Main News

ಅ.1 ರಿಂದ ಥಿಯೇಟರ್​​​ನಲ್ಲಿ ಶೇ.100 ಸೀಟು ಭರ್ತಿಗೆ ಅವಕಾಶ – ಸಿಎಂ ಬೊಮ್ಮಾಯಿ

ರಾಜ್ಯದಲ್ಲಿ ಸರಾಸರಿ 0.66 ಕೋವಿಡ್ ಪ್ರಮಾಣ ಇದೆ. ಪಾಸಿಟಿವಿ ರೇಟ್​​ ಶೇ.1 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಅಕ್ಟೋಬರ್ 1 ರಿಂದ 100% ರಷ್ಟು ಥಿಯೇಟರ್ ಗೆ ಅವಕಾಶ ನೀಡಲಾಗುತ್ತದೆ. ಕನಿಷ್ಠ 1 ಡೋಸ್​ ಹಾಕಿಸಿಕೊಂಡವರಿಗೆ ಅವಕಾಶ ನೀಡಲಾಗುತ್ತದೆ ಎಂದು ಸಿಎಂ ಬಸವರಾಜ್​ ಬೊಮ್ಮಾಯಿ ತಿಳಿಸಿದರು.

ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಸದಸ್ಯರನ್ನೊಳಗೊಂಡ ಸಭೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ರಾಜ್ಯದಲ್ಲಿ ಕೊರೊನಾ ಸೋಂಕಿನ ಪಾಸಿಟಿವಿ ದರ ಸರಾಸರಿ 0.66 ರಷ್ಟಿದೆ. ಆದ್ದರಿಂದ ಕೆಲವು ಮಾರ್ಗಸೂಚಿಗಳಲ್ಲಿ ಬದಲಾವಣೆ ಮಾಡಲು ನಿರ್ಧಾರ ಮಾಡಿದ್ದೇವೆ. ಇದರಂತೆ ಶೇ.1ಕ್ಕಿಂತ ಪಾಸಿಟಿವಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ 100 ರಷ್ಟು ಥಿಯೇಟರ್ ನಲ್ಲಿ ಸಿನಿಮಾ ವೀಕ್ಷಣೆಗೆ ಅವಕಾಶ ನೀಡಲಾಗುತ್ತದೆ. ಪಾಸಿಟಿವಿ ದರ 2 ರಷ್ಟು ಆದರೆ ಸಿನಿಮಾ ಮಂದಿರಗಳೇ ಸ್ಥಗಿತ ಮಾಡ್ತೇವೆ. ನೈಟ್ ಕರ್ಫ್ಯೂ‌ 9ರ ಬದಲು ರಾತ್ರಿ 10ರಿಂದ ಇರಲಿದೆ ಎಂದು ಸ್ಪಷ್ಟಪಡಿಸಿದರು.

1 ರಿಂದ 5 ತರಗತಿ ಶಾಲೆ ಓಪನ್ ಇಲ್ಲ :

ಶಾಲೆಗಳ ಓಪನ್ ವಿಚಾರವಾಗಿ ಮಾತನಾಡಿ, 1 ರಿಂದ 5ನೇ ತರಗತಿ ಸದ್ಯಕ್ಕೆ ಓಪನ್ ‌ಇಲ್ಲ. 6-12 ನೇ ತರಗತಿಗಳಿಗೆ 100% ಹಾಜರಾತಿಗೆ ಅನುಮತಿ ನೀಡಲಾಗುತ್ತದೆ‌ ಎಂದರು.

ಸೋಮವಾರದಿಂದ ಶುಕ್ರವಾರ ದವರೆಗೆ ಶಾಲಾ ಕಾಲೇಜಿಗೆ ಅನುಮತಿ ನೀಡಲಾಗುತ್ತದೆ
ದೇವಸ್ಥಾನಕ್ಕೆ ಅವಕಾಶ ಸಂಬಂಧ ಆಯಾ ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಜಿಲ್ಲೆಗಳಲ್ಲಿ ಅಧಿಕಾರಿಗಳು ಪರಿಸ್ಥಿತಿ ನೋಡಿಕೊಂಡು ದೇವಸ್ಥಾನದ ಬಗ್ಗೆ ನಿರ್ಧಾರ ಮಾಡ್ತಾರೆ. ಇನ್ನು ಯಾದಗಿರಿ, ಮೈಸೂರು, ರಾಯಚೂರು, ಕಲಬುರಗಿ ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನ ಚುರುಕು ಮಾಡಲು ಕ್ರಮಕೈಗೊಳ್ಳಲಾಗುತ್ತದೆ.

Team Newsnap
Leave a Comment
Share
Published by
Team Newsnap

Recent Posts

ಪ್ರೀತಿಯೆಂದರೆ…. ಇಷ್ಟೇನಾ

(ಬ್ಯಾಂಕರ್ಸ್ ಡೈರಿ) -ಡಾ. ಶುಭಶ್ರೀಪ್ರಸಾದ್ ಮಂಡ್ಯ ಅಂದೂ ಎಂದಿನಂತೆಯೇ ಬ್ಯಾಂಕಿನಲ್ಲಿ ವಿಪರೀತ ರಶ್ಶು. ಆ ಹುಡುಗಿ ಹೊಸ ಖಾತೆ ತೆರೆಯಲು… Read More

May 6, 2024

ಹಾಸನ ಅಶ್ಲೀಲ ವಿಡಿಯೋಗಳನ್ನು ಹಂಚುವುದು ಶಿಕ್ಷಾರ್ಹ ಅಪರಾಧ: ಎಸ್‌ಐಟಿ

ಬೆಂಗಳೂರು : ವಿಶೇಷ ತನಿಖಾ ತಂಡ (SIT) ಮುಖ್ಯಸ್ಥ ಬಿ.ಕೆ.ಸಿಂಗ್ , ಹಾಸನದ ಅಶ್ಲೀಲ ಮತ್ತು ಶೋಷಣೆ ಪ್ರಕರಣಕ್ಕೆ ಸಂಬಂಧಿಸಿದಂತೆ… Read More

May 6, 2024

ಕುಸ್ತಿಪಟು ಭಜರಂಗ್ ಪುನಿಯಾ ನಾಡಾದಿಂದ ಅಮಾನತು

ನವದೆಹಲಿ: ಕುಸ್ತಿಪಟು ಭಜರಂಗ್ ಪುನಿಯಾ ( Bajrang Punia) ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ (NADA )… Read More

May 5, 2024

ಭಾರತದಲ್ಲಿ ಚಿನ್ನದ ದರದ ಬಗ್ಗೆ ತಿಳಿಯಿರಿ | Gold Price In India

ನವದೆಹಲಿ ,ಮೇ 5 : ಭಾರತದಲ್ಲಿ 22 ಕ್ಯಾರೆಟ್ನ 10 ಗ್ರಾಂ ಚಿನ್ನದ ಬೆಲೆ 65,750 ರೂಪಾಯಿ ದಾಖಲಾಗಿದೆ. 24… Read More

May 5, 2024

ಲೋಕಾಯುಕ್ತರ ಹೆಸರಿನಲ್ಲಿ ಬೆಸ್ಕಾಂ ಎಂಡಿಗೆ ಬೆದರಿಕೆ – ದೂರು ದಾಖಲು

ಬೆಂಗಳೂರು : ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಹಾಗೂ ಅಧಿಕಾರಿಗಳಿಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ಬೆದರಿಕೆ ಕರೆಗಳು ಬಂದ… Read More

May 5, 2024

ಸಂಚಾರ ನಿಯಮಗಳ ಉಲ್ಲಂಘನೆ: ರಾಜ್ಯದಲ್ಲಿ 1,700 ಕೋಟಿ ರೂ. ದಂಡ ಬಾಕಿ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಬರೋಬ್ಬರಿ 1,700 ಕೋಟಿ ರೂ. ದಂಡ ಬಾಕಿ ಉಳಿದಿದೆ. ದಂಡವನ್ನು ವಸೂಲಿ… Read More

May 4, 2024