January 8, 2025

Newsnap Kannada

The World at your finger tips!

ae015720 d1b5 4468 a509 799168faf31a

ನ. 17ರಿಂದ ಕಾಲೇಜು: ಶನಿವಾರ, ಭಾನುವಾರವೂ ಕ್ಲಾಸ್ – ಹಾಜರಾತಿ ಕಡ್ಡಾಯವಲ್ಲ

Spread the love

ರಾಜ್ಯದಲ್ಲಿ‌ ಕೊರೋನಾ ಹಾವಳಿ ಇರುವಾಗಲೇ ಸರ್ಕಾರ ಎಲ್ಲ ಪದವಿ ಹಾಗೂ ಸ್ನಾತಕೋತ್ತರ ತರಗತಿಗಳನ್ನು ನ.‌17ರಿಂದ ಪ್ರಾರಂಭ ಮಾಡಲು ನಿರ್ಧರಿಸಿದ ನಂತರ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಸೂಚಿಸಲಾಗಿದೆ

ಸಿಎಂ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರು ಕಾಲೇಜುಗಳ ಆರಂಭದ ಬಗ್ಗೆ ಸಮಾಲೋಚನೆ ನಡೆಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ.

be01c8f8 9d54 4785 943d 27af0a08cc66
  • ಕಾಲೇಜುಗಳು ಪ್ರಾರಂಭವಾದ ನಂತರ ವಿದ್ಯಾರ್ಥಿಗಳು ಆನ್‌ಲೈನ್ ಅಥವಾ ಆಫ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಬಹುದು.
  • ಹಾಜರಾತಿ ಕಡ್ಡಾಯವಲ್ಲ
  • ನೇರವಾಗಿ ತರಗತಿಗಳಿಗೆ ಹಾಜರಾಗಬಯಸುವ ವಿದ್ಯಾರ್ಥಿಗಳು ಪೋಷಕರಿಂದ‌ ಕಡ್ಡಾಯವಾಗಿ‌ ಅನುಮತಿ ಪತ್ರ ಪಡೆದುಕೊಂಡು‌ ಬರಬೇಕು.
  • ಆನ್‌ಲೈನ್ ತರಗತಿಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ನ. 17ಕ್ಕೂ ಮುಂಚೆಯೇ ತರಗತಿಗೆ ಹಾಜರಾಗುವ ಕುರಿತು ನೊಂದಣಿ ಮಾಡಿಸಿಕೊಳ್ಳಬೇಕು.
  • ಪಠ್ಯಕ್ರಮಗಳಿಗೆ, ಶೈಕ್ಷಣಿಕ ಚಟುವಟಿಕೆಗಳಿಗೆ ಸಮಸ್ಯೆಯಾಗಬಾರದು‌ ಎಂಬ ಕಾರಣಕ್ಕೆ ಇನ್ನುಮುಂದೆ ಶನಿವಾರ ಹಾಗೂ ಭಾನುವಾರವೂ ಸಹ ತರಗತಿಗಳನ್ನು ತೆಗೆದುಕೊಳ್ಳಲಾಗುವುದು
  • ತರಗತಿಗಳಿಗೆ ನೇರವಾಗಿ‌ ಬರುವ ವಿದ್ಯಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಕಡ್ಡಾಯ. ಮಾಸ್ಕ್ ಧರಿಸುವಿಕೆ, ಸಾಮಾಜಿಕ ಅಂತರವೂ ಸಹ ಕಡ್ಡಾಯ.
  • ಕಾಲೇಜುಗಳಲ್ಲಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳೂ ಸಹ ಕೈಗಳಿಗೆ ಕೈಗವಸುಗಳನ್ನು ಧರಿಸಬೇಕು. ಮಾಸ್ಕ್ ಕಡ್ಡಾಯವಾಗಿ‌ ಧರಿಸಬೇಕು‌ ಎಂದು ನಿರ್ದೇಶನ ನೀಡಲಾಗಿದೆ.
Copyright © All rights reserved Newsnap | Newsever by AF themes.
error: Content is protected !!