December 25, 2024

Newsnap Kannada

The World at your finger tips!

jarakihole

ರಮೇಶ್​ ಜಾರಕಿಹೊಳಿ ರಾಜೀನಾಮೆಗೆ ವಿರೋಧ: ಗೋಕಾಕ್​ ಬಂದ್, ಗಲಾಟೆ

Spread the love

ಮುಖ್ಯಮಂತ್ರಿ ಯಡಿಯೂರಪ್ಪ ಸಹ ಸ್ವತಃ ರಮೇಶ್​ ಜಾರಕಿಹೊಳಿ ರಾಜೀನಾಮೆ ಕೇಳಿದ ನಂತರ ಗೋಕಾಕ್​ ಕ್ಷೇತ್ರದಲ್ಲಿ ರಮೇಶ್​ ಬೆಂಬಲಿಗರು ರಾಜೀನಾಮೆಯನ್ನು ಖಂಡಿಸಿದ್ದಾರೆ.

ಸಿಎಂ ಅವರು ರಾಜೀನಾಮೆಯನ್ನು ಅಂಗೀಕರಿಸಬಾರದು ಎಂದು ಒತ್ತಾಯಿಸಿದ್ದಾರೆ. ಅಲ್ಲದೆ, ಒತ್ತಾಯಪೂರ್ವಕವಾಗಿ ಗೋಕಾಕ್​ ಬಂದ್​ ಮಾಡಲು ಮುಂದಾಗಿದ್ದಾರೆ.

ಸೆಕ್ಸ್​ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಸಚಿವ ರಮೇಶ್​ ಜಾರಕಿಹೊಳಿ ಸಿಎಂ ಯಡಿಯೂರಪ್ಪ ಅವರಿಗೆ ರಾಜೀನಾಮೆ ನೀಡುತ್ತಿದ್ದಂತೆ ಬೆಳಗಾವಿಯ ಗೋಕಾಕ್​ನಲ್ಲಿ ಬೆಂಬಲಿಗರು ಬೀದಿಗೆ ಇಳಿದು ಪ್ರತಿಭಟಿಸುತ್ತಿದ್ದಾರೆ.

ಯಡಿಯೂರಪ್ಪನವರು ಸಚಿವರ ರಾಜೀನಾಮೆ ಸ್ವೀಕರಿಸಿದರೆ ತಾವು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕೈನಲ್ಲಿ ಪೆಟ್ರೋಲ್ ಕ್ಯಾನ್ ಹಿಡಿದು ಬೆದರಿಕೆ ಒಡ್ಡುತ್ತಿದ್ದಾರೆ.

ಕೆಲವರು ಕೈನಲ್ಲಿ ಬಡಿಗೆ-ಕಲ್ಲು ಹಿಡಿದು ಒತ್ತಾಯಪೂರ್ವಕವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ಬಂದ್ ಮಾಡಿಸುತ್ತಿದ್ದಾರೆ. ಇನ್ನೂ ಕೆಲವೆಡೆ ರಮೇಶ್​ ಜಾರಕಿಹೊಳಿ ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಮುಚ್ಚುವ ಮೂಲಕ ಅವರ ರಾಜೀನಾಮೆಯನ್ನು ವಿರೋಧಿಸಿದ್ದಾರೆ.

ಗೋಕಾಕ್​ನಲ್ಲಿ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ರಮೇಶ್​ ಬೆಂಬಲಿಗರ ಆಟಾಟೋಪಗಳಿಗೆ ನಿಯಂತ್ರಣ ಹೇರುವುದೇ ಪೊಲೀಸರಿಗೆ ದೊಡ್ಡ ಸವಾಲಿನ ಕೆಲಸವಾಗಿ ಪರಿಣಮಿಸಿದೆ.

Copyright © All rights reserved Newsnap | Newsever by AF themes.
error: Content is protected !!