January 30, 2026

Newsnap Kannada

The World at your finger tips!

56e44a86 db91 4352 9ed2 c8a0eefff657

ನ. 17ರಿಂದ ಪದವಿ ತರಗತಿಗಳ ಪುನರಾರಂಭ: ಸಭೆ ನಡೆಸಿದ ಶ್ರೀರಾಮುಲು

Spread the love

ರಾಜ್ಯದಲ್ಲಿ ನವೆಂಬರ್ 17ರಿಂದ ಪದವಿ ತರಗತಿಗಳು ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳನ್ನು ಚರ್ಚಿಸಲು ಸಮಾಜ ಕಲ್ಯಾಣ ಇಲಾಖೆಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ಗುರುವಾರ ಸಭೆ ನಡೆಸಲಾಯ್ತು.

ರಾಜ್ಯ ಸರ್ಕಾರವು ನವೆಂಬರ್ 17ರಿಂದ ಪದವಿ ತರಗತಿಗಳನ್ನು ಪ್ರಾರಂಭಿಸುವದಾಗಿ ಆದೇಶಿಸಿ, ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಿತ್ತು. ಈಗಾಗಲೇ ಎಲ್ಲ ಪದವಿಗೂ, ಸ್ನಾತಕೋತ್ತರ ಪದವಿಗಳ ತರಗತಿಗಳು ಮುಚ್ಚಿ ಈಗಾಗಲೇ 8 ತಿಂಗಳಿಗೂ ಅಧಿಕ ಸಮಯವಾಗಿದೆ. ಲಾಕ್‌ಡೌನ್ ನಂತರ ಎಲ್ಲ ತರಗತಿಗಳೂ ಆನ್‌ಲೈನ್ ಮುಖಾಂತರವೇ ನಡೆದಿದ್ದವು.

ಈಗ ಮತ್ತೆ ಕಾಲೇಜುಗಳ ಮರು ಪ್ರಾರಂಭಕ್ಕೆ ಸರ್ಕಾರ ಹಸಿರು ನಿಶಾನೆ ತೋರಿರುವ ಹಿನ್ನಲೆಯಲ್ಲಿ ಶ್ರೀರಾಮುಲು ಅವರು ಇಲಾಖೆಯ ಎಲ್ಲ ಅಧಿಕಾರಿಗಳ ಸಭೆ ನಡೆಸಿ, ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿ ಬರುವ ಎಲ್ಲ ಹಾಸ್ಟೆಲ್‌ಗಳನ್ನು ಮರು ಪ್ರಾರಂಭಿಸುವ ಬಗ್ಗೆ ಚರ್ಚಿಸಿದರು. ಅಲ್ಲದೇ ಹಾಸ್ಟೆಲ್‌ಗಳಲ್ಲಿ ತಂಗುವ ವಿದ್ಯಾರ್ಥಿಗಳು ಯಾವುದೇ ತೊಂದರೆ ಎದುರಿಸದಂತೆ ಸಮರ್ಪಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲು ಸಭೆಯಲ್ಲಿ ಮಾತುಕತೆ ನಡೆಸಲಾಯ್ತು. ಸಭೆಯಲ್ಲಿ ಇಲಾಖಾ ಸಲಹೆಗಾರರಾದ ವೆಂಕಟಯ್ಯ, ಆಯುಕ್ತ ಡಾ. ರವಿಕುಮಾರ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ನಾಗಲಾಂಬಿಕ ದೇವಿ ಮತ್ತಿತರು ಅವರು ಉಪಸ್ಥಿತರಿದ್ದರು.

error: Content is protected !!