ಇಲ್ಲಿ ಯಾರೂ ಸತ್ಯಹರಿಶ್ಚಂದ್ರ ಅಲ್ಲಾ. ನಾನು ಒಮ್ಮೆ ತಪ್ಪು ಮಾಡಿದ್ದೇನೆ ಎಂದು ಧೈರ್ಯವಾಗಿಯೇ ಹೇಳಿದ್ದೇನೆ ಅಂತ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ
ಸದನದಲ್ಲಿ ಅನಗತ್ಯ ಚರ್ಚೆಗಳೇ ನಡೆಯುತ್ತಿದೆ. ಆದ್ದರಿಂದಲೇ ನಾನು ಸದನಕ್ಕೆ ಗೈರು ಹಾಜರಾಗಿದ್ದೇನೆ ಎಂದರು.
ಸದನದಲ್ಲಿ ಬಟ್ಟೆ, ರಾಜೀನಾಮೆ, ಚುನಾವಣೆ ಬಗ್ಗೆ ಮಾತ್ರ ಮಾತನಾಡುತ್ತಿದ್ದಾರೆ. ಆದರೆ ರಾಜ್ಯದ ನೈಜ ಸಮಸ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ. ಸಿ.ಡಿ ವಿಚಾರದ ಬಗ್ಗೆ ಚರ್ಚೆ ಮಾಡೋದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಇದೇ ವೇಳೆ ವಿರೋಧ ಪಕ್ಷದ ನಾಯಕರೆಲ್ಲ ಶ್ರೀರಾಮಚಂದ್ರರೇ? ಎಲ್ಲರ ವಿರುದ್ಧವೂ ತನಿಖೆಯಾಗಲಿ ಎಂಬ ಸಚಿವ ಸುಧಾಕರ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ, ನಾನು ಒಂದು ಬಾರಿ ಎಡವಿದ್ದೇನೆ. ಸಚಿವರು ತಪ್ಪು ಮಾಡಿಕೊಂಡಿದ್ದಾರೆ. ಇವರು ಯಾಕೆ ಕೋರ್ಟಿಗೆ ಹೋಗಬೇಕಾಯಿತು..? ಇವರೇ ಸಮಸ್ಯೆಗಳನ್ನು ಉದ್ಭವ ಮಾಡಿಕೊಂಡಿದ್ದಾರೆ. ಹೀಗಿರುವಾಗ ಬೇರೆಯವರ ಮೇಲೆ ಯಾಕೆ ರಾಡಿ ಎರಚುತ್ತಾರೆ. ಇಲ್ಲಿ ಯಾರೂ ಸತ್ಯಹರಿಶ್ಚಂದ್ರ ಅಲ್ಲ. ನಾನು ಧೈರ್ಯವಾಗಿಯೇ ಹೇಳಿದ್ದೇನೆ. ನಾನು ಒಮ್ಮೆ ತಪ್ಪು ಮಾಡಿದ್ದೇನೆ ಎಂದರು.
- ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
- ಬಿಜೆಪಿಯಿಂದ ಪ್ರತಾಪ್ ಸಿಂಹ ಉಚ್ಛಾಟನೆಗೆ ಆಗ್ರಹ: ಪಕ್ಷ ತೊರೆಯಲಿದ್ದಾರಾ ಮಾಜಿ ಸಂಸದ?
- ಶಾಸಕ ಡಾ. ಚಂದ್ರು ಲಮಾಣಿ ಅವರ ಕಾರು ಚಾಲಕ ಆತ್ಮಹತ್ಯೆ
- ಮರಕ್ಕೆ ಕಾರು ಡಿಕ್ಕಿ: ಸ್ಥಳದಲ್ಲೇ ಇಬ್ಬರ ದುರ್ಮರಣ
- ಬ್ಯಾಂಕ್ ಆಫ್ ಬರೋಡಾ: 1267 ಹುದ್ದೆಗಳಿಗೆ ಅರ್ಜಿ ಆಹ್ವಾನ
More Stories
ನಾನು ದೇವರಲ್ಲ, ನಾನೂ ಸಹ ತಪ್ಪು ಮಾಡಿದ್ದೇನೆ: ನಮೋ
ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
ಅಮಿತ್ ಶಾ ಹೇಳಿಕೆ ವಿರೋಧಿಸಿ ಮೈಸೂರು-ಮಂಡ್ಯ ಬಂದ್: ವಾಹನ ಸಂಚಾರಕ್ಕೆ ಅಡಚಣೆ