December 23, 2024

Newsnap Kannada

The World at your finger tips!

mandya , news , politics

ಲಾಕ್ ಡೌನ್ ಇಲ್ಲ : ವೀಕೆಂಡ್​ ಕರ್ಫ್ಯೂ ಸಡಿಲಿಕೆ ಬಗ್ಗೆ ಜ.21 ರಂದು ನಿರ್ಧಾರ – ಆರ್ ಅಶೋಕ್​

Spread the love

ಜನವರಿ 21ರ ಶುಕ್ರವಾರದ ಬಳಿಕ ವೀಕೆಂಡ್ ಲಾಕ್​​ಡೌನ್​ ಸಡಿಲಗೊಳಿಸುವ ಬಗ್ಗೆ ತೀರ್ಮಾನ ಮಾಡುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಲಾಕ್​ಡೌನ್ ಇಲ್ಲ.

ಹೆಚ್ಚುತ್ತಿರುವ ಕೋವಿಡ್​ ಸೋಂಕು ನಿಯಂತ್ರಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ತಜ್ಞರ ಸಭೆಯ ಬಳಿಕ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಆರ್​​.ಅಶೋಕ್ ಅವರು, ಜನವರಿ 24 ಅಥವಾ 25ನೇ ತಾರೀಖಿನಿಂದ ಕೋವಿಡ್​ ಕೇಸ್​​ಗಳು ಗರಿಷ್ಠ ಮಟ್ಟವನ್ನು ತಲುಪುವ ಸಾಧ್ಯತೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಹೀಗಾಗಿ ಶುಕ್ರವಾರದ ವರೆಗೂ ಕಾಯ್ದು ಆ ಬಳಿಕ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು ಎಂದರು.

ತಿಂಗಳ ಅಂತ್ಯದವರೆಗೆ ಈ ಮೊದಲಿನ ನಿಯಮಗಳೇ ಯಥಾವತ್ತಾಗಿ ಮುಂದುವರೆಸಲಾಗುವುದು. ಜೊತೆಗೆ ಸದ್ಯಕ್ಕೆ ಲಾಕ್​ಡೌನ್​ ಇಲ್ಲ. ಶುಕ್ರವಾರ ಮತ್ತೊಂದು ಸಭೆಯಿದ್ದು ಅಲ್ಲಿ ಇವರೆಗಿನ ಪರಿಸ್ಥಿತಿ ಅವಲೋಕಿಸಿ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!