December 24, 2024

Newsnap Kannada

The World at your finger tips!

shivaram habbar

ಬ್ರಾಹ್ಮಣರಿಗೆ ಮೀಸಲಾತಿ ಬೇಡ, ಅವಶ್ಯಕತೆಯೂ ಇಲ್ಲ: ಸಚಿವ ಶಿವರಾಮ್‌ ಹೆಬ್ಬಾರ್

Spread the love

ಬ್ರಾಹ್ಮಣರಿಗೆ ಮೀಸಲಾತಿಯೂ ಬೇಡ, ಅವಶ್ಯಕತೆಯಿಲ್ಲ ಎಂದು ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್ ಅಭಿಪ್ರಾಯಪಟ್ಟರು.

ಮೈಸೂರಿನ ಬಿಜೆಪಿ ಕಚೇರಿಗೆ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಶಿವರಾಂ ಹೆಬ್ಬಾರ್‌ ಬ್ರಾಹ್ಮಣರಿಗೆ ಮೀಸಲಾತಿ ಕೊಡಿ ಎಂದು ನಾವು ಕೇಳುವುದಿಲ್ಲ, ಕೇಳುವ ಅವಶ್ಯಕತೆಯೂ ಇಲ್ಲ. ಸಮಾಜದಲ್ಲಿರುವ ಎಲ್ಲರೂ ಮೀಸಲಾತಿಯನ್ನು ಪಡೆಯುತ್ತಾ ಹೋದರೆ ಬ್ರಾಹ್ಮಣರಿಗೆ ಉದ್ಯೋಗ ಸಿಗಲಿದೆ, ಅಷ್ಟೇ ಸಾಕು‌ ಎಂದು ಹೇಳಿದರು.

ಅಯೋಧ್ಯೆಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಿಸುವ ಕುರಿತಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜಕೀಯ ಕಾರಣಕ್ಕಾಗಿ ಟೀಕೆ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದರು.

ಬಿಜೆಪಿ ಮೈಸೂರು ನಗರ ಘಟಕದ ಅಧ್ಯಕ್ಷ ಟಿ.ಎಸ್.ಶ್ರೀವತ್ಸ, ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸಹ ಸಂಚಾಲಕ ಗಿರೀಶ್, ಬಿಜೆಪಿ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಮೈಸೂರು ನಗರ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್, ಸತೀಶ್, ಜಯರಾಂ ಇನ್ನಿತರರು ಹಾಜರಿದ್ದರು.

Copyright © All rights reserved Newsnap | Newsever by AF themes.
error: Content is protected !!