ನ್ಯೂಸ್ ಸ್ನ್ಯಾಪ್.
ತ್ರಿಶೂರ್, ಕೇರಳ.
ಪೋಲಿಸರೂ ಕೂಡ ಕೆಲವೊಮ್ಮೆ ಜನ ಮೆಚ್ಚುವ ಕೆಲಸ ಮಾಡುತ್ತಾರೆ.
ಪೋಲಿಸ್ ಠಾಣೆಗಳಲ್ಲಿ ಜಪ್ತಿ ಮಾಡಿದ ವಾಹನಗಳು ಶಿಥಿಲಾವಸ್ಥೆಯಲ್ಲಿ ಬಿದ್ದಿರುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಂದು ಪೋಲೀಸ್ ಠಾಣೆಯ ಸಿಬ್ಭಂದಿಗಳು ಜಪ್ತಿಗೊಂಡು ಶಿಥಿಲಾವಸ್ತೆ ತಲುಪಿದ ವಾಹನಗಳನ್ನು ಬಳಸಿಕೊಂಡು ಸಾವಯವ ಕೃಷಿಯನ್ನು ಮಾಡಿದ್ದಾರೆ ಎಂದರೆ ನೀವು ನಂಬುತ್ತೀರಾ?
ಕೇರಳದ ತ್ರಿಶೂರ್ ಜಿಲ್ಲೆಯ ಚೆರುತುರುತಿ ಪೋಲಿಸ್ ಠಾಣೆಯ ಪೋಲಿಸ್ ಸಿಬ್ಬಂದಿಗಳಾದ ಸಿಂಪ್ಸನ್, ಸುಧಾಕರನ್, ಬೇಬಿ, ರಂಜಿತ್ ಹಾಗೂ ರಘು ಎಂಬುವವರು ತುಕ್ಕು ಹಿಡಿಯುತ್ತಿದ್ದ ಈ ವಾಹನಗಳನ್ನು ನೋಡಲಾಗದೇ ಇದರಲ್ಲಿ ಸಾವಯವ ಕೃಷಿಯನ್ನು ಆರಂಭಿಸಿದರು.
ಪೋಲಿಸ್ ಅಧಿಕಾರಿ ರಂಗರಾಜ್ ಕೃಷಿಯ ಮೇಲ್ವಿಚಾರಣೆಯನ್ನು ನೋಡಿಕೊಳ್ಳುತ್ತಾರೆ. ಈಗಾಗಲೇ ಬೆಳೆ ಬಂದು ಕಟಾವು ಕೂಡ ಆಗಿದೆ. ಪ್ರತಿ ಪೋಲಿಸ್ ಠಾಣೆಯ ಕೆಲವಾದರೂ ಸಿಬ್ಬಂದಿಗಳು ಕೃಷಿಯ ಮಹತ್ವವನ್ನು ಅರಿತು ಈ ರೀತಿಯಲ್ಲಿ ಕೃಷಿ ಮಾಡಿದರೆ ಅದು ಎಲ್ಲರಿಗೂ ಮಾದರಿ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು