರ ಮನೆಗಳಿಗೆ ಹೋಗಿ ಅವರ ಸಮಸ್ಯೆಗಳನ್ನು ಕಣ್ಣಿಂದಕಂಡು, ಅಂತಹ ಮಕ್ಕಳಿಗೆ ಏನಾದರೂ ಮಾಡಬೇಕೆಂದು ನಿರ್ಧರಿಸಿದರು. ಆ ನಿರ್ಧಾರದ ಫಲವೇ ‘ಸಂಸ್ಕಾರ’ ಅನಾಥಾಶ್ರಮ.

ಶಿಕ್ಷಕರಿಗೆ ಸಮಾಜವನ್ನುತಿದ್ದಬಲ್ಲ ಶಕ್ತಿ ಇದೆ. ಅದಕ್ಕೆ ಮನಸ್ಸು ಮಾಡಬೇಕಷ್ಟೆ. ಮನಸ್ಸಿದ್ದರೆ ಮಾರ್ಗ. ಶಿಕ್ಷಕರೆಲ್ಲರೂ ಸರ್ಕಾರಿ ಶಾಲೆಗಳಿಗೆ ಬರುವ ಬಡ ಮಕ್ಕಳ ಸಮಸ್ಯೆಗಳನ್ನು ಮನವಿಟ್ಟು ಗಮನಿಸಿದರೆ, ಬಡ ಮಕ್ಕಳ ಭವಿಷ್ಯವೂಉಜ್ವಲವಾಗುತ್ತದೆ. ಅದಕ್ಕೆ ವಿರೂಪಾಕ್ಷಯ್ಯಅವರಂತೆಇತರೆ ಶಿಕ್ಷಕರು ಮನಸ್ಸು ಮಾಡಬೇಕು.

Copyright © All rights reserved Newsnap | Newsever by AF themes.
error: Content is protected !!