ಮಂಗಳವಾರ ನಡೆದ ವಿಧಾನಸಭಾ ಅಧಿವೇಶನದಲ್ಲಿ, ಇಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಯಶವಂತರಾಯಗೌಡ ವಿ. ಪಾಟೀಲ್, ತಮ್ಮ ಕ್ಷೇತ್ರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ಕುರಿತು ಉತ್ತರಿಸಿದ ಸಚಿವ ಕೃಷ್ಣ ಬೈರೇಗೌಡ, “ಜನಗಣತಿ ನಡೆಯುವ ಸಮಯದಲ್ಲಿ ಯಾವುದೇ ರಾಜ್ಯ ಹೊಸ ಕಂದಾಯ ಜಿಲ್ಲೆ ಘೋಷಿಸಬಾರದು ಎಂದು ಕೇಂದ್ರ ಸರ್ಕಾರದ ನಿಯಮವಿದೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರದ ಮುಂದೆಯೂ ಹೊಸ ಜಿಲ್ಲೆ ಅಥವಾ ಹೊಸ ತಾಲೂಕು ರಚನೆ ಸಂಬಂಧ ಯಾವುದೇ ಪ್ರಸ್ತಾವನೆ ಇಲ್ಲ” ಎಂದು ಸ್ಪಷ್ಟಪಡಿಸಿದರು.ಇದನ್ನು ಓದಿ –ಭೂಕಬಳಿಕೆ ಪ್ರಕರಣ: ಸಚಿವ ಚೆಲುವರಾಯಸ್ವಾಮಿಗೆ ಬಿಗ್ ರಿಲೀಫ್
ತಾವು ಮುಂದುವರಿಯುತ್ತಾ, “ಒಂದೆರಡು ತಾಲೂಕುಗಳನ್ನು ಜಿಲ್ಲೆಗಳಾಗಿ ಪರಿಗಣಿಸುವ ಕುರಿತು ಕೆಲವೊಂದು ಬೇಡಿಕೆಗಳು ಬಂದಿವೆ. ಭವಿಷ್ಯದಲ್ಲಿ ಈ ಸಂಬಂಧ ಯಾವುದೇ ಅವಕಾಶಗಳು ಎದುರಾದರೆ, ಖಂಡಿತವಾಗಿಯೂ ಇಂಡಿ ತಾಲೂಕನ್ನು ಪರಿಗಣಿಸಲಾಗುವುದು” ಎಂದು ಭರವಸೆ ನೀಡಿದರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು