February 22, 2026

Newsnap Kannada

The World at your finger tips!

dharshan1

ರೆಕ್ಕೆ ಮಾತ್ರವಲ್ಲ ತಲೆನೇ ಕಟ್ ಮಾಡೋನು ನಾನು – ದರ್ಶನ್

Spread the love

ನನ್ನ ದಾಖಲೆಗಳು ಫೋರ್ಜರಿ ಆಗಿದೆ ಎಂದು ನನ್ನ ಗಮನಕ್ಕೆ ಬಂದಿತ್ತು. ನಕಲಿ ಬ್ಯಾಂಕ್ ಮ್ಯಾನೇಜರ್ ಅವರನ್ನು ಯಾರು ಪರಿಚಯ ಮಾಡಿದ್ರು?, ಹೇಗೆ ಪರಿಚಯ ಮಾಡಿದರು ಅಂತಾ ಎಲ್ಲವೂ ತನಿಖೆಯಲ್ಲಿ ಗೊತ್ತಾಗಲಿದೆ ಎಂದು ನಟ ದರ್ಶನ್​ ತಿಳಿಸಿದರು.

ಎನ್‌.ಆರ್‌. ಮೊಹಲ್ಲಾ ಎಸಿಪಿ ಕಚೇರಿಯಲ್ಲಿ ವಿಚಾರಣೆ ಮುಗಿಸಿ ಹೊರಬಂದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ದರ್ಶನ್, ಇಂದು ಪೊಲೀಸರು ವಿಚಾರಣೆಗೆ ಬನ್ನಿ ಅಂತಾ ಕರೆದಿದ್ದರು. ಅದಕ್ಕೆ ಬಂದಿದ್ದೇನೆ‌. ನಕಲಿ ಬ್ಯಾಂಕ್ ಮ್ಯಾನೇಜರ್ ಅವರನ್ನು ಯಾರು ಪರಿಚಯ ಮಾಡಿದರು. ಹೇಗೆ ಪರಿಚಯ ಮಾಡಿದರು. ಅಂತಾ ಎಲ್ಲವೂ ಗೊತ್ತಾಗಲಿದೆ ಎಂದರು.

ನಿಮ್ಮ ಸ್ನೇಹಿತರಿಂದಲೇ ಮೋಸ ಆಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ದರ್ಶನ್, ಯಾರಾದರೂ ಸರಿ ನಾನು ಬಿಡಲ್ಲ. ಆ ತರ ಬಂದಾಗ ನಾನು ರೆಕ್ಕೆ ಕಟ್ ಮಾಡಲ್ಲ, ತಲೆನ್ನೇ ಕಟ್ ಮಾಡುವವನು ನಾನು. ಪೊಲೀಸ್​ ವಿಚಾರಣೆಯ ನಂತರ ಸತ್ಯಾಂಶ ಹೊರಬರಲಿದೆ. ನಾನು ಕಥೆ ಹೇಳಿದರೆ ಚೆನ್ನಾಗಿರುವುದಿಲ್ಲ ಎಂದು ಗುಡುಗಿದರು.

error: Content is protected !!