April 12, 2026

Newsnap Kannada

The World at your finger tips!

police

ಸಿಡಿ ಸಂತ್ರಸ್ತೆ ಯುವತಿಗೂ ವಿಚಾರಣೆಗೆ ಬರುವಂತೆ ಕಬ್ಬನ್ ಪಾಕ್೯ ಪೋಲಿಸರಿಂದ ನೋಟೀಸ್

Spread the love

ಮಾಜಿ ಸಚಿವರೊಬ್ಬರ ವಿರುದ್ಧದ ಸಿಡಿ ಬಿಡುಗಡೆ ಪ್ರಕರಣದ ಸಂತ್ರಸ್ತೆ ಎನ್ನಲಾದ ಯುವತಿಗೆ ಕಬ್ಬನ್ ಪಾರ್ಕ್ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.

ಶೀಘ್ರದಲ್ಲೇ ತನಿಖಾಧಿಕಾರಿ ಮುಂದೆ ಹಾಜರಾಗುವಂತೆ ಯುವತಿಗೆ ಸೂಚಿಸಲಾಗಿದೆ.

ಈಗ ಆಕೆಯ ಮನೆ, ಪಿಜಿ ಹಾಗೂ ಸ್ನೇಹಿತರಿಗೆ ಪೊಲೀಸರು ನೋಟಿಸ್ ತಲುಪಿಸಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.

ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಎನಿಸಿಕೊಂಡಿರುವ ಯುವತಿ ನಿನ್ನೆ ದಿಢೀರ್ ಪ್ರತ್ಯಕ್ಷವಾಗಿ, ರಕ್ಷಣೆ ಕೋರಿ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಯುವತಿಯ ಕುಟುಂಬಕ್ಕೆ ಜೀವ ಭಯವಿರುವುದು ಗಮನಕ್ಕೆ ಬಂದಿದೆ. ಆಕೆಗೆ ಸೂಕ್ತ ಭದ್ರತೆ ಒದಗಿಸಲು ಎಸ್ಐಟಿ ಮುಖ್ಯಸ್ಥರಿಗೆ ಸೂಚಿಸಿದ್ದೇನೆ ಅಂತಾ ಹೇಳಿದ್ದಾರೆ.

error: Content is protected !!