ಷರತ್ತುಗಳ ಅನ್ವಯಿಸಿ ನಾಳೆಯಿಂದ ಚಿತ್ರಮಂದಿರಗಳು ಓಪನ್

Team Newsnap
1 Min Read

ಕೋವಿಡ್ ಸೋಂಕು ವ್ಯಾಪಕವಾದ ಹಿನ್ಲೆಯಲ್ಲಿ ಮುಂಜಾಗ್ರತ ದೃಷ್ಠಿಯಿಂದ ಕಳೆದ 7 _ತಿಂಗಳಿನಿಂದ ಬಂದ್ ಮಾಡಿದ್ದ ಚಿತ್ರಮಂದಿರಗಳನ್ನು ಸರ್ಕಾರ ಮತ್ತೆ ಮರು ಪ್ರಾರಂಭ ಮಾಡುತ್ತಿದೆ. ಇದಕ್ಕಾಗಿ ಷರತ್ತು ಗಳನ್ನು ವಿಧಿಸಿ ಮಾರ್ಗಸೂಚಿಗಳನ್ನೂ ಸರ್ಕಾರ ಪ್ರಕಟಿಸಿದೆ.

ಚಿತ್ರಮಂದಿರಗಳಲ್ಲಿ ಪ್ರಾರಂಭಕ್ಕೆ ಸಂಬಂಧಿಸಿದಂತೆ ಎಸ್‌ಓಪಿಯನ್ನು ಸಿದ್ಧಪಡಿಸಲಾಗಿದೆ. ಮಾರ್ಗಸೂಚಿಗಳು ಹೀಗಿವೆ.

  1. ಚಿತ್ರಮಂದಿರದ ಒಟ್ಟು ಸೀಟುಗಳಲ್ಲಿ ಶೇ. 50ರಷ್ಟು ಸೀಟುಗಳನ್ನು ಮಾತ್ರ ಪ್ರೇಕ್ಷಕರಿಗೆ ನೀಡಬೇಕು. ಅಲ್ಲದೇ ಚಿತ್ರಮಂದಿರಗಳಲ್ಲಿ ಸಾಮಾಜಿಕ‌ ಅಂತರ ಕಡ್ಡಾಯವಾಗಿದ್ದು, ಪ್ರತಿ ಪ್ರೇಕ್ಷಕರ ಮಧ್ಯೆ ಒಂದು ಸೀಟ್ ಖಾಲಿ ಬಿಟ್ಟು, ಆ ಸೀಟಿನಲ್ಲಿ (ಖಾಲಿ ಸೀಟ್) ಯಾರೂ ಕುಳಿತುಕೊಳ್ಳದಂತೆ ಗುರುತು ಮಾಡಿರಬೇಕು.
  2. ಪ್ರತೀ ಪ್ರೇಕ್ಷಕರಿಗೆ ಮಾಸ್ಕ್ ಕಡ್ಡಾಯವಾಗಲಿದೆ ಹಾಗೂ ಪ್ರತೀ ಚಿತ್ರಮಂದಿರದ ಒಳಗಡೆ ಸ್ಯಾನಿಟೈಜರ್ ಇಡಬೇಕು.
  3. ಚಿತ್ರ ವೀಕ್ಷಣೆ ಮಾಡಲು ಪ್ರತಿಯೊಬ್ಬರೂ ಆರೋಗ್ಯ ಸೇತು ತಂತ್ರಾಂಶವನ್ನು ಕಡ್ಡಾಯವಾಗಿ ಡೌನ್‌ಲೋಡ್ ಮಾಡಿಕೊಂಡಿರಬೇಕು ಹಾಗೂ ತಾಪಮಾನ ಪರೀಕ್ಷೆ ಕಡ್ಡಾಯ.
  4. ಆನ್‌ಲೈನ್ ಚಿತ್ರ ಟಿಕೇಟ್‌ಗಳ ಬುಕಿಂಗ್‌ಗೆ ಹೆಚ್ಚು ಪ್ರೋತ್ಸಾಹ ನೀಡಬೇಕು ಮತ್ತು ಚಿತ್ರಮಂದಿರಗಳಲ್ಲಿ ಟಿಕೇಟ್ ನೀಡಲು ಹೆಚ್ಚಿನ ಕೌಂಟರ್‌ಗಳನ್ನು ತೆರೆಯ ಬೇಕು.
  5. ಚಿತ್ರಮಂದಿರಗಳಲ್ಲಿ‌ ಪ್ಯಾಕ್ ಮಾಡಿದ ಆಹಾರ ಮಾತ್ರ ಮಾನ್ಯ.‌ಇದಕ್ಕಾಗಿ ಹೆಚ್ಚಿನ ಅಂಗಡಿಗಳನ್ನು ತೆರೆಯುವುದು ಕಡ್ಡಾಯ.
  6. ಚಿತ್ರಮಂದಿರದ ಸಿಬ್ಬಂದಿಗಳಿಗೆ ಕೈಗವಸು, ಪಿಇಪಿ ಕಿಟ್, ಮಾಸ್ಕ್ ಇವುಗಳನ್ನು ಚಿತ್ರಮಂದಿರದ ಆಡಳಿತವೇ ಒದಗಿಸಬೇಕು. ಸಿಬ್ಬಂದಿಗಳ ಸುರಕ್ಷತೆಯ ಜವಾಬ್ದಾರಿ ಚಿತ್ರಮಂದಿರದ ಆಡಳಿತದ್ದು.
  7. ಪ್ರತೀ ಪ್ರದರ್ಶನದ ನಂತರ ಚಿತ್ರಮಂದಿರವನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಬೇಕು. ಇದಕ್ಕಾಗಿ ಪ್ರತಿ ಪ್ರದರ್ಶನದ ನಡುವೆ 20-30 ನಿಮಿಷಗಳ ಅಂತರವಿರಬೇಕು.
  8. ಚಿತ್ರಮಂದಿರದ ತಾಪಮಾನ 24 ರಿಂದ 30 ಡಿಗ್ರಿ ಇರುವುದು ಕಡ್ಡಾಯ.
  9. ಒಂಟಿ ಪರದೆ ಚಿತ್ರಮಂದಿರಗಳಲ್ಲಿ ಸಾಕಷ್ಟು ಗಾಳಿ ವ್ಯವಸ್ಥೆ ಇರಬೇಕು.
  10. ಪ್ರತೀ ಪ್ರದರ್ಶನದಲ್ಲೂ ಒಂದು ನಿಮಿಷದ ಜಾಗೃತಿ ಜಾಹೀರಾತು ಕಡ್ಡಾಯ.
Share This Article
Leave a comment