December 25, 2024

Newsnap Kannada

The World at your finger tips!

jameer

ಮುಂದಿನ CM ಸಿದ್ದರಾಮಯ್ಯ ಎಂದ ಜಮೀರ್​ಗೆ ನೋಟಿಸ್​​: ಎಚ್ಚರಿಕೆ ಕೊಟ್ಟ AICC

Spread the love

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​​ ವಾರ್ನಿಂಗ್​​ ಕ್ಯಾರೇ ಎನ್ನದ ಶಾಸಕ ಜಮೀರ್​​ ಮುಂದಿನ ಸಿಎಂ ಸಿದ್ದರಾಮಯ್ಯ ಎಂದು ಪದೇ ಪದೇ ಪ್ರಸ್ತಾಪ ಮಾಡುತ್ತಲೇ ಇದ್ದಾರೆ. ಹೀಗಾಗಿ ಈ ಕುರಿತಂತೆ ಚಕಾರ್ ಎತ್ತದಂತೆ ಜಮೀರ್​ಗೆ ಆಲ್​​ ಇಂಡಿಯಾ ನ್ಯಾಷನಲ್​ ಕಾಂಗ್ರೆಸ್​ (AICC )ನಿಂದಲೇ ನೋಟಿಸ್​ ಬಂದಿದೆ.

jamir notice

ಶಾಸಕ ಜಮೀರ್​​ ಅಹ್ಮದ್​ ಖಾನ್​​ಗೆ ಕರ್ನಾಟಕ ರಾಜ್ಯ ಕಾಂಗ್ರೆಸ್​ ಉಸ್ತುವಾರಿ ರಣದೀಪ್​ ಸುರ್ಜೇವಾಲಾ ನೋಟಿಸ್​ ನೀಡಿ ಮತ್ತೊಮ್ಮೆ ಪಕ್ಷದ ಶಿಸ್ತು ಉಲ್ಲಂಘಿಸಬಾರದು ಎಂದು ಎಚ್ಚರಿಸಿದ್ದಾರೆ.

ಹೈಕಮಾಂಡ್​ ನಿರ್ಧಾರ ಮಾಡುವ ತನಕ ಮುಂದಿನ ಸಿಎಂ ಯಾರು ಎಂಬ ಬಗ್ಗೆ ಯಾವುದೇ ಕಾರಣಕ್ಕೂ ಹೇಳಿಕೆ ಕೊಡಬಾರದು. ಮತ್ತೊಮ್ಮೆ ಕಾಂಗ್ರೆಸ್​ ಪಕ್ಷದ ಶಿಸ್ತು ಉಲ್ಲಂಘಿಸಿದರೆ, ಕ್ರಮ ತೆಗೆದುಕೊಳ್ಳಲಾಗುವುದು ಎಂದು ವಾರ್ನಿಂಗ್​ ನೀಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!