ಆಡಳಿತ ನಡೆಸುತ್ತಿರುವ ಬಿಜೆಪಿಯ ರಾಜ್ಯ ಸರ್ಕಾರದ ಮೇಲೆ ಯಾರಿಗೂ ವಿಶ್ವಾಸವಿಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಸದನದಲ್ಲಿ ಬಿಜೆಪಿ ಆಡಳಿತದ ಬಗ್ಗೆ ಅವಿಶ್ವಾಸ ಮಂಡಿಸಿರುವ ಕುರಿತು ಮಾತನಾಡಿದ ‘ನಾನು ಸದನಕ್ಕೆ ಏಳು ಬಾರಿ ಬಂದಿದ್ದೇನೆ. ಅನೇಕ ಚರ್ಚೆಗಳನ್ನೂ ಗಮನಿಸಿರುವೆ. ಆದರೆ ಜೆ.ಸಿ.ಮಾಧುಸ್ವಾಮಿಯವರು ಸದನದ ದಾರಿ ತಪ್ಪಿಸಿದ್ದು ಶಾಸಕಾಂಗಕ್ಕೆ ಬಹುದೊಡ್ಡ ಕಪ್ಪು ಚುಕ್ಕೆ. ಯಡಿಯೂರಪ್ಪನವರು ಹೋರಾಟದಿಂದ ಅಧಿಕಾರ ಪಡೆದುಕೊಂಡವರು. ಆದರೆ ಇಂದು ಇಂತಹ ಸ್ಥಿತಿ ನಿರ್ಮಾಣ ಆಗುತ್ತದೆ ಎಂದುಕೊಂಡಿರಲಿಲ್ಲ. ನಾನು ಅವರ ಮೇಲೆ ಬಹಳ ವಿಶ್ವಾಸವನ್ನಿಟ್ಟಿದ್ದೆ.
‘ರಾಜ್ಯದ ಜನತೆಗೆ ಬಿಜೆಪಿ ಸರ್ಕಾರದ ಮೇಲೆ ಯಾವುದೇ ವಿಶ್ವಾಸ ಇಲ್ಲ. ಬಿಜೆಪಿಯಲ್ಲಿ ಭ್ರಷ್ಟಾಚಾರ ನಡೆದಿಲ್ಲ ಎಂದು ಒಪ್ಪಲೂ ಸಾಧ್ಯವಿಲ. ಹಾಗಾಗಿ ನಾವು ಮಂಡಿಸಿರುವ ಅವಿಶ್ವಾಸ ನಿರ್ಣಯ ಕಾಂಗ್ರೆಸ್‌ದ್ದಲ್ಲ. ರಾಜ್ಯದ ಜನರದ್ದು’ ಎಂದು ತೀಸಿದರು.
‘ಕೋವಿಡ್ ಸಂದರ್ಭದಲ್ಲಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿತ್ತು. ಆದರೆ ಆ ಪ್ಯಾಕೇಜ್ ಬಡವರು, ಶ್ರಮಿಕರು, ರೈತರು, ಕಾರ್ಮಿಕರು ಹೀಗೆ ಯಾರನ್ನೂ ಸರಿಯಾಗಿ ತಲುಪಿಲ್ಲ. ಅಲ್ಲದೇ ಸದನದಲ್ಲಿರುವ 60-70 ಜನಕ್ಕೆ ಪ್ರಸದತುತ ಸರ್ಕಾರದ ಮೇಲೆ ವಿಶ್ವಾಸವಿಲ್ಲ. ಇನ್ನು ರಾಜ್ಯದ ಜನರಿಗೆ ಎಲ್ಲಿಂದ ವಿಶ್ವಾಸ ಬರುತ್ತದೆ?’ ಎಂದು ಪ್ರಶ್ನಿಸಿದ್ದಾರೆ.
ಸರ್ಕಾರದ ಈ ಪ್ರಜಾವಿರೋಧಿ ಧೋರಣೆಗಳಿಂದ ರೈತರು ಯುವಕರು, ಮಹಿಳೆಯರು, ವಿದ್ಯಾರ್ಥಿಗಳು, ತಂದೆ-ತಾಯಿಯರಿಗೆ, ಕಾರ್ಮಿಕರಿಗೆ, ಶ್ರಮಿಕರಿಗೆ, ವೈದ್ಯಕೀಯ ಸಿಬ್ಬಂದಿಗೆ ಈ ಸರ್ಕಾರದ ಬಗ್ಗೆ ವಿಶ್ವಾಸ ಇಲ್ಲ ಎಂದರು.
More Stories
ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತೆರಳುತ್ತಿದ್ದ ಕಾರು ಅಪಘಾತ
ರಾಜ್ಯದಲ್ಲಿ ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ದಿನಾಂಕ ನಿಶ್ಚಿತ