ಒಂದು ಸಿಡಿ ಕಥೆ : 2+3+4 ಅಲ್ಲ, ದೊಡ್ಡ ಜಾಲವೇ ಇದೆ- ಸಿಡಿ ಯುವತಿ‌ ವಿಜಯಪುರ ‌ಮೂಲದವಳು

Team Newsnap
2 Min Read

ಮಾಜಿ ಸಚಿವರ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ನಡೆಸುತ್ತಿರುವ ಎಸ್‍ಐಟಿ ಐವರನ್ನು ವಿಚಾರಣೆ ನಡೆಸಿದ ಬಳಿಕ‌ ಅನೇಕ ಸಂಗತಿಗಳನ್ನು ಕಲೆ ಹಾಕಿದೆ.

ಸಿಡಿಯಲ್ಲಿ ಇರುವ ಯುವತಿ ‌ವಿಜಯಪುರ ಮೂಲದವಳು. ಈಕೆ ಮೊದಲಿನಿಂದಲೂ ಬಲ್ಲ ವ್ಯಕ್ತಿ ಯನ್ನು ನಿನ್ನೆ ವಿಜಯಪುರ ಪುರದಲ್ಲಿ ಟ್ರೇಸ್ ಮಾಡಿ ವಿಚಾರಣೆ ಮಾಡಲಾಗಿದೆ.

ಆತನಿಗೆ ಈ ಸಿಡಿ ಬಹಿರಂಗವಾಗುವ ಸಂಗತಿ ಮೊದಲೇ ಗೊತ್ತಿತ್ತು ಹಾಗೂ ಈ ಪ್ರಕರಣದ ಸಮಗ್ರ ಮಾಹಿತಿ ನೀಡುವುದಾಗಿ ವಿಜಯಪುರ ದ ಆ ಯುವಕ ಬಾಯಿ ಬಿಟ್ಟಿದ್ದಾನೆಂದು ಮೂಲಗಳಿಂದ ಗೊತ್ತಾಗಿದೆ.

ಆ ಯುವತಿಯ ಬಾಯ್ ಫ್ರೆಂಡ್ ನನ್ನು ನಿನ್ನೆ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆತ ಆಕೆ ನನ್ನ ಜೊತೆ ಫೆ. 28 ರವರೆಗೆ ಮಾತ್ರ ಸಂಪರ್ಕ ದಲ್ಲಿ ಇದ್ದಳು. ನಂತರ ಆಕೆ ಬಗ್ಗೆ ಯಾವುದೇ ‌ಮಾಹಿತಿ ಇಲ್ಲ ಎಂದು ಹೇಳಿದ್ದಾನೆ ಎನ್ನಲಾಗಿದೆ.

ದಿನೇಶ್ ಕಲ್ಲಹಳ್ಳಿ ಸಿಡಿ ತಂದು ತಲುಪಿಸಿದ ಯುವಕ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಆತ ನನಗೆ ಯಾರು ಸಿಡಿ ಕೊಟ್ಟರು ಎಂಬ ವಿಷಯವನ್ನು ಬಾಯಿ ಬಿಟ್ಟಿದ್ದಾನೆ.

ಆ ಯುವತಿ ಬಗ್ಗೆ ಸಾಕಷ್ಟು ಮಾಹಿತಿ ಇಟ್ಟುಕೊಂಡು ಆಕೆಯ ತಲಾಷ್ ಮಾಡಲು ಜಾಲ ಬೀಸಲಾಗಿದೆ.

ಎಸ್‍ಐಟಿ ತಂಡ ರಚನೆಯಾದ ಎರಡೇ ಗಂಟೆಯಲ್ಲಿ ಐವರನ್ನ ಅಧಿಕಾರಿಗಳು ಪತ್ತೆ ಮಾಡಿ ಸಾಕಷ್ಟು ಮಾಹಿತಿ ಕಲೆ ಹಾಕಿದ್ದಾರೆ.

ಎಸ್‍ಐಟಿ ಆಪರೇಷನ್‍ನ ಮುಖ್ಯಸ್ಥ
ಸೌಮೆಂದು ಮುಖರ್ಜಿ ನೇತೃತ್ವದ ತಂಡಕ್ಕೆ 2+3+4 ಒಟ್ಟು 9 ಮಂದಿ ಸಿಡಿ ಮೇಕಿಂಗ್ ನಲ್ಲಿ ಕೈವಾಡ ಇದೆ‌ ಎಂದು ಹೇಳಲಾಗುತ್ತಿತ್ತು. ಆದರೆ ದೊಡ್ಡ ಜಾಲ ಈ ಪ್ರಕರಣದ ಹಿಂದಿದೆ ಎನ್ನುವುದು ಸ್ಪಷ್ಟವಾಗಿದೆ.

ಈ ದಿನ ಇನ್ನೂ ಐವರನ್ನು ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಅಲ್ಲದೆ ನಿನ್ನೆ ವಿಚಾರಣೆ ಮುಗಿಸಿಕೊಂಡು ಹೋದವರು ಇಂದೂ ಹೆಚ್ಚಿನ ವಿಚಾರಣೆಗೆ ಹಾಜರಾಗಲಿದ್ದಾರೆ.

ಎಸ್‍ಐಟಿ ತೀವ್ರ ವಿಚಾರಣೆಗೆ ಇಬ್ಬರು ತಮ್ಮ ಜೊತೆಯಲ್ಲಿದ್ದ ಮೂವರ ಮಾಹಿತಿಯನ್ನ ನೀಡಿದ್ದಾರೆ. ಇಬ್ಬರ ಮಾಹಿತಿ ಆಧರಿಸಿ ಮತ್ತೆ ಮೂವರಿಗೆ 3 ರಾಜ್ಯಗಳಲ್ಲಿ ಎಸ್‍ಐಟಿ ಬಲೆ ಬೀಸಿದೆ. ಹೈದರಾಬಾದ್, ಚೆನ್ನೈ ಮತ್ತು ಮಂಗಳೂರಲ್ಲಿ ತಲಾ ಒಬ್ಬರನ್ನು ವಶಕ್ಕೆ ಪಡೆಯಲಾಗಿದೆ.

Share This Article
Leave a comment