February 23, 2026

Newsnap Kannada

The World at your finger tips!

ಕೊರೋನಾ ಸೋಂಕಿತರು‌ ಮೃತರಾದರೆ ಅಂತ್ಯ ಸಂಸ್ಕಾರಕ್ಕೆ ಐದು ಮಂದಿಗೆ ಮಾತ್ರ ಅವಕಾಶ – ಸರ್ಕಾರದ ಆದೇಶ

Spread the love

ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಐದು ಮಂದಿಗೆ ಮಾತ್ರ ಅವಕಾಶ ನೀಡಿ ಸರ್ಕಾರ ಹೊಸ ಆದೇಶ ಹೊರಡಿಸಿದೆ.

ರಾಜ್ಯದಲ್ಲಿ ಕೊರೊನಾ ಮಹಾಸ್ಪೋಟದ ಹಿನ್ನೆಲೆ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳುತ್ತಿರುವ ರಾಜ್ಯ ಸರ್ಕಾರ ಇದೀಗ ಕೆಲವು ಕಠಿಣ ಕ್ರಮ‌ಕೈಗೊಳ್ಳಲು‌ ಮುಂದಾಗಿದೆ.

ಕರ್ಪ್ಯೂ ಜಾರಿ ಮಾಡುವ ಸಂದರ್ಭದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರದ ಸಂದರ್ಭದಲ್ಲಿ 20 ಜನರಿಗೆ ಮಾತ್ರ ಭಾಗವಹಿಸಲು ಈ ಹಿಂದೆ ಅವಕಾಶ ನೀಡಲಾಗಿತ್ತು.

ಈಗ ಮತ್ತಷ್ಟು ಕಡಿಮೆ ಮಾಡಿ ಹೊಸ ಮಾರ್ಗಸೂಚಿ ಪಾಲಿಸಿ ಐದು ಮಂದಿ ಮಾತ್ರ ಭಾಗಿಯಾಗಬೇಕು ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಆದೇಶ ಹೊರಡಿಸಿದ್ದಾರೆ.

error: Content is protected !!