ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಂಗ್ ಜಾನ್ ಉನ್ ತನ್ನ ದೇಶದ ಹೊಸ ಖಂಡಾಂತರ ಕ್ಷಿಪಣಿ(ಇಂಟರ್ ಕಾಂಟಿನೆಂಟಲ್ ಬ್ಯಾಲಾಸ್ಟಿಕ್ ಮಿಸೈಲ್)ಯನ್ನು ರಾಜಧಾನಿ ಪ್ಯೊಂಗ್ಯಾಂಗ್‌ನಲ್ಲಿ ಮೆರವಣಿಗೆ ಮಾಡಿದ್ದಾನೆ. ಇದರ ಮೂಲಕ ಪ್ರಪಂಚಕ್ಕೆ ದಿಟ್ಟ ಎಚ್ಚರಿಕೆಯನ್ನೂ ನೀಡಿದ್ದಾನೆ.
ಜಾನ್ ಉನ್ ಈ ಕ್ಷಿಪಣಿಯನ್ನು ನಿರ್ಮಾಣ ಮಾಡಿರುವುದೇ ರಷ್ಯಾದಲ್ಲಿರುವ ಅಮೇರಿಕಾದ ಪ್ರದೇಶವಾದ ಅಲಸ್ಕಾದ ಮೇಲೆ ಉಡಾಯಿಸಲು ಎಂದು ಹೇಳಲಾಗುತ್ತಿದೆ.
ಪ್ರಪಂಚದ ಹಲವು ದೇಶಗಳ ಬಳಿ ಖಂಡಾಂತರ ಕ್ಷಿಪಣಿಗಳಿವೆ. ಆದರೆ ಕಿಂಗ್ ಜಾನ್ ಉನ್ ನಿರ್ಮಾಣದ ಈ ಕ್ಷಿಪಣಿಯ ವಿಶಿಷ್ಟತೆಯೇ ಬೇರೆ ಇದೆ. ಕ್ಷಿಪಣಿಯನ್ನು ದ್ರವ ರೂಪದ ಅನಿಲವನ್ನು ತುಂಬಿಸಬಹುದು. ಈ ಕ್ಷಿಪಣಿಯನ್ನು ಒಂದೇ ಬಾರಿಗೆ 3-4 ಶತ್ರು ದೇಶಗಳ ಪ್ರದೇಶಗಳನ್ನು ನಾಶ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಜಗತ್ತಿನ ಕೆಲವೇ ದೇಶಗಳ ಬಳಿ ಈ ತರಹದ ಕ್ಷಿಪಣಿಗಳಿವೆ. ಒಂದು ವೇಳೆ ಇದೇ ಕ್ಷಿಪಣಿಯನ್ನು ಅಮೇರಿಕಾ ತಯಾರು ಮಾಡಿದ್ದರೆ ಸುಮಾರು 7,000 ಕೋಟಿ, ಅಂದರೆ 1 ಬಿಲಿಯನ್ ಡಾಲರ್‌ನ್ನು ಖರ್ಚು ಮಾಡಬೇಕಿತ್ತು. ಆದರೆ ಉತ್ತರ ಕೊರಿಯಾ ಇದನ್ನು ಕೇವಲ 1,000 ಕೋಟಿಗೂ ಕಡಿಮೆ ವೆಚ್ಛದಲ್ಲಿ ತಯಾರು ಮಾಡಿದೆ ಎನ್ನಲಾಗುತ್ತಿದೆ.
ಅಲಸ್ಕಾ ಗುರಿ? ಎಲ್ಲಿದೆ ಈ ಪ್ರದೇಶ?
ಜಾನ್ ಉನ್ ಈ ಕ್ಷಿಪಣಿಯನ್ನು ತಯಾರು ಮಾಡಿರುವುದೇ ಅಲಸ್ಕಾದ ಮೇಲೆ ಉಡಾಯಿಸಲು ಎಂದು ಹೇಳಲಾಗುತ್ತಿದೆ.
ಅಲಸ್ಕಾವು ರಷ್ಯಾದ ರಾಜ ವಂಶಕ್ಕೆ ಸೇರಿದ ಪ್ರದೇಶವಾಗಿತ್ತು. 1867 ರಲ್ಲಿ ಅಮೇರಿಕಾ ಈ ಪ್ರದೇಶವನ್ನು 7.2 ಮಿಲಿಯನ್ ಡಾಲರ್ ಕೊಟ್ಟು ಖರೀದಿ ಮಾಡಿತ್ತು. (ಈಗಿನ ಲೆಕ್ಕದಲ್ಲಿ ಸುಮಾರು 132 ಮಿಲಿಯನ್ ಡಾಲರ್). ಈಗ ಅಮೇರಿಕ ಈ ಪ್ರದೇಶವನ್ನು ಜಲಗಡಿ ಹಾಗೂ ವಾಯುಗಡಿ ರಕ್ಷಣೆಗಾಗಿ ಬಳಕೆ ಮಾಡಿಕೊಳ್ಳುತ್ತಿದೆ. ಇದೇ ಪ್ರದೇಶದ ಮೇಲೆ ಕಿಂಗ್ ಜಾನ್ ಉನ್ ಖಂಡಾಂತರ ಕ್ಷಿಪಣಿಯನ್ನು ಉಡಾಯಿಸಲು ಯೋಜಿಸಿರುವುದು.
ಆದರೆ ಜಾನ್ ಉನ್‌ನ ಆಸೆ, ಉದ್ದೇಶ ಅಷ್ಟು ಸುಲಭವಾಗಿ ಈಡೇರುವಂಥದ್ದಲ್ಲ. ಈ ಕ್ಷಿಪಣಿಯನ್ನು ಉಡಾಯಿಸುವಲ್ಲಿ ಅನೇಕ ತಾಂತ್ರಿಕ ತೊಂದರೆಗಳೂ ಇವೆ. ಉಡಾಯನ ಮಾಡುವ ಪ್ರದೇಶದಲ್ಲಿ ಟ್ರಕ್‌ಗಟ್ಟಲೇ ದ್ರವ ರೂಪದ ಅನಿಲವನ್ನು ತುಂದು ತುಂಬಿಸಲು ಸಾಧ್ಯವಿಲ್ಲ. ಇದಕ್ಕೆ ಅನೇಕ ಪೂರ್ವ ಸಿದ್ಧತೆ ಬೇಕು. ಅಲ್ಲದೇ ಬೇರೆ ರಾಷ್ಟ್ರಗಳೂ ಸಹ ಇದಕ್ಕೆ ಸಹಕರಿಸುವುದು ಅನುಮಾನವೇ ಇದೆ. ಒಂದು ವೇಳೆ ಜಾನ್ ಉನ್ ಈ ಉಡಾಯಿಸಿದ್ದೇ ನಿಜವಾದಲ್ಲಿ ಮೂರನೇ ಮಹಾಯುದ್ಧ ನಡೆಯುವುಮದು ಖಂಡಿತ ಎಂದು ಹೇಳಲಾಗುತ್ತಿದೆ.
More Stories
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಆಯೋಧ್ಯೆ ರಾಮಮಂದಿರಕ್ಕೆ ಸ್ಫೋಟದ ಬೆದರಿಕೆ: ಆರ್ಡಿಎಕ್ಸ್ ಬಳಸಿ ಧ್ವಂಸಗೊಳಿಸುವ ಎಚ್ಚರಿಕೆ
ವಿಧಾನಸಭೆ ಉಪಚುನಾವಣೆ: ನ. 13 ರಂದು ರಾಜ್ಯ ಸರ್ಕಾರದಿಂದ ವೇತನ ಸಹಿತ ರಜೆ ಘೋಷಣೆ