November 6, 2024

Newsnap Kannada

The World at your finger tips!

WhatsApp Image 2022 07 10 at 1.59.01 PM

ಕರ್ನಾಟಕಕ್ಕೆ ಮತ್ತೆ ಶಾಕ್ – ತ.ನಾಡಿಗೆ ಪ್ರತಿ ನಿತ್ಯ 5,000 ಕ್ಯೂಸೆಕ್ ನೀರು ಹರಿಸಲು ಆದೇಶ

Spread the love

ನವದೆಹಲಿ: ತಮಿಳುನಾಡಿಗೆ ಪ್ರತಿದಿನ 5,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲು ರಾಜ್ಯಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತೆ ಸೋಮವಾರ ಆದೇಶಿಸಿದೆ

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಡೆಸಿದ ಸಭೆಯಲ್ಲಿ ಎರಡು ರಾಜ್ಯಗಳನ್ನು ನಿಭಾಯಿಸಲು ಸಿಡಬ್ಲ್ಯೂಆರ್‌ಸಿ ಆದೇಶ ಪಾಲಿಸಬೇಕು.

ಈ ಆದೇಶದಂತೆ 15 ದಿನ 5,000 ಕ್ಯೂಸೆಕ್ ನೀರು ಬಿಡಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶಿಸಿದೆ.

ಸಭೆ ಆರಂಭದ ವೇಳೆ, ನೀರಿಗಾಗಿ ತಮಿಳುನಾಡು ಪಟ್ಟು ತೀವ್ರಗೊಳಿಸಿತ್ತು. ನಿತ್ಯ 12,500 ಕ್ಯೂಸೆಕ್ ನೀರು ಹರಿಸಲು ಪಟ್ಟು ಹಿಡಿದಿತ್ತು. ಆದರೆ ನೀರು ನಿರ್ವಹಣಾ ಪ್ರಾಧಿಕಾರ, ಸಿಡಬ್ಲ್ಯೂಆರ್‌ಸಿ ಆದೇಶವನ್ನು ಮುಂದುವರಿಸುವಂತೆ ಸೂಚಿಸಿದೆ.

ಪ್ರಾಧಿಕಾರದ ಆದೇಶ ತಮಿಳುನಾಡಿನ ಪರ ಬಂದಿದೆ. ಈ ಆದೇಶದಿಂದ ಕರ್ನಾಟಕ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಮತ್ತೆ ಕಾವೇರಿ ಸಂಕಷ್ಟ ಎದುರಾಗಿದೆ.

ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ.ಹಲ್ದಾರ್ ನೇತೃತ್ವದಲ್ಲಿ ತುರ್ತು ಸಭೆ ನಡೆಯಿತು. ಕಾವೇರಿ ನೀರು ನಿಯಂತ್ರಣ ಸಮಿತಿ ಅಧ್ಯಕ್ಷ ವಿನೀತ್ ಗುಪ್ತಾ ಹಾಜರಿದ್ದರು. 24ನೇ ಪ್ರಾಧಿಕಾರದ ಸಭೆಯಲ್ಲಿ ತಮಿಳುನಾಡು ಜಲಸಂಪನ್ಮೂಲ ಕಾರ್ಯದರ್ಶಿ ಸಂದೀಪ್ ಸಸೇನಾ, ಕಾವೇರಿ ತಾಂತ್ರಿಕ ಸಮಿತಿ ಅಧ್ಯಕ್ಷ ಸುಬ್ರಮಣಿಯನ್, ಕೇರಳದ ಅಧಿಕಾರಿಗಳೂ ಖುದ್ದು ಹಾಜರಿದ್ದರು.

ಕರ್ನಾಟಕ ಮತ್ತು ಪುದುಚೇರಿಯ ಅಧಿಕಾರಿಗಳು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಭಾಗಿಯಾಗಿದ್ದರು. ಸುಮಾರು 2 ಗಂಟೆಗಳ ಕಾಲ ಸಭೆ ನಡೆಯಿತು.

Copyright © All rights reserved Newsnap | Newsever by AF themes.
error: Content is protected !!